ಪ್ರೀತಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಪ್ರೀತಿಸಿದ ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ನಡೆದಿದೆ. ಆರ್.ಆರ್.ನಗರದ ನಿವಾಸಿ ರಂಗನಾಥ ಪುತ್ರನಾದ ಮನು, ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ.
ಬೆಂಗಳೂರು (ಜು.16): ಪ್ರೀತಿಸಿದ ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ನಡೆದಿದೆ. ಆರ್.ಆರ್.ನಗರದ ನಿವಾಸಿ ರಂಗನಾಥ ಪುತ್ರನಾದ ಮನು, ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ. ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಜುಲೈ 3 ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಮನೆಗೆ ಕರೆದೊಯ್ದಿದ್ದ. ಈ ವೇಳೆ ಯುವತಿಯ ಪೋಷಕರು ಮನು ಮನೆಗೆ ನುಗ್ಗಿ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದೊದಿದ್ದರು.
ಇದಾದ ಬಳಿಕ ಮನು ಎಂದಿನಂತೆ ಕಾಲೇಜಿಗೆ ತೆರಳಿದ್ದು, ಆತನ ತಂದೆ ತಂದೆ ರಂಗನಾಥ ನಿನ್ನೆ ಬೆಳಗ್ಗೆ ಡ್ರಾಪ್ ಮಾಡಿದ್ದರು. ಬಳಿಕ ವಾಪಾಸ್ಸಾಗುವ ವೇಳೆ ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯುತಿದ್ದ ಮನುವನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು, ಯುವಕನ ಕೈ ಕಾಲು ಕಟ್ಟಿಹಾಕಿ ಬೆಂಕಿ ಇಟ್ಟಿದ್ದಾರೆ. ಗಾಯಾಳು ವಿದ್ಯಾರ್ಥಿ ಮನುಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಳ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಶಶಾಂಕ್ ದೊಡ್ಡಪ್ಪ ಮತ್ತು ಮನು ಹಾಗೂ ಸಹಚರರಿಂದ ಕೃತ್ಯ ಎಸಗಲಾಗಿದೆ.
ಹೆಣ್ಣಿನ ವೇಷದಲ್ಲಿ ಭಿಕ್ಷಾಟನೆ ಮಾಡಿ ಮನೆಯನ್ನೇ ಕಟ್ಟಿದ!
ಅಪಘಾತದಲ್ಲಿ ಹೊತ್ತಿಉರಿದ ಬೈಕ್: ಅತಿವೇಗವಾಗಿ ಬರುತ್ತಿದ್ದ ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಫಘಾತದಲ್ಲಿ ಬೆಂಕಿ ಹೊತ್ತಿಕೊಂಡು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಕಡೂರು ಸಮೀಪ ರಾತ್ರಿ ನಡೆದಿದೆ. ಈ ದುರ್ಘಟನೆಯಲ್ಲಿ ಹೊಸದುರ್ಗ ತಾಲೂಕಿನ ಹಾಗಲಗೆರೆ ಗ್ರಾಮದ ಲೋಹಿತ್ (35) ಮತ್ತು ನಾಗರಾಜ್ (40) ಮೃತ ದುರ್ದೈವಿಗಳು. ಕಡೂರು ಸಮೀಪದ ಚಿಕ್ಕಪಟ್ಟಣಗೆರೆ ಗೇಟಿನ ಸಮೀಪದಲ್ಲಿ ಈ ಭೀಕರ ಅಪಘಾತದ ನಡೆದಿದೆ.
ಪುಷ್ಪ ಚಿತ್ರದ ಸ್ಟೈಲ್‌ನಲ್ಲಿ ಗಾಂಜಾ ಸಾಗಣೆ: ಮೂವರು ವಿದ್ಯಾರ್ಥಿಗಳ ಬಂಧನ
ಹಾಗಲಗೆರೆ ಗ್ರಾಮದ ಲೋಹಿತ್ ಮತ್ತು ನಾಗರಾಜ್ ಚಿಕ್ಕಮಗಳೂರು ಮಾರ್ಗವಾಗಿ ಕಡೂರು ಪಟ್ಟಣದ ಬೈಕಿನಲ್ಲಿ ಅತಿವೇಗದಲ್ಲಿ ಬರುತ್ತಿದ್ದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಕಡೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು, ಬೈಕಿಗೆ ಬೆಂಕಿ ಹೊತ್ತಿ ಕೊಂಡು ಉರಿದಿದೆ. ಈ ಅವಘಡದಲ್ಲಿ ಬೈಕಿನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕಾರಿನ ಚಾಲಕನಿಗೆ ಸಣ್ಣಪುಟ್ಟಗಾಯಾಗಳಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೂಡಲೇ ಕಡೂರು ಪೋಲೀಸ್ ಠಾಣೆ ಪಿಎಸ್‌ಐ ಧನಂಜಯರವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ರಸ್ತೆ ಸಂಚಾರ ಸುಗಮಗೊಳಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.