ಉಡುಪಿ(ಆ.02): ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಶನಿವಾರ ಬಿಡುಗಡೆಗೊಂಡು ಮಠಕ್ಕೆ ಹಿಂತಿರುಗಿದ್ದಾರೆ.

ಅವರು ಪುತ್ತಿಗೆ ಗ್ರಾಮದಲ್ಲಿರುವ ಮೂಲಮಠದಲ್ಲಿ ಚಾತುರ್ಮಾಸ ನಿರತರಾಗಿದ್ದು, ಅವರಿಗೆ ಸೋಂಕು ಪತ್ತೆಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ 12 ದಿನ ಚಿಕಿತ್ಸೆ ಪಡೆದು ಸೋಂಕು ಕಡಿಮೆಯಾಗಿದ್ದು, ಶ್ರೀಗಳು ಮಠಕ್ಕೆ ಮರಳಿದ್ದಾರೆ.

ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದರೂ ನಿಲ್ಲದ ಶ್ರೀಗಳ ವ್ರತ, ಪೂಜೆ

ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ, ಆದರೆ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಆದ್ದರಿಂದ ಭಕ್ತರು ಅವರನ್ನು ಭೇಟಿಯಾಗುವುದಕ್ಕೆ ಮಠದತ್ತ ಸದ್ಯಕ್ಕೆ ಆಗಮಿಸುವುದು ಬೇಡ, ಶ್ರೀಗಳ ಅನಾರೋಗ್ಯ ಕಾಲದಲ್ಲಿ ಪ್ರಾರ್ಥಿಸಿದ, ಯೋಗಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಮಠದ ಪ್ರಕಟಣೆ ತಿಳಿಸಿದೆ.

ಇತಿಹಾಸ ಪ್ರಸಿದ್ಧ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೊರೋನಾ ಸೋಂಕು ತಗುಲಿದ್ದು, ಸದ್ಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಜೊತೆಗೆ ತಮ್ಮ ವ್ರತ, ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು.