ದಾವಣಗೆರೆ (ಜ.17): ಪಂಚಮಸಾಲಿ ಸಮಾಜಕ್ಕೆ ನಾಲ್ಕು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದ ವಚನಾನಂದ ಸ್ವಾಮೀಜಿ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಮಠ ಬಿಟ್ಟು ರಾಜಕೀಯಕ್ಕೆ ಬನ್ನಿ ಎಂದು ಲಿಂಗಾಯತ ಸಮುದಾಯದಿಂದ ಅಸಮಾಧಾನ ಹೊರಹಾಕಿದ್ದಾರೆ. 

ಕೋಡಲೇ ಪೀಠ ಬಿಟ್ಟು ಕೆಳಗೆ ಇಳಿಯಿರಿ ರಂದು ಸ್ವತಃ ಮಠದ ಶಿಷ್ಯರೇ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಲಿಂಗಾಯತ ಮಹಾಸಭಾ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಸ್ವಾಮೀಜಿ ವಿರುದ್ಧ ಸಂದೇಶಗಳನ್ನು ಹಾಕಿದ್ದು, ಮಹಾಸಭಾ ಜಿಲ್ಲಾಧ್ಯಕ್ಷರು ಸ್ವಾಮೀಜಿಗೆ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ವಚನಸಾಲಿ VS ಬಿಎಸ್‌ವೈ ವಾಕ್ಸಮರ; ಸಿಎಂ ಸಿಟ್ಟಿನ Exclusive Expose ಇದು!..

ಲಿಂಗಾಯತ ಧರ್ಮದ ವಿರುದ್ಧವಾಗಿರುವ ಸ್ವಾಮೀಜಿಯನ್ನು ಮಠದ ಪೀಠದಿಂದ ಕೆಳಕ್ಕೆ ಇಳಿಸಬೇಕು ಎಂದು ವೇದಿಕೆಯಲ್ಲೇ ಮುಖ್ಯಮಂತ್ರಿ ಮುಂದೆ ತಮ್ಮ ಬೇಡಿಕೆ ಮುಂದಿಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. 

ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಸಿಗಲೇಬೇಕು: ಜಯಮೃತ್ಯುಂಜಯ ಸ್ವಾಮೀಜಿ...

ದಾವಣಗೆರೆಯಲ್ಲಿ ಕಳೆದ ಜನವರಿ 14 ರಂದು ನಡೆದ ಪಂಚಮಸಾಲಿ ಮಠದ ಹರ ಜಾತ್ರೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 4 ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ನಮ್ಮ ಸಮಾಜವೇ ನಿಮ್ಮನ್ನು ಕೈ ಬಿಡಲಿದೆ ಎಂದು ಹೇಳಿದ್ದರು.