ಹೂವಿನಹಡಗಲಿ: 87 ಜನರ ಕ್ವಾರಂಟೈನ್‌ ಕಂಪ್ಲೀಟ್‌, ಬಿಡುಗಡೆ

ಅಂತರಾಜ್ಯ ಮತ್ತು ಅಂತರ್‌ ಜಿಲ್ಲೆಯಿಂದ ಪ್ರಯಾಣ ಮಾಡಿದ ಹಿನ್ನೆಲೆ| 87 ಜನರನ್ನ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿತ್ತು| ವರದಿಯಲ್ಲಿ ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಬಿಡುಗಡೆ| 

Quarantine Complete 87 people released in Huvinahadagali in Ballari District

ಹೂವಿನಹಡಗಲಿ(ಮೇ.27): ತಾಲೂಕಿನ ಮೀರಾಕೋರನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದ ಎಲ್ಲ 87 ಜನರ ಕೋವಿಡ್‌-19 ಪರೀಕ್ಷಾ ವರದಿಯು ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರ ಕ್ವಾರಂಟೈನ್‌ ಅವ​ಧಿ ಪೂರ್ಣಗೊಂಡಿರುವದರಿಂದ ಬಿಡುಗಡೆಗೊಳಿಸಿ ಸ್ವಗ್ರಾಮಗಳಿಗೆ ವಾಹನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಯಿತು.

ತಾಲೂಕು ಆರೋಗ್ಯಾಧಿ​ಕಾರಿ ಬದ್ಯಾನಾಯ್ಕ, ವೈದ್ಯಾಧಿ​ಕಾರಿ ಡಾ. ಶಿವಕುಮಾರ ಮತ್ತು ಅರೋಗ್ಯ ಇಲಾಖೆ ಸಿಬ್ಬಂದಿ ತಾಲೂಕು ಕ್ವಾರಂಟೈನ್‌ ಕೇಂದ್ರದ ನೋಡಲ್‌ ಅ​ಧಿಕಾರಿ, ವಸತಿ ಶಾಲೆಯ ಪ್ರಾಚಾರ್ಯ ಮತ್ತು ನಿಲಯ ಪಾಲಕರು ಉಪಸ್ಥಿತರಿದ್ದರು.

ಬಳ್ಳಾರಿ: ಕೋವಿಡ್‌ ಆಸ್ಪತ್ರೆ ನರ್ಸ್‌ಗೆ ಕೊರೋನಾ ಸೋಂಕು, ಆತಂಕದಲ್ಲಿ ಸಿಬ್ಬಂದಿ

ಕ್ವಾರಂಟೈನ್‌ ಅವ​ಧಿ ಪೂರ್ಣಗೊಳಿಸಿದ ಗೋವಿಂದಪುರ ತಾಂಡಾ 25, ಕೋಮಾರನಹಳ್ಳಿ ತಾಂಡಾ 4, ಕಗ್ಗಲಗಟ್ಟಿತಾಂಡಾ 8, ಮೈಲಾರ 2, ಲಿಂಗನಾಯಕನ ಹಳ್ಳಿ 8, ತುಂಬಿನಕೇರಿ 1, ತುಂಬಿನಕೇರಿ ತಾಂಡಾ 8, ಬಸರಹಳ್ಳಿ-ದಾಸರಹಳ್ಳಿ ತಾಂಡಾ 16, ಇಟ್ಟಿಗಿ 4, ಕೆ. ಅಯ್ಯನಹಳ್ಳಿ 2, ಮರಿಯಮ್ಮನಹಳ್ಳಿ 2, ಹೊಸಪೇಟೆ 2, ಹೂವಿನಹಡಗಲಿ 1, ಚೆನ್ನಳ್ಳಿ ತಾಂಡಾ 1, ಕೊಯಿಲಾರಗಟ್ಟಿತಾಂಡಾ 1, ಕೊಟ್ಟೂರು ಗ್ರಾಮದ ಒಬ್ಬರು ಸೇರಿದಂತೆ ಒಟ್ಟು 87 ಜನರು ವಲಸೆ ಕಾರ್ಮಿಕರು, ಅಂತರಾಜ್ಯ ಮತ್ತು ಅಂತರ್‌ ಜಿಲ್ಲೆಯಿಂದ ಪ್ರಯಾಣ ಮಾಡಿದ ಹಿನ್ನೆಲೆಯುಳ್ಳವರಾಗಿದ್ದರಿಂದ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿತ್ತು. ಇವರ ವರದಿಯಲ್ಲಿ ನೆಗೆಟಿವ್‌ ಬಂದಿರುವ ಕಾರಣ ಇವರನ್ನು ಆಯಾ ಗ್ರಾಮಗಳಿಗೆ ಕಳಿಸಲು ವಾಹನದ ವ್ಯವಸ್ಥೆ ಮಾಡಿ ಕಳಿಸಲಾಯಿತು.
 

Latest Videos
Follow Us:
Download App:
  • android
  • ios