ವಿಜಯಪುರ (ಸೆ.04): ಹಾಡಹಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ. 

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಮಾತನಾಡಿದರೆ ಮನೆ ಹೊಕ್ಕು ಕತ್ತರಿಸುತ್ತೇನೆ ಎಂದು ವಿಜಯಪುರದ ಗೋಳ ಗುಮ್ಮಟ ಪೊಲೀಸ್ ಠಾಣೆಯಲ್ಲೇ ಬೆದರಿಕೆ ಹಾಕಲಾಗಿದೆ.

ರಾಘು ಕಣಮೇಶ್ವರ ಎಂಬಾತನಿಂದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೊಲೆ ಬೆದರಿಕೆ ಬಂದಿದ್ದು, ಬಾಬಾ ಸಾಹೇಬರ ಕಾನೂನು ಬಗ್ಗೆ ಏನಾದರು ಮಾತನಾಡಿದ್ರೇ ಮನೆ ಹೊಕ್ಕು ಕಡೆಯುತ್ತೇನೆ ಎಂದು ಹೇಳಿದ್ದಾನೆ. 

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಪ್ರಭಾವಿ ಶಾಸಕನ ಬರ್ತಡೆ ಪಾರ್ಟಿಯಲ್ಲಿ ಡ್ರಗ್ಸ್ ಆಟ! ..

ನ್ಯಾಯವಾದಿ ಎಸ್.ಎಸ್. ಖಾದ್ರಿ ಠಾಣೆಗೆ ತಮ್ಮ ಬೆಂಬಲಿಗರೊಂದಿಗೆ ಹಾಜರಾಗಲು ಬಂದಾಗ ಈ ರೀತಿ ಬೆದರಿಕೆ ಒಡ್ಡಲಾಗಿದೆ. 

ನಿನ್ನೆ ಶಾಸಕ ಯತ್ನಾಳ್ ವಿರುದ್ಧ ವಕೀಲ ಎಸ್ ಎಸ್ ಖಾದ್ರಿ ಮಾತನಾಡಿದ್ದು, ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿತ್ತು.  ಈ ಹಿನ್ನೆಲೆ ಠಾಣೆಗೆ ಶರಣಾಗಲು ವಕೀಲ ಖಾದ್ರಿ ಬಂದಾಗ ಅವರ ಜೊತೆ ಬಂದಿದ್ದ ವ್ಯಕ್ತಿ ಯತ್ನಾಳ್‌ಗೆ ಬೆದರಿಕೆ ಒಡ್ಡಿದ್ದಾನೆ.