ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿ

ಪ್ರಧಾನಿ ನರೇಂದ್ರ ಮೋದಿ ನ.11ರಂದು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಮಾಡಲು ಆಗಮಿಸುತ್ತಿರುವ ಸಂದರ್ಭದಲ್ಲಿ ಬರಪೀಡಿತ ಜಿಲ್ಲೆಗಳ ಹಕ್ಕೋತ್ತಾಯಗಳ ಮನವಿ ಸಲ್ಲಿಸುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಚಾಲ ಆಂಜನೇಯರೆಡ್ಡಿ ತಿಳಿಸಿದರು.

Provide permanent irrigation to drought prone districts snr

  ಕೋಲಾರ (ನ.09) : ಪ್ರಧಾನಿ ನರೇಂದ್ರ ಮೋದಿ ನ.11ರಂದು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಮಾಡಲು ಆಗಮಿಸುತ್ತಿರುವ ಸಂದರ್ಭದಲ್ಲಿ ಬರಪೀಡಿತ ಜಿಲ್ಲೆಗಳ ಹಕ್ಕೋತ್ತಾಯಗಳ ಮನವಿ ಸಲ್ಲಿಸುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಚಾಲ ಆಂಜನೇಯರೆಡ್ಡಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆರೆಗಳ ಜೋಡಣೆ ಮತ್ತು ಕೆರೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಸ್ರೋ (OSRO)  1997ರಲ್ಲಿ ವಿಶೇಷ ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಕೇಂದ್ರ ಜಲಶಕ್ತಿ (Water ) ಮಂತ್ರಾಲಯವು ವಿಶೇಷ ಯೋಜನೆಯಡಿ ನೀರಾವರಿ ವಂಚಿತ ಬರ ಪೀಡಿತ ಜಿಲ್ಲೆಗಳ ಕೆರೆಗಳ ಜೋಡಣೆ ಹಾಗೂ ಜಲಾನಯನ ಪ್ರದೇಶಗಳ ಪುನಶ್ಚೇತನ ಮತ್ತು ಸಮಗ್ರ ಕೆರೆ ಕಟ್ಟೆಕಾಲವೆಗಳ ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು,

ಕೆಸಿ ವ್ಯಾಲಿ ನೀರು 3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹ

ಎತ್ತಿನಹೊಳೆ ಯೋಜನೆಯ ಜಲವಿಜ್ಞಾನ ಅಧ್ಯಯನವನ್ನು ಕೇಂದ್ರೀಯ ಜಲ ಆಯೋಗ ಪುನರ್‌ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು, ಬೆಂಗಳೂರು ನಗರದ ತ್ಯಾಜ್ಯ ನೀರನ್ನು (ಕೆಸಿ ಮತ್ತು ಎಚ್‌ಸಿ) ಕಡ್ಡಾಯವಾಗಿ ಮೂರನೇ ಹಂತದ ಶುದ್ದೀಕರಣದ ನಂತರವಷ್ಟೆಕೆರೆಗಳಿಗೆ ಹರಿಸ ಬೇಕೆಂದು ರಾಜ್ಯ ಸರ್ಕಾರಕ್ಕೆ ಕೇಂದ್ರವು ಸೂಚಿಸಬೇಕು. ಬರಪೀಡಿತ ಜಿಲ್ಲೆಗಳ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಕೊಳವೆ ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟಪರಿಶೀಲಿಸಬೇಕು. ಅಪಾಯಕಾರಿ ಅಂಶಗಳು ಕಂಡು ಬರುವ ಗ್ರಾಮಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಮಾಡುವಂತೆ ಆಗ್ರಹಪಡಿಸಿದರು.

ಅಂತರ್ಜಲದಲ್ಲಿ ಯೂರನಿಯಂ ಪತ್ತೆ

ಕೊಳವೆ ಬಾವಿ ನೀರಿನಲ್ಲಿ fluoride ಕ್ಲೋರೈಡ್‌ ಮಾತ್ರವಲ್ಲದೆ. ಯೂರೇನಿಯಂ, ಅಸೈನಿಕ್‌ ಅಂಶಗಳು ಪತ್ತೆಯಾಗಿರುವುದು ಕಳವಳಕಾರಿಯಾಗಿದೆ, ಈ ಕುರಿತು ಗಜೇಂದ್ರ ಶೇಖಾವಾತ್‌ ಬೇರೆ ಕಡೆ ನಮ್ಮ ಜಿಲ್ಲೆಯ ನೀರಿನ ಪರಿಸ್ಥಿತಿ ತಿಳಿಸಿ ಆಂತಂಕ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸರ್ಕಾರದ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕಾಳಜಿ ವಹಿಸಿಲ್ಲ. ಎತ್ತಿನ ಹೊಳೆ ಯೋಜನೆಯಿಂದ ಕೋಲಾರ ಜಿಲ್ಲೆಗೆ ಕನಿಷ್ಠ ಒಂದು ಟಿ.ಎಂ.ಸಿ. ನೀರು ಸಿಗುವುದಿಲ್ಲ. ಕೃಷ್ಣ ಪೆನ್ನಾವರ್‌ ಬೇಸನ್‌ನಿಂದ 70 ಟಿ.ಎಂ.ಸಿ. ನೀರು ಕುಡಿಯುವುದಕ್ಕೆ ಮತ್ತು ಕೃಷಿಗೆ ಕೊಡಬಹುದಾಗಿದೆ ಎಂದರು.

ಕೃಷ್ಣ ನದಿ ನೀರು ಆಂಧ್ರ ಪ್ರದೇಶ ವ್ಯಾಪ್ತಿಯ ರಾಜ್ಯದ ಗಡಿಭಾಗದಲ್ಲಿ ಹಾದು ಹೋಗಿರುವುದು ಇದರಲ್ಲಿ ಬಿ ಸ್ಕೀಮ್‌ ಪ್ರಕಾರ 123 ಟಿ.ಎಂ.ಸಿ. ನೀರು ರಾಜ್ಯ ಸರ್ಕಾರ ಬಳಿಸಿ ಕೊಳ್ಳ ಬಹುದಾಗಿದೆ. ಆದರೆ ಸರ್ಕಾರಗಳ ಇಚ್ಚಾಕೊರತೆಯಿಂದ ಸದ್ಬಳಿಸಿಕೊಳ್ಳುತ್ತಿಲ್ಲ ಎಂದರು.

ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಹೊಳಲಿ ಪ್ರಕಾಶ್‌ ಮಾತನಾಡಿ, ಕಾಂಗ್ರೆಸ್‌ ಜೋಡೋ ಯಾತ್ರೆ, ಜೆ.ಡಿ.ಎಸ್‌. ಪಂಚರತ್ನ ಯಾತ್ರೆ, ಬಿಜೆಪಿ ವಿಕಾಸ್‌ ಯಾತ್ರೆ ಮೂಲಕ ಕಾಲಹರಣ ಮಾಡಿ ಹಗ್ಗದ ಪ್ರಚಾರ ಪಡೆಯುತ್ತಿದೆ ಹೊರತಾಗಿ ಅವರಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕೆಂಬ ಇಚ್ಚಾಕೊರತೆ ಇದೆ ಎಂದು ದೂರಿದರು.

ಕೆ.ಸಿ.ವ್ಯಾಲಿ ಮೂರನೇ ಹಂತದ ಸಂಸ್ಕರಣೆಗೆ ಒತ್ತಾಯಿಸಿ ಆಗ ಸಿದ್ದರಾಮಯ್ಯರಿಗೆ ಗೆರಾವ್ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ನಮ್ಮ ಜನಪ್ರತಿನಿಧಿಗಳ ಆಶ್ವಾಸನೆಯಿಂದ ಹಿಂದಕ್ಕೆ ಪಡೆದವು, ನೀರಾವರಿ ಹೋರಾಟಗಾರ ಮೇಲೆ ಹಾಕಿರುವ ಕೇಸ್‌ಗಳನ್ನು ಈವರೆಗೆ ವಾಪಾಸ್‌ ಪಡೆದಿಲ್ಲ. ಸದನದಲ್ಲಿ ಓರ್ವರು ವಾಪಾಸ್‌ ಪಡೆಯಬೇಡಿ ಎಂದು ಹೇಳಿರುವುದು ಖಂಡನೀಯ ಎಂದರು.

ಮುಖಂಡರಾದ   ಅಬ್ಬಣಿ ಶಿವಪ್ಪ, ಕಲ್ವಮಂಜಲಿ ರಾಮುಶಿವಣ್ಣ, ಕುರುಬರಪೇಟೆ ವೆಂಕಟೇಶ್‌, ವಕೀಲ ಸತೀಶ್‌, ಆನಂದ್‌ ಕುಮಾರ್‌, ಸುಬ್ರಮಣಿಗೌಡ, ಆನಂದಕುಮಾರ್‌, ನಾರಾಯಣಸ್ವಾಮಿ ಪುಟ್ಟಣ್ಣ ಇದ್ದರು..

Latest Videos
Follow Us:
Download App:
  • android
  • ios