ಬೆಂಗಳೂರು(ನ.15): ಮಾದಕ ವಸ್ತು ಪ್ರಕರಣ ಸಂಬಂಧ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ರಗಳೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

"

‘ಜೈಲಿನಲ್ಲಿ 50 ದಿನಗಳಿಂದ ಇದ್ದೇವೆ. ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಈಗಲಾದರೂ ಪೋಷಕರನ್ನು ಭೇಟಿಯಾಗಲು ಅವಕಾಶ ಕೊಡಿ’ ಎಂದು ಅಧಿಕಾರಿಗಳಿಗೆ ನಟಿಯರು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿದ ಅಧಿಕಾರಿಗಳು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೊರಗಿನವರ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ. 

ಡ್ರಗ್ಸ್‌ ಮಾಫಿಯಾ: ಡ್ರಗ್ಗಿಣಿಯರ ಜೊತೆ ನಂಟು, ಮತ್ತೊಬ್ಬ ಕಿಂಗ್‌ಪಿನ್‌ಗಾಗಿ ಶೋಧ

ಈ ಮಾತಿನಿಂದ ಮತ್ತಷ್ಟು ಕ್ರುದ್ಧರಾದ ನಟಿಯರು, ‘ನಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿಯನ್ನು ಕೊಡಿಸಿ’ ಎಂದು ಪಟ್ಟು ಹಿಡಿದು ರಾದ್ಧಾಂತ ಮಾಡಿದ್ದಾರೆ. ಕೊನೆಗೆ ಅಧಿಕಾರಿಗಳು, ಜೈಲಿನಲ್ಲಿ ಹಬ್ಬಕ್ಕೆ ಸಿಹಿ ಮಾಡಿಸಲಾಗುತ್ತದೆ ಎಂದು ಶಾಂತಗೊಳಿಸಿದ್ದಾರೆ ಎನ್ನಲಾಗಿದೆ.