ಉತ್ತರಕನ್ನಡ(ಮೇ 13): ಕ್ವಾರಂಟೈನ್ ಸೀಲ್ ಇದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದ ಕಾರವಾರದಲ್ಲಿ ನಡೆದಿದೆ. ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಹಿರೇಗುತ್ತಿ ಚೆಕ್‌ಪೊಸ್ಟ್ ಬಳಿ ಘಟನೆ ನಡೆದಿದೆ.

ಕರುಣಾಕರ ಶೆಟ್ಟಿ (78), ಹೃದಯಾಘಾತದಿಂದ ಮೃತರಾದ ವ್ಯಕ್ತಿ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಉಡುಪಿಗೆ ಹೊರಟಿದ್ದ ವ್ಯಕ್ತಿ ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

1 ಸಾವಿರ ಟನ್ ಚಿನ್ನ ಹೂತಿಟ್ಟ ಕನಸು ಬಿದ್ದಿದ್ದ ಶೋಭನ್ ಸರ್ಕಾರ್ ನಿಧನ!

ಮೃತ ದೇಹವನ್ನು ಕುಮಟಾ ಸರ್ಕಾರಿ ಆಸ್ಪತ್ರೆ ರವಾನೆ ಮಾಡಲಾಗಿದ್ದು, ಅಂಬ್ಯುಲೆನ್ಸ್ ಸಿಬ್ಬಂದಿ ಹೆಚ್ಚಿನ ಸುರಕ್ಷತೆಯೊಂದಿಗೆ ಮೃತದೇಹ ಕೊಂಡೊಯ್ದಿದ್ದಾರೆ. ವ್ಯಕ್ತಿ ದೇಹದಲ್ಲಿ ಕ್ವಾರೆಂಟೈನ್ ಸೀಲ್ ಇತ್ತು.