ಮಂಡ್ಯ [ಅ.03]: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಯುವಂತೆ ಮಾಜಿ ಸಚಿವ ಪುಟ್ಟರಾಜು ವಾರ್ನಿಂಗ್ ನೀಡಿದ್ದಾರೆ. 

ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ರಾಜೀನಾಮೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. 

ಮನ್ಮುಲ್ ಚುನಾವಣೆಗೆ ಸ್ಪರ್ಧೆ ಮಾಡಿ ಬಳಿಕ ಬಿಜೆಪಿ ಸೇರಿದ್ದ ಎಸ್.ಪಿ ಸ್ವಾಮಿ ಅವರ ಪತ್ನಿ ನಾಗರತ್ನ ಸ್ವಾಮಿ ರಾಜೀನಾಮೆ ನೀಡದಿದ್ದಲ್ಲಿ ನಾವೇ ಮುಂದಿನ ದಾರಿ ತೋರಿಸುತ್ತೇವೆ ಎಂದು ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ವೇಳೆ  ಅಧಿಕಾರದಿಂದ ಕೆಳಕ್ಕೆ ಇಳಿಯದಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವ ಮೂಲಕ ಕೆಳಕ್ಕೆ ಇಳಿಸುವುದಾಗಿ ಸೂಚಿಸಿದ್ದಾರೆ. ಮನ್ಮುಲ್ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ವಿರೋಧಿಗಳ ವಿರುದ್ಧ ವಾರ್ ಆರಂಭಿಸಿದ್ದಾರೆ.

JDSಗೆ ಒಲಿದ ಅದೃಷ್ಟ : BJPಗೆ ಭಾರೀ ಮುಖಭಂಗ...

ಸ್ವಾಮಿ ಅವರು ಮನ್ಮುಲ್ ಚುನಾವಣೆಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ಸಮಬಲ ಸಾಧಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಲಾಟರಿ ಮೂಲಕ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಜೆಡಿಎಸ್ ಮುಖಂಡ ರಾಮಚಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮತ್ತೊಮ್ಮೆ ಜೆಡಿಎಸ್ ಗೆ ಅದೃಷ್ಟ ಒಲಿದಿತ್ತು. ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸಿದ್ದ ಬಿಜೆಪಿಗೆ ಮುಖಭಂಗವಾಗಿತ್ತು.