'ಸದಾನಂದ ಗೌಡರಿಗೆ ಬುದ್ಧಿ ಇದೆಯಾ..? ಮಂಗಳೂರಿಗೆ ಬಂದ್ರೆ ಬಹಿಷ್ಕಾರ'..!
ಸಚಿವ ಡಿ. ವಿ ಸದಾನಂದ ಗೌಡ ಅವರು ಮಂಗಳೂರಿಗೆ ಬಂದ್ರೆ ಬಹಿಷ್ಕಾರ ಹಾಕಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಎಚ್ಚರಿಸಿದ್ದಾರೆ. ಕೇಂದ್ರದಿಂದ ನೆರೆ ಪರಿಹಾರ ತರುವುದಕ್ಕೆ ಸಚಿವರು ವಿಫಲವಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದ ಪರಿಹಾರಕ್ಕೆ ಸಚಿವ ಡಿ.ವಿ. ಸದಾನಂದ ಗೌಡ ತಿಂಗಳ ಸಮಯ ಹೇಳಿದ್ದಾರೆ.ಅವರಿಗೆ ಬುದ್ಧಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರು(ಸೆ.23): ಸಚಿವ ಡಿ. ವಿ. ಸದಾನಂದ ಗೌಡ ಅವರು ಮಂಗಳೂರಿಗೆ ಬಂದ್ರೆ ಬಹಿಷ್ಕಾರ ಹಾಕಲಾಗುತ್ತೆ ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಪ್ರವಾಹದಿಂದ ಸಾವಿರಾರು ಮಂದಿ ನಿರ್ವಸಿತರಾಗಿ ಸುಮಾರು 50 ಸಾವಿರ ಕೋಟಿ ರು.ಗಳಷ್ಟುನಷ್ಟವಾಗಿದ್ದರೂ ಕೇಂದ್ರ ಸರ್ಕಾರದ ಪರಿಹಾರಕ್ಕೆ ಸಚಿವ ಡಿ.ವಿ. ಸದಾನಂದ ಗೌಡ ತಿಂಗಳ ಸಮಯ ಹೇಳಿದ್ದಾರೆ. ಪ್ರವಾಹ ಬಂದು 50 ದಿನಗಳಾದವು. ಪರಿಹಾರ ಇಲ್ಲದೆ ಜನ ಬೀದಿಗೆ ಬಿದ್ದಿದ್ದಾರೆ. ಇಂಥ ಹೇಳಿಕೆ ನೀಡುವ ಸದಾನಂದ ಗೌಡರಿಗೆ ಬುದ್ಧಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಮಿತ್ ಶಾ ಅವ್ರನ್ನ ಭೇಟಿಯಾಗೋಕೆ ಸಮಯ ಇದೆ, ಪರಿಹಾರ ಕೇಳಲು ಸಮಯವಿಲ್ಲ:
ಅವರು ಮಂಗಳೂರಿಗೆ ಬಂದರೆ ಬಹಿಷ್ಕಾರ ಹಾಕಲಿದ್ದೇವೆ ಎಂದು ಐವನ್ ಡಿಸೋಜ ಎಚ್ಚರಿಸಿದರು. ಚುನಾವಣೆ ಘೋಷಣೆಯಾದ ಕೂಡಲೆ ದಿಢೀರನೆ ಅಮಿತ್ ಶಾ ಬಳಿಗೆ ಹೋಗಲು ಯಡಿಯೂರಪ್ಪ ಅವರಿಗೆ ಸಮಯವಿದೆ. ಆದರೆ ಜನರು ಸಂಕಷ್ಟದಲ್ಲಿದ್ದಾಗ ಹೋಗಿ ಪರಿಹಾರ ಕೇಳಲು ಸಮಯ ಇರಲಿಲ್ಲ ಎಂದು ಟೀಕಿಸಿದರು.
ನೀತಿ ಸಂಹಿತೆ ಉಲ್ಲಂಘಿಸಿದ್ರು ಸಿಎಂ: ಐವನ್ ಆರೋಪ