Asianet Suvarna News Asianet Suvarna News

ಬೊಜ್ಜಿನ ದುಷ್ಪರಿಣಾಮದ ಬಗ್ಗೆ ಜನ ಜಾಗೃತಿ

ಕುಣಿಗಲ್ ರಸ್ತೆಯ ಮರಳೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೊಜ್ಜು ಹಾಗೂ ಸ್ಥೂಲಕಾಯದ ದುಷ್ಪರಿಣಾಮ ಕುರಿತು ಹಾಡು, ಅಭಿನಯದ ಮೂಲಕ ಜನ ಜಾಗೃತಿ ಮೂಡಿಸಿದರು.

Public awareness about the ill effects of obesity snr
Author
First Published Oct 18, 2023, 10:28 AM IST

ತುಮಕೂರು: ಕುಣಿಗಲ್ ರಸ್ತೆಯ ಮರಳೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೊಜ್ಜು ಹಾಗೂ ಸ್ಥೂಲಕಾಯದ ದುಷ್ಪರಿಣಾಮ ಕುರಿತು ಹಾಡು, ಅಭಿನಯದ ಮೂಲಕ ಜನ ಜಾಗೃತಿ ಮೂಡಿಸಿದರು.

ವಿಶ್ವ ಸ್ಥೂಲಕಾಯ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹೇ ವಿವಿಯ ಕುಲಸಚಿವ ಎಂ.ಜೆಡ್. ಕುರಿಯನ್, ಸ್ಥೂಲಕಾಯ ಅಥವಾ ಬೊಜ್ಜು ನಮ್ಮ ದೇಹದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬೊಜ್ಜು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸಲಾಗಿದ್ದು, ಜನ ಜಾಗೃತಿಗಾಗಿ ಜಾಥಾ ಏರ್ಪಡಿಸಲಾಗಿದೆ ಎಂದರು.

ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೈವಾ ಮಾತನಾಡಿ, ವಿಶ್ವ ಸ್ಥೂಲಕಾಯ ದಿನದ ಅಂಗವಾಗಿ ಜಾಗೃತಿ ಮೂಡಿಸಲು ನರ್ಸಿಂಗ್ ವಿದ್ಯಾರ್ಥಿಗಳು ಪ್ರಾಥಮಿಕ ಹಂತದ ಸ್ಕ್ರೀನಿಂಗ್ ಮೂಲಕ ಮತ್ತು ಫ್ಲ್ಯಾಶ್‌ ಮೊಬೈಲ್ ಮೂಲಕ ಒಬೆಸಿಟಿ ಬಗ್ಗೆ ಅರಿವು ಮೂಡಿಸಿದ್ದು, ಇದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ವಿಶ್ವ ಸ್ಥೂಲಕಾಯ ಒಕ್ಕೂಟದ ಪ್ರಕಾರ ಪ್ರಸ್ತುತ ವಿಶ್ವದಾದ್ಯಂತ 1ಬಿಲಿಯನ್ ಜನರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ 2035ರ ವೇಳೆಗೆ ಈ ಸಂಖ್ಯೆಯು 1.9 ಶತಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಬೊಜ್ಜು ಸಮಸ್ಯೆಗೆ ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಜಾಗೃತಿ ಅಭಿಯಾನದಲ್ಲಿ ಎಸ್‌ಎಸ್‌ಐ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ್, ಎಸ್‌ಎಸ್‌ಐಟಿಯ ಐಕ್ಯೂಎಸಿ ಮುಖ್ಯ ಸಂಯೋಜಕ ಪ್ರಕಾಶ್ ಸೇರಿದಂತೆ ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಐದು ಸಂದರ್ಭಗಳಲ್ಲಿ ತೂಕ ಚೆಕ್ ಮಾಡಬೇಡಿ

ದೇಹದ ತೂಕ ಏರಿದ್ರೂ ಕಷ್ಟ, ಇಳಿದ್ರೂ ಕಷ್ಟ. ಅದನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಒಂದು ಸವಾಲು. ನಮ್ಮ ತೂಕ ನಾನಾ ಕಾರಣಕ್ಕೆ ಏರುತ್ತದೆ. ಅನೇಕ ಬಾರಿ ಏಕಾಏಕಿ ನಾಲ್ಕೈದು ಕೆಜಿ ತೂಕ ಏರಬಹುದು ಇಲ್ಲ ಇಳಿಯಬಹುದು. ಇಷ್ಟು ದೊಡ್ಡ ಪ್ರಮಾಣದಲ್ಲಿ ತೂಕದಲ್ಲಿ ಏರುಪೇರಾದಾಗ ಭಯವಾಗುತ್ತದೆ. ಕನ್ನಡಿ ಮುಂದೆ ನಿಂತಾಗ, ಸ್ನೇಹಿತರು, ಸಂಬಂಧಿಕರು ಸ್ವಲ್ಪ ದಪ್ಪವಾಗಿದ್ದೀರಿ ಅಲ್ವಾ ಅಂದಾಗ ಅನುಮಾನ ಕ್ಲಿಯರ್ ಮಾಡಿಕೊಳ್ಳೋಕೆ ತೂಕ ಚೆಕ್ ಮಾಡ್ಬೇಕಲ್ವಾ? ಹಿಂದೆ ಒಂದು ರೂಪಾಯಿ ಕಾಯಿನ್ ಹಾಕಿ ತೂಕ ಚೆಕ್ ಮಾಡಿಕೊಳ್ತಿದ್ವಿ. ಈಗ ಬಹುತೇಕರ ಮನೆಗೆ ವೇಟಿಂಗ್ (Waiting) ಮಷಿನ್ ಲಗ್ಗೆ ಇಟ್ಟಿದೆ. ಕಡಿಮೆ ಬೆಲೆಯಲ್ಲಿ ಸಿಗುವ ತೂಕ ಲೆಕ್ಕ ಮಾಡುವ ಮಷಿನನ್ನು ಜನರು ಮನೆಯಲ್ಲೇ ಇಟ್ಟುಕೊಂಡು ಆಗಾಗ ಚೆಕ್ ಮಾಡ್ತಿರುತ್ತಾರೆ. ದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ, ಊಟವಾದ್ಮೇಲೆ ಒಂದು ಬಾರಿ ಅಂತಾ ಆಗಾಗ ಚೆಕ್ ಮಾಡುವ ಜನರಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು.

ಹೀಗೆ ಪದೇ ಪದೇ ತೂಕ (Weight) ವನ್ನು ಪರೀಕ್ಷಿಸಿಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ಲದೇ ಕೆಲವು ಸಮಯದಲ್ಲಿ ನಾವು ವೇಟ್ ಚೆಕ್ ಮಾಡಿದರೆ ಅದರಿಂದ ನಮಗೆ ತಪ್ಪು ಮಾಹಿತಿಯೂ ಸಿಗಬಹುದು. ಹಾಗಾಗಿ ತೂಕವನ್ನು ಪರೀಕ್ಷಿಸಿಕೊಳ್ಳಲೂ ಸರಿಯಾದ ಸಮಯ ಯಾವುದೆಂದು ನಾವು ತಿಳಿದುಕೊಳ್ಳಬೇಕು. ನಾವು ಆಸ್ಪತ್ರೆಗಳಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಿಸುವಾಗ ವೈದ್ಯರು ಮೊದಲೇ ನಮಗೆ ಕೆಲವು ನಿಯಮಗಳನ್ನು ಹೇಳುತ್ತಾರೆ. ಹಾಗೆಯೇ ನಮ್ಮ ದೇಹದ ತೂಕವನ್ನು ಪರೀಕ್ಷಿಸಲು ಕೂಡ ಕೆಲವು ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿದೆ. ಆ ನಿಯಮಗಳನ್ನು ಪಾಲಿಸಿದಾಗ ಮಾತ್ರ ನಿಖರವಾದ ತೂಕ ತಿಳಿಯುತ್ತದೆ. ಇಲ್ಲದಿದ್ದಲ್ಲಿ ನಾವು ಸರಿಯಾದ ತೂಕವನ್ನು ತಿಳಿಯಲು ಸಾಧ್ಯವಿಲ್ಲ.

ಲೈಂಗಿಕ ಸೋಂಕಿನಿಂದ ಜೀವಕ್ಕೆ ಅಪಾಯ; ಪುರುಷರೇ ಇರಲಿ ಜಾಗೃತಿ

ಈ ಸಮಯದಲ್ಲಿ ಚೆಕ್ ಮಾಡಿದ್ರೆ ತೂಕ ಸರಿಯಾಗಿ ಬರೋದಿಲ್ಲ : 

ಆಹಾರ ಸೇವಿಸಿದ ತಕ್ಷಣ ವೇಟ್ ಚೆಕ್ ಮಾಡ್ಬೇಡಿ : ಊಟ ಮಾಡುವಾಗ ನೀವು ಹೆಚ್ಚಿನ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗಿರುತ್ತದೆ. ಹಾಗಾಗಿ ಊಟ ಮಾಡಿದ ತಕ್ಷಣ ನೀವು ತೂಕವನ್ನು ಪರೀಕ್ಷಿಸಿಕೊಂಡರೆ ತೂಕ ಸರಿಯಾಗಿ ತೋರಿಸುವುದಿಲ್ಲ. ಬದಲಾಗಿ ನಿಮ್ಮ ದೇಹದ ತೂಕಕ್ಕಿಂತ ಹೆಚ್ಚಿನ ತೂಕವನ್ನು ತೋರಿಸುತ್ತದೆ. ಹಾಗಾಗಿ ಊಟವಾದ ತಕ್ಷಣ ವೇಟ್ ಚೆಕ್ ಮಾಡೋದು ಸರಿಯಲ್ಲ.

ಹೆಚ್ಚು ನೀರು ಕುಡಿದ ನಂತರ ತೂಕ ನೋಡಬೇಡಿ : ಬಾಯಾರಿಕೆಯಾದಾಗ ನಾವು ಹೆಚ್ಚು ನೀರು ಕುಡಿಯುವುದು ಸಹಜ. ಹಾಗೆ ನೀರು ಕುಡಿದ ನಂತರವೂ ನಮ್ಮ ದೇಹದ ತೂಕದಲ್ಲಿ ಏರಿಕಾಯಾಗುತ್ತದೆ. ಆದ್ದರಿಂದ ಅತಿಯಾಗಿ ನೀರು ಕುಡಿದ ನಂತರವೂ ತೂಕ ಎಷ್ಟಿದೆ ಎಂದು ನೋಡಬಾರದು.

ವ್ಯಾಯಾಮ ಮಾಡಿದ ನಂತರ ತೂಕ ನೋಡೋದು ತಪ್ಪು : ವರ್ಕ್ ಔಟ್ ಅಥವಾ ವ್ಯಾಯಾಮ ಮಾಡಿದ ನಂತರ ತೂಕ ನೋಡಿಕೊಳ್ಳುವುದೂ ತಪ್ಪು. ಏಕೆಂದರೆ ವ್ಯಾಯಾಮ ಮಾಡಿದ ಸಮಯದಲ್ಲಿ ನಮ್ಮ ದೇಹದಿಂದ ಸಾಕಷ್ಟು ಬೆವರು ಹರಿಯುತ್ತದೆ. ಈ ಸಮಯದಲ್ಲಿ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಆ ತೂಕ ತಾತ್ಕಾಲಿಕವಾಗಿರುತ್ತದೆ. ಹಾಗಾಗಿ ವ್ಯಾಯಾಮದ ನಂತರ ವೇಟ್ ಚೆಕ್ ಮಾಡೋದ್ರಿಂದ ನಿಮ್ಮ ಸರಿಯಾದ ವೇಟ್ ಎಷ್ಟು ಅನ್ನೋದು ಗೊತ್ತಾಗೊಲ್ಲ.

Follow Us:
Download App:
  • android
  • ios