ಸಿಂಧನೂರು(ಅ.30): ತಾಲೂಕಿನ ಗುಂಜಳ್ಳಿ ಕ್ಯಾಂಪಿನ ಹತ್ತು ವರ್ಷದ ಬಾಲಕಿ ಪುಣ್ಯಶ್ರಿತಾ ಚಿಲಕೂರಿ ಕರ್ನಾಟಕ ಅಚಿವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಂಪಾದಿಸಿಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ಸ್ಥಳೀಯ ಎಂಡಿಎನ್‌ ಪ್ಯೂಚರ್‌ ಶಾಲೆಯ ವಿದ್ಯಾರ್ಥಿನಿ ಪುಣ್ಯಶ್ರಿತಾ ಚಿಲಕೂರಿ ಬಸವಣ್ಣನವರ ವಚನಗಳ ವಿಶ್ಲೇಷಣೆ, ಭಗವದ್ಗೀತೆ, ರಾಮಾಯಣ ಗ್ರಂಥಗಳನ್ನು ಪಟಪಟನೆ ಹೇಳುವ ಈಕೆಯ ನೆನಪಿನ ಶಕ್ತಿಗೆ ಎಲ್ಲರೂ ಬೆರಗಾಗುತ್ತಾರೆ.
ಐವತ್ತಾರು ಶ್ಲೋಕಗಳನ್ನು ಏಳು ನಿಮಿಷದಲ್ಲಿ ಹೇಳುತ್ತಾಳೆ. ಭರತ ನಾಟ್ಯ, ಹಿಂದುಸ್ತಾನಿ ಸಂಗಿತ, ವೆಸ್ಟರ್ನ್‌ ಡ್ಯಾನ್ಸ್‌, ಭಾಷಣ, ಸಾಮಾನ್ಯ ಜ್ಞಾನ, ಸಣ್ಣ ಕಥೆಗಳು, ಸಂಸ್ಕೃತ ಶ್ಲೋಕಗಳನ್ನು ಹೇಳುವ ಜಾಣ್ಮೆ ಇರುವ ಈ ಬಾಲ ಪ್ರತಿಭೆಯನ್ನು ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್ಸ್ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ. 

ಮಾಸ್ಕ್ ಇಲ್ಲದೇ ಮದುವೆಯಲ್ಲಿ ಭಾಗಿಯಾದ ಶ್ರೀರಾಮುಲು; ಸಚಿವರಿಗಿಲ್ವಾ ಮಾಸ್ಕ್ ರೂಲ್ಸ್ ?

ಮಗಳು ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್ಸ್ ಸೇರಿ ನಮ್ಮ ಹೆಸರನ್ನು ಕರ್ನಾಟಕದ ಜನರಿಗೆ ಪರಿಚಯಿಸಿದ್ದಾಳೆ. ನಮ್ಮ ಮಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಅವಳಲ್ಲಿ ಅಪಾರ ಬುದ್ದಿ ಸಾಮರ್ಥ್ಯವಿದ್ದು, ಐಎಎಸ್‌ ಮಾಡುವ ಗುರಿ ಹೊಂದಿರುವ ಅವಳಿಗೆ ತಾಯಿಯ ಮಾರ್ಗದರ್ಶನ ಪೂರಕವಾಗಿದೆ ಎಂದು ಪುಣ್ಯಶ್ರಿತಾ ತಂದೆ ಸಿ.ಎಚ್‌.ರಾಮು ಹೇಳುತ್ತಾರೆ.