ಬೆಂಗಳೂರು, [ಮೇ.28]:  ದಶಮುಕ ಸಾಮಾಜಿಕ ಟ್ರಸ್ಟ್‌ [ರಿ] ಬೆಂಗಳೂರು ವತಿಯಿಂದ ನಾಟಿ ಕೋಳಿ ಸಾಂಬಾರ್‌ ಜತೆ ರಾಗಿಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.

ಇದೇ ಜೂನ್ 6 ರಂದು [ಬುಧವಾರ]  ಬೆಂಗಳೂರಿನ ಕನಕಪುರ ರಸ್ತೆಯ ಯಡಿಯೂರು ಕೆರೆ ಎದುರು, ಜಯನಗರ 7ನೇ ಬಡಾವಣೆಯ ಬಿಬಿಎಂಪಿ ಸಮುದಾಯ ಭವನದಲ್ಲಿ ಸ್ಪರ್ಧೆ ನಡೆಯಲಿದೆ.

ರಾಜ್ಯದ ಮಟ್ಟದ ಸ್ಪರ್ಧೆಯಾಗಿದ್ದು, ಉಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ವಿಶೇಷ ಅಂದ್ರೆ ಸ್ಪರ್ಧೆ ನಡೆಯುವ ದಿನ ಬೆಳಗ್ಗೆ 11ರಿಂದ 12.30ರವರೆಗೆ ನುರಿತ ರಾಗಿ ತಜ್ಞರಿಂದ ರಾಗಿ ಗಂಜಿ ಮತ್ತು ಮುದ್ದೆ ಸೇವನೆಯಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ಸಹ ಏರ್ಪಡಿಸಲಾಗಿದೆ. 

ವಿಜೇತರಿಗೆ ಬಹುಮಾನ
ಪ್ರಥಮ ಸ್ಥಾನ: 15,000ರೂ. ಮತ್ತು ಪ್ರಶಸ್ತಿ ಪತ್ರ.
ದ್ವಿತೀಯ ಸ್ಥಾನ: 10,000ರೂ ಮತ್ತು ಪ್ರಶಸ್ತಿ ಪತ್ರ.
ತೃತೀಯ ಸ್ಥಾನ: 5000ರೂ. ಮತ್ತು ಪ್ರಶಸ್ತಿ ಪತ್ರ.

ಆಸಕ್ತ ಹೊಟ್ಟೆಬಾಕರಿಗಾಗಿ ಇದೊಂದು ಒಳ್ಳೆ ಅವಕಾಶ ಇದೆ. ಮಿಸ್ ಮಾಡ್ಕೋಬೇಡಿ.