ಚಳ್ಳಕೆರೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಪ್ರವೇಶ ನಿರ್ಬಂಧ

ಚಳ್ಳಕೆರೆ ತಾಲೂಕು ಕಚೇರಿ, ಉಪನೊಂದಾವಣಾಧಿಕಾರಿ ಕಚೇರಿ, ಉಪ ಖಜಾನೆ, ಪೊಲೀಸ್‌ ಠಾಣೆ, ತಾಲೂಕು ಪಂಚಾಯಿತಿ ಕಾರ್ಯಾಲಯ, ನಗರಸಭೆ ಕಾರ್ಯಾಲಯ, ಶಾಸಕರ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಕಚೇರಿಯ ಕೆಲಸ ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಒಳಗಡೆ ಪ್ರವೇಶ ನೀಡಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Public Entry prohibited in Govt Office in Challakere

ಚಳ್ಳಕೆರೆ(ಜು.18): ನಗರದಲ್ಲಿ ಪ್ರತಿನಿತ್ಯ ಕೊರೋನಾ ಪಾಸಿಟಿವ್‌ ಪ್ರಕರಣ ಬೆಳಕಿಗೆ ಬರುತ್ತಿರುವುದರಿಂದ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯದ್ವಾರಗಳನ್ನು ಬಂದ್‌ ಮಾಡಿದ್ದು, ಕಚೇರಿಯಲ್ಲಿ ಅಗತ್ಯ ಕೆಲಸವಿದ್ದವರಿಗೆ ಮಾತ್ರ ಅವರಿಂದ ಮಾಹಿತಿ ಪಡೆದು ಮಾಸ್ಕ್‌ ಧರಿಸಿರುವುದನ್ನು ಪರಿಶೀಲಿಸಿ ಸ್ಯಾನಿಟೈಜರ್‌ ನೀಡಿ ಕಚೇರಿ ಒಳಗೆ ಬಿಡಲು ಪ್ರಾರಂಭಿಸಿದೆ.

ಇಲ್ಲಿನ ತಾಲೂಕು ಕಚೇರಿ, ಉಪನೊಂದಾವಣಾಧಿಕಾರಿ ಕಚೇರಿ, ಉಪ ಖಜಾನೆ, ಪೊಲೀಸ್‌ ಠಾಣೆ, ತಾಲೂಕು ಪಂಚಾಯಿತಿ ಕಾರ್ಯಾಲಯ, ನಗರಸಭೆ ಕಾರ್ಯಾಲಯ, ಶಾಸಕರ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಕಚೇರಿಯ ಕೆಲಸ ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಒಳಗಡೆ ಪ್ರವೇಶ ನೀಡಲಾಗುತ್ತಿದೆ.

ಮಲೆನಾಡಿನಲ್ಲಿ ಮರುಕಳಿಸಿದ ಮುಂಗಾರು ಮಳೆಯ ವೈಭವ

ಮುಂಜಾಗ್ರತಾ ಕ್ರಮ:

ಟಿಎಚ್‌ಒ ಡಾ. ಎನ್‌.ಪ್ರೇಮಸುಧಾ ಪತ್ರಿಕೆಯೊಂದಿಗೆ ಮಾತನಾಡಿ, ಕೊರೋನಾ ವೈರಾಣು ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ತಾಲೂಕು ಆರೋಗ್ಯ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಹಲವಾರು ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಜಾಗ್ರತೆ ವಹಿಸಲಾಗಿದೆ. ಸಾರ್ವಜನಿಕರು ಯಾವುದೇ ಹಂತದಲ್ಲಿ ಭಯಪಡದೆ ಯಾವುದೇ ಸಮಸ್ಯೆ ಇದ್ದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಅಥವಾ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.


 

Latest Videos
Follow Us:
Download App:
  • android
  • ios