Asianet Suvarna News Asianet Suvarna News

ಪಿಎಸ್‌ಐ ಹಗರಣದ ಕಿಂಗ್‌ಪಿಎನ್‌ ಆರ್‌ಡಿ ಪಾಟೀಲ್‌ ಬ್ಯಾನರ್‌, ಕಟೌಟ್‌ ಅಬ್ಬರ!

ಅಫ್ಜಲಪುರದ ಜನ ಬಯಸಿದರೆ ಅಸೆಂಬ್ಲಿ ಅಖಾಡಕ್ಕಿಳಿಯುವೆ ಎಂದು ಮೂರು ದಿನದ ಹಿಂದಷ್ಟೇ ವಿಡಿಯೋ ಸಂದೇಶದಲ್ಲಿ ಅಬ್ಬರಿಸಿರುವ ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್ ಡಿ ಪಾಟೀಲ್, ಇದೀಗ ಕೋಲಿ ಸಮಾಜದ ಮುಖಂಡ, ಹೋರಾಟಗಾರ, ಮಾಜಿ ಎಂಎಲ್‍ಸಿ ದಿ. ವಿಠ್ಠಲ್ ಹೆರೂರ್ ಅವರ ಕಂಚಿನ ಪುತ್ಥಳಿ ಅನಾವರಣ (ಜ. 24, ಮಂಗಳವಾರ) ಸಮಾರಂಭದ ಹಿನ್ನೆಲೆ ಕಟೌಟ್, ಬ್ಯಾನರ್‌ಗಳಲ್ಲಿ ರಾರಾಜಿಸುವ ಮೂಲಕ ತೀ ಗ್ರಾಸವಾಗಿದ್ದಾರೆ.

PSI scam kingpin RD Patil banner, cutout in ganagapur at kalaburagi rav
Author
First Published Jan 23, 2023, 11:45 PM IST

ಕಲಬುರಗಿ (ಜ.24): ಅಫ್ಜಲಪುರದ ಜನ ಬಯಸಿದರೆ ಅಸೆಂಬ್ಲಿ ಅಖಾಡಕ್ಕಿಳಿಯುವೆ ಎಂದು ಮೂರು ದಿನದ ಹಿಂದಷ್ಟೇ ವಿಡಿಯೋ ಸಂದೇಶದಲ್ಲಿ ಅಬ್ಬರಿಸಿರುವ ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್ ಡಿ ಪಾಟೀಲ್, ಇದೀಗ ಕೋಲಿ ಸಮಾಜದ ಮುಖಂಡ, ಹೋರಾಟಗಾರ, ಮಾಜಿ ಎಂಎಲ್‍ಸಿ ದಿ. ವಿಠ್ಠಲ್ ಹೆರೂರ್ ಅವರ ಕಂಚಿನ ಪುತ್ಥಳಿ ಅನಾವರಣ (ಜ. 24, ಮಂಗಳವಾರ) ಸಮಾರಂಭದ ಹಿನ್ನೆಲೆ ಕಟೌಟ್, ಬ್ಯಾನರ್‌ಗಳಲ್ಲಿ ರಾರಾಜಿಸುವ ಮೂಲಕ ತೀ ಗ್ರಾಸವಾಗಿದ್ದಾರೆ.

ಆರ್‌ಡಿ ಪಾಟೀಲ್ ಯುವ ಬ್ರಿಗೇಡ್(RD Patil Youth Brigade)  ವಡಾಪುರ ಹೆಸರಲ್ಲಿ ಚವಡಾಪುರ ಕ್ರಾಸ್, ಗಾಣಗಾಪುರ ಹೆರೂರ್ ಶಕ್ತಿ ಕೇಂದ್ರ, ಗಾಣಗಾಪುರ ಸಾಗುವ ರಸ್ತೆ ಇಲ್ಲೆಲ್ಲಾ ಭಾರಿ ಗಾತ್ರದ ಬ್ಯಾನರ್, ಕಟೌಟ್‍ಗಳು ರಾರಾಜಿಸುತ್ತವೆ. ದಿ. ಹೆರೂರ್ ಪುತ್ಥಳಿ ಅನಾವರಣ ಸಮಾರಂಭ ಯಶ ಕಾಣಲಿ ಎಂಬ ಸದಾಶಯಗಳಿರುವ ಫ್ಲೆಕ್ಸ್ ಪ್ರತ್ಯಕ್ಷವಾಗಿರೋದು ಅಫಜಲ್ಪುರ ತಾಲೂಕಿನ ಜನಮನದಲ್ಲಿ ಅಚ್ಚರಿಗೆ ಕಾರಣವಾಗಿವೆ.

ಪಿಎಸ್ಐ ನೇಮಕಾತಿ ಹಗರಣ: ಕಿಂಗ್ ಪಿನ್ ಆರ್‌‌.ಡಿ ಪಾಟೀಲ್‌ಗೆ ಅರೆಸ್ಟ್‌ ವಾರೆಂಟ್

 

ಆರ್‌ಡಿ ಪಾಟೀಲ್ ಅಭಿಮಾನಿ ಬಳಗ ಚವಡಾಪುರ ಹೆಸರಲ್ಲಿರುವ ಬ್ಯಾನರ್, ಕಟೌಟ್‍ಗಳಲ್ಲಿ ಪುತ್ಥಳಿ ಅನಾವರಣ ಸಮಾರಂಭಕ್ಕೆ ಸ್ವಾಗತ, ಶುಭವಾಗಲಿ ಎಂಬಿತ್ಯಾದಿ ಶುಭ ಕೋರುವ ಸಂದೇಶಗಳು ರಾರಾಜಿಸುತ್ತಿವೆ.

ದಿ. ವಿಠ್ಠಲ್ ಹೆರೂರ್ ಕೋಲಿ ಸಮಾಜದ ಹೋರಾಟಗಾರರಾಗಿದ್ದರಲ್ಲದೆ ಈ ಸಮಾಜದ ಪ್ರತಿಯೊಬ್ಬರ ಮನೆ, ಮನದಲ್ಲಿ ತಮ್ಮ ಛಾಪು ಒತ್ತಿದ್ದರು. ಹೀಗಾಗಿ ಈ ಹೋರಾಟಗಾರರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ತಮ್ಮ ಸಂದೇಶ ರವಾನಿಸುವ ಉತ್ಸಾಹದಲ್ಲಿ ಆರ್‌ಡಿಪಿ ಅಭಿಮಾನಿ ಬಳಗದವರು ಇಂತಹ ಶುಭಾಷಯ ಕೋರುವ ಬ್ಯಾನರ್‍ಗಳನ್ನು ಹಾಕುವ ಮೂಲಕ ಅನೇಕರ ಹುಬ್ಬೇರುವಂತೆ ಮಾಡಿದ್ದಾರೆ.

ಎಸ್ಕೇಪ್‌ ಆಗಿದ್ದ ಪಿಎಸ್‌ಐ ಹಗರಣ ಕಿಂಗ್‌ಪಿನ್‌ ಪಾಟೀಲ್‌ ವಿಡಿಯೋ ಮೂಲಕ ಪ್ರತ್ಯಕ್ಷ

ಅಫಜಲಪುರ ತಾಲೂಕಿನ ದೇವಲಗಾಣಗಾಪುರ(Devalaganagapur)ದಲ್ಲಿ ನಾಳೆ ( ಜ.24) ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ, ಕೋಲಿ ಸಮಾಜದ ಧುರೀಣರಾಗಿದ್ದ ದಿವಂಗತ ವಿಠ್ಠಲ ಹೇರೂರ(Vitthala Heroor) ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ನೆರವೇರಿಸಲಿದ್ದಾರೆ.

Follow Us:
Download App:
  • android
  • ios