ವಿಜಯಪುರ(ಸೆ.06):  ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಯುವಕನೊಬ್ಬ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. 

ಅಂಬೇಡ್ಕರ್‌ ಹಾಗೂ ಅಂಬೇಡ್ಕರವರ ಕಾನೂನುಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿದರೆ ಮನೆ ಹೊಕ್ಕು ಕಡಿಯುವುದಾಗಿ ಯುವಕನೊಬ್ಬ ಕೊಲೆ ಬೆದರಿಕೆ ಒಡ್ಡಿದ ವಿಡಿಯೋ ವೈರಲ್‌ ಆಗಿತ್ತು.

'ಪೊಲೀಸ್ ಠಾಣೆಯಲ್ಲೇ ಶಾಸಕ ಯತ್ನಾಳ್‌ಗೆ ಕೊಲೆ ಬೆದರಿಕೆ'

ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತರಾಗಿ ತಪ್ಪಿತಸ್ಥನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಣ್ಣಿಗೇರಿ ಮನವಿ ಮಾಡಿದ್ದಾರೆ.