ಮಂಡ್ಯ [ಸೆ.03]: ಮಂಡ್ಯದಲ್ಲಿ ಮೊದಲ ಬಾರಿ ಖಾತೆ ತೆರೆದಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು ಜೆಡಿಎಸ್ ಗೆ ಅದೃಷ್ಟ ಒಲಿದಿದೆ. 

ಜೆಡಿಎಸ್ ಭದ್ರ ಕೋಟೆ ಎನಿಸಿಕೊಳ್ಳುವ ಮಂಡ್ಯದ ಮನ್ಮುಲ್ ಅಧಿಕಾರ ಗದ್ದುಗೆ ಇದೀಗ ಜೆಡಿಎಸ್ ಪಾಲಾಗಿದೆ. ಕುತೂಹಲ ಮೂಡಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಲಾಟರಿ ಮೂಲಕ ಆಯ್ಕೆ ಮಾಡಿದ್ದು, ರಾಮಚಂದ್ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧಿಕಾರದಿಂದ ಜೆಡಿಎಸ್ ದೂರ ಇಡಲು ಬಿಜೆಪಿಗೆ ಕಾಂಗ್ರೆಸ್ ನೆರವು...

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಅವರಿಗೆ ಅಧಿಕಾರ ಕೈ ತಪ್ಪಿದೆ.  ಮನ್ಮುಲ್ ಚುನಾವಣೆಯಲ್ಲಿ  ಒಟ್ಟು 16 ಮತಗಳಳು ಚಲಾವಣೆಯಲ್ಲಿ ಎರಡು ಪಕ್ಷಗಳು ಸಮಬಲ ಸಾಧಿಸಿದ್ದು, 8 - 8  ಸ್ಥಾನ ಪಡೆದಿತ್ತು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೀಗ ಲಾಟರಿ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ರಾಮಚಂದ್ರ ಆಯ್ಕೆಯಾಗಿದ್ದಾರೆ. ಬಿಜೆಪಿ ಹಿನ್ನಡೆಗೆ ಅಧಿಕಾರಿಯೋರ್ವರು ಕ್ರಾಸ್ ಓಟಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ಪಿ ಸ್ವಾಮಿಗೆ ಮುಖಭಂಗವಾಗಿದೆ.

JDSನಿಂದ ಬಿಜೆಪಿಗೆ ಬೆಂಬಲ : SM ಕೃಷ್ಣ ಅಳಿಯಗೆ ಅಧಿಕಾರ