‘ಗೃಹಲಕ್ಷ್ಮಿ’ಗೆ ಶೀಘ್ರ ಚಾಲನೆ: ಗೃಹ ಸಚಿವ

ಕಳೆದ ನಾಲ್ಕು ವರ್ಷಗಳ ಆಡಳಿತ ವ್ಯವಸ್ಥೆ ವಿಫಲವಾಗಿದ್ದು, ಆಶೋತ್ತರಗಳಿಗೆ ಪ್ರೋತ್ಸಾಹದಾಯಕವಾಗಿಲ್ಲ. ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕ ಕೆಲಸವಾಗಿಲ್ಲ ಎಂಬ ಅಂಶ ಕಂಡು ಬಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದರು.

Quick start for 'Grihalakshmi': Home Minister snr

  ಪಾವಗಡ :  ಕಳೆದ ನಾಲ್ಕು ವರ್ಷಗಳ ಆಡಳಿತ ವ್ಯವಸ್ಥೆ ವಿಫಲವಾಗಿದ್ದು, ಆಶೋತ್ತರಗಳಿಗೆ ಪ್ರೋತ್ಸಾಹದಾಯಕವಾಗಿಲ್ಲ. ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕ ಕೆಲಸವಾಗಿಲ್ಲ ಎಂಬ ಅಂಶ ಕಂಡು ಬಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದರು.

ಅವರು ಶುಕ್ರವಾರ ಪಾವಗಡಕ್ಕೆ ಆಗಮಿಸಿದ್ದು, ತಾಪಂನಲ್ಲಿ ಕೆಡಿಪಿ ಸಭೆ ನಡೆಸಿದ ಬಳಿಕ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನತೆಯ ನಿರೀಕ್ಷೆಗೆ ಅನುಗುಣವಾಗಿ ಕೆಲಸವಾಗಿಲ್ಲ. ಆಹಾರ ಇಲಾಖೆಯ ಪ್ರಗತಿ ಕುರಿತು ಪರಿಶೀಲಿಸಿದಾಗ ಸರಿಯಾದ ಅಂಕಿ ಆಂಶಗಳು ಸಿಗುತ್ತಿಲ್ಲ. ಆದೇ ರೀತಿ ತಾಲೂಕಿನ 24 ಇಲಾಖೆಗಳಲ್ಲಿಯೂ ಸರಿಯಾದ ಆಡಳಿತ ನಿರ್ವಹಣೆ ಸಾಧ್ಯವಾಗಿಲ್ಲ ಎಂದರು.

ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಈಗಾಗಲೇ 54 ಸಾವಿರ ಮಹಿಳೆಯರು ಉಚಿತ ಪ್ರಯಾಣದಲ್ಲಿ ಭಾಗಿಯಾಗಿದ್ದು, ಈ ಕಾರ್ಯಕ್ರಮದಿಂದ ಮಹಿಳೆಯರಿಗೆ ಹೆಚ್ಚು ಅನುಕೂಲ ವಾಗಿದೆ. ಇದೇ ರೀತಿ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಿದ್ದೇವೆ. ಗೃಹಲಕ್ಷ್ಮೀ ಯೋಜನೆಗೆ ತಯಾರಿ ನಡೆಸುತ್ತಿದ್ದು, ಸಾಪ್‌್ಟವೆರ್‌ ಆಳವಡಿಕೆಯ ದೋಷದಿಂದ ವಿಳಂಬವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗೃಹಲಕ್ಷ್ಮೀ ಯೋಜನೆಯ ಮಾಸಿಕ 2 ಸಾವಿರ ಬಿಡುಗಡೆಗೆ ಆನ್‌ಲೈನ್‌ ಅರ್ಜಿ ಸ್ವೀಕರಿಸುವುದಾಗಿ ಹೇಳಿದರು.

ಇದೇ ರೀತಿ ಯುವನಿಧಿ ಪದವಿಗೆ 3 ಸಾವಿರ ಮತ್ತು ಡಿಪ್ಲಮೋ ವಿದ್ಯಾರ್ಥಿಗಳಿಗೆ 2 ಸಾವಿರ ಖಾತೆಗೆ ಜಮಾಗೊಳಿಸುವ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದ ಅವರು ಹೊಸ ಸರ್ಕಾರ ಜಾರಿಯಾದ ಕೂಡಲೇ ಪ್ರಣಾಳಿಕೆಯ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ತಿಳಿಸಿದರು. ಜನತೆಯ ನಿರೀಕ್ಷೆಗೆ ಅನುಗುಣವಾಗಿ ಯೋಜನೆ ರೂಪಿಸಲಿದ್ದು, ಜನತೆಯ ಪ್ರಗತಿ ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

ಬಳಿಕ ಇಲ್ಲಿನ ಪೊಲೀಸ್‌ ಠಾಣೆಗೆ ತೆರಳಿ ಇಲಾಖೆಯ ನಿರ್ವಹಣೆ ಹಾಗೂ ಜನಪರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಹಾಗೂ ವಳ್ಳೂರು ಗ್ರಾಪಂಗಳಿಗೆ ತೆರಳಿ 13 ಸಾವಿರ ಎಕರೆ ರೈತರ ಜಮೀನುಗಳಲ್ಲಿ ನಿರ್ಮಿಸಿದ್ದ ಸೋಲಾರ್‌ ಪಾರ್ಕ್ಗಳನ್ನ ವೀಕ್ಷಿಸಿದರು.

ನಿರ್ವಹಣೆ ಇನ್ನಿತರೆ ಸಮಸ್ಯೆ ಸ್ಥಳೀಯರಿಗೆ ಉದ್ಯೋಗ ಮತ್ತು ಇತರೆ ಅಗತ್ಯಗಳ ಕುರಿತು ರಾಜ್ಯಸೋಲಾರ್‌ ವಿದ್ಯುತ್‌ ಉತ್ಪಾಧನೆಯ ಅಬಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಇದೇ ವೇಳೆ ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ಗೌಡ ಇದ್ದರು.

ಉಳಿಕೆ ಗ್ಯಾರಂಟಿಗೂ ಚಾಲನೆ

ಚುನಾವಣೆ ಪೂರ್ವದಲ್ಲಿ ಭರವಸೆ ನೀಡಲಾಗಿತ್ತು. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೆ ಈ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡುವುದಾಗಿ ಹೇಳಿದ್ದೆವು. ರಾಜ್ಯದ ಜನತೆಯ ಆರ್ಶೀವಾದದ ಮೇರೆಗೆ ಸರ್ಕಾರ ರಚನೆಯಾಗಿದ್ದು, ನುಡಿ ದಂತೆ ನಡೆಯಲಿದ್ದು, ಪ್ರಣಾಳಿಕೆಯ ಭರವಸೆ ಈಡೇರಿಸಲು ತಯಾರಿ ನಡೆಸುತ್ತಿದ್ದೇವೆ. ಸಾಫ್‌್ಟವೇರ್‌ ಸೆಟ್ಟಿಂಗ್‌ ಸಿದ್ಧಪಡಿ ಸುವಲ್ಲಿ ವಿಳಂಬವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಉಳಿಕೆಯ ಗ್ಯಾರಂಟಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದ್ದೇವೆ. ಈಗಾಗಲೇ ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ

Latest Videos
Follow Us:
Download App:
  • android
  • ios