Asianet Suvarna News Asianet Suvarna News

Mysuru : ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಪ್ರತಿಭಟನೆ

ಕಬ್ಬಿನ ಹಣ ಬಾಕಿ ಪಾವತಿ ಮಾಡದಿದ್ದರೆ ಕಾರ್ಖಾನೆಗೆ ಕಬ್ಬು ಕಟಾವು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ, ಉಪಕಚೇರಿಗಳಿಗೆ ಬೀಗ ಮುದ್ರೆ ಹಾಕಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.

Protest by  Sugarcane Growers Association Members In Mysuru snr
Author
First Published Jul 28, 2023, 4:56 AM IST

 ನಂಜನಗೂಡು :   ಕಬ್ಬಿನ ಹಣ ಬಾಕಿ ಪಾವತಿ ಮಾಡದಿದ್ದರೆ ಕಾರ್ಖಾನೆಗೆ ಕಬ್ಬು ಕಟಾವು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ, ಉಪಕಚೇರಿಗಳಿಗೆ ಬೀಗ ಮುದ್ರೆ ಹಾಕಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ… ಮಾತನಾಡಿ, ಕಳೆದ ವರ್ಷದ ಬಾಕಿ ಹಣ ಒಂದು ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ 150 ಗಳನ್ನು ನೀಡಿ ನಂತರ ಕಾರ್ಖಾನೆ ಕಬ್ಬು ಅರೆಯುವುದನ್ನು ಪ್ರಾರಂಭ ಮಾಡಬೇಕು. ಈ ಸಂಬಂಧ ಜು. 24ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಬಲ ಬೆಲೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು ಸಹ ಕಾರ್ಖಾನೆ ಅವರು ಹಣ ನೀಡದೆ ರೈತರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಕಾರ್ಖಾನೆಯವರು ಕಳೆದ ವರ್ಷದ ಬಾಕಿ ಹಣವನ್ನು ನೀಡಿ ಕಬ್ಬು ಅರೆಯುವುದನ್ನು ಪ್ರಾರಂಭಿಸಬೇಕು ಈ ಬಗ್ಗೆ ನಾಳೆ ಒಳಗೆ ಬಾಕಿ ಹಣ ನೀಡಲು ಕ್ರಮ ಕೈಗೊಳ್ಳದಿದ್ದಲ್ಲಿ ಕಾರ್ಖಾನೆ ವಿರುದ್ಧ ಉಗ್ರ ಪ್ರತಿಭಟನೆ ರೂಪಿಸುವುದಾಗಿ ಎಚ್ಚರಿಸಿದರು

ನಾಗೇಂದ್ರ, ವಿಜಯೇಂದ್ರ, ಸಿದ್ದಲಿಂಗಪ್ಪ, ದೊರೆಸ್ವಾಮಿ, ಸೋಮಣ್ಣ, ಶಿವರಾಜು, ಮಲ್ಲೇಶ್‌ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಸರ್ಕಾರದಿಂದ ಮೂಗಿಗೆ ತುಪ್ಪ ಸವರುವ ಕೆಲಸ

ಬಾಗಲಕೋಟೆ (ಜು.25) :  ಸರ್ಕಾರಗಳು ರೈತರ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾರೆ. ರೈತರ ಮೂಗಿಗೆ ತುಪ್ಪ ಸವರುತ್ತಾರೆ. ಈ ರೀತಿಯ ಶೋಷÜಣೆಗಳಿಂದಲೇ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕಳವಳ ವ್ಯಕ್ತಪಡಿಸಿದರು.

 

ಜಿಲ್ಲೆಯ ಕೂಡಲಸಂಗಮದಲ್ಲಿ ಮಂಗಳವಾರದಿಂದ ಆರಂಭಗೊಂಡ ರಾಜ್ಯಮಟ್ಟದ ಎರಡು ದಿನಗಳ ಜಾಗೃತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 75 ವಷÜರ್‍ಗಳಾದರೂ ರೈತರ ಶೋಷÜಣೆ ನಿಂತಿಲ್ಲ. ಒಂದು ವರ್ಷ ಕಾಲ ಹೋರಾಟ ಮಾಡಿದರೂ ರೈತರಿಗೆ ಎಂಎಸ್‌ಪಿ ಗ್ಯಾರಂಟಿ ಸಿಕ್ಕಿಲ್ಲ. ಸಾಲ ಮಾಡಿ ವಿದೇಶಕ್ಕೆ ಹಾರಿ ಹೋಗುವ ಬಂಡವಾಳ ಶಾಹಿಗಳಿಗೆ ಸಾವಿರಾರು ಕೋಟಿ ಸುಲಭ ಸಾಲ ಸಿಗುತ್ತದೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ರೈತರ ಜಮೀನಿಗೆ ಒಂದು ಲಕ್ಷ ಸಾಲ ನೀಡಲು ಸತಾಯಿಸುತ್ತಾರೆ. ಇದು ರೈತರ ದೌರ್ಭಾಗ್ಯ ಎಂದು ಹೇಳಿದರು.

ಮಹಾ ಮರಾಠವಾಡ ಪ್ರಾಂತ್ಯದಲ್ಲಿ 6 ತಿಂಗಳಲ್ಲಿ 483 ರೈತರು ಸಾವಿಗೆ ಶರಣು

ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಾಗುತ್ತಿದೆ. ರೈತರು ಸೇವಕರಾಗುತ್ತಿದ್ದಾರೆ. ಇದಕ್ಕಾಗಿ ಸಂಘಟಿತ ಹೋರಾಟದ ಅನಿವಾರ್ಯತೆ ಇದೆ. ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಡಗಳಾಗಿವೆ. ಇದು ಕೂಡ ರೈತರ ದುರ್ಬಲತೆಗೆ ಕಾರಣವಾಗುತ್ತದೆ. ರಾಜಕೀಯ ಪಕ್ಷಗಳು ಇಂಥವರನ್ನು ಬಳಸಿ ರೈತರ ಶೋಷÜಣೆ ಮಾಡುತ್ತಿದ್ದಾರೆ. ಇಂತಹ ಸಿಬ್ಬಂದಿಗಳ ನೀತಿ ವಿರುದ್ಧ ಹೋರಾಡಲು ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯಮಟ್ಟದ ಎರಡು ದಿನಗಳ ಜಾಗೃತ ಕಾರ್ಯಾಗಾರ ಉದ್ಘಾಟನೆ ಮಾಡಿದ ಬೆಳಗಾವಿಯ ಸಾವಯುವ ಕೃಷಿಕ ಸುರೇಶ ದೇಸಾಯಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ರೈತರಿಗೆ ಸ್ವಾಭಿಮಾನಿ ಸ್ವಾವಲಂಬಿ ಬದುಕು ಕಲಿಸುವ ಕಾರ್ಯಗಾರ ಉದ್ಘಾಟನೆ ಮಾಡುತ್ತಿರುವುದು ರೈತನಾಗಿ ನನಗೆ ಸಂತೋಷದ ಸಂಗತಿಯಾಗಿದೆ ಎಂದರು.

ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ

ರಾಜ್ಯ ರೈತ ಸಂಘ ರಾಜ್ಯ ಸಂಚಾಲಕ ಪ್ರಸನ್ನಕುಮಾರ್‌, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್‌ ಮಾತನಾಡಿದರು. ಶಿವಲೀಲಾ ಸ್ವಾಗತ ಮಾಡಿದರು. ಪರಶುರಾಮ್‌ ಎತ್ತಿನ ಗುಡ್ಡ ಕಾರ್ಯಕ್ರಮ ನಿರ್ವಹಿಸಿದರು. 150ಕ್ಕೂ ಹೆಚ್ಚು ರಾಜ್ಯ ಜಿಲ್ಲಾ ತಾಲೂಕು ಪದಾ​ಧಿಕಾರಿಗಳು ಭಾಗವಹಿಸಿದರು.

Follow Us:
Download App:
  • android
  • ios