ನೀತಿ ಸಂಹಿತೆ ಉಲ್ಲಂಘಿಸಿದ್ರು ಸಿಎಂ: ಐವನ್ ಆರೋಪ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಆರೋಪಿಸಿದ್ದಾರೆ. ಬಿಜೆಪಿಯವರ ಪರಿಸ್ಥಿತಿ ನೀರಿನಿಂದ ಹೊರ ಬಿಟ್ಟಮೀನಿನಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.ಚುನಾವಣೆ ಘೋಷಣೆಯಿಂದ ಬಿಜೆಪಿ ಕೊನೆ ದಿನಗಳು ಹತ್ತಿರ ಬರುತ್ತಿವೆ ಎಂದು ಟೀಕಿಸಿದರು.
ಮಂಗಳೂರು(ಸೆ.23): ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರಿಗೂ ತಮಗೂ ಸಂಬಂಧ ಇಲ್ಲ ಎಂದಿದ್ದ ಯಡಿಯೂರಪ್ಪ ಈಗ ಅಂತಹ ಶಾಸಕರನ್ನು ಕರೆಸಿ ಅಡ್ವಕೇಟ್ ಜನರಲ್ ಅವರೊಂದಿಗೆ ಬೆಂಗಳೂರಿನ ಅರಣ್ಯ ಇಲಾಖೆ ಗೆಸ್ಟ್ ಹೌಸ್‌ನಲ್ಲಿ ಸಭೆ ನಡೆಸಿದ್ದು ನೀತಿ ಸಂಹಿತೆಯ ಸ್ಪಷ್ಟಉಲ್ಲಂಘನೆ. ನೀತಿ ಸಂಹಿತೆ ಜಾರಿಯಾದ ಮೇಲೆ ಅದನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ಪಾಪ ಪಾಂಡು:
ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಪರಿಸ್ಥಿತಿ ‘ಪಾಪ ಪಾಂಡು’ ಆಗಿದೆ. ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಅವರಿಗೇ ಗೊತ್ತಿಲ್ಲ. ಬಿಜೆಪಿಯವರನ್ನೇ ನಿಲ್ಲಿಸಬೇಕಾ, ಕಾಂಗ್ರೆಸ್, ಜೆಡಿಎಸ್‌ನವರನ್ನೋ ಎಂಬ ಚಡಪಡಿಕೆಯಲ್ಲಿದ್ದಾರೆ. ಬಿಜೆಪಿಯವರ ಪರಿಸ್ಥಿತಿ ನೀರಿನಿಂದ ಹೊರ ಬಿಟ್ಟಮೀನಿನಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.ಚುನಾವಣೆ ಘೋಷಣೆಯಿಂದ ಬಿಜೆಪಿ ಕೊನೆ ದಿನಗಳು ಹತ್ತಿರ ಬರುತ್ತಿವೆ ಎಂದು ಟೀಕಿಸಿದರು.
ಸಂತತಿ ನಕ್ಷೆ ಹುಡುಕಾಟ:
ಉಪಚುನಾವಣೆಗೆ ಯಾರನ್ನು ನಿಲ್ಲಿಸಬೇಕೆಂದು ಬಿಜೆಪಿಯವರು ಮುಖಂಡರ ಸಂತತಿ ನಕ್ಷೆ ಹುಡುಕುತ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸಂತತಿ ನಕ್ಷೆಯ ಅಗತ್ಯವಿಲ್ಲ. ಸ್ವತಂತ್ರವಾಗಿ ಅಭ್ಯರ್ಥಿ ಹಾಕಿ ಗೆಲ್ಲುವ ಎಲ್ಲ ಸಾಮರ್ಥ್ಯವಿದೆ. ಎಲ್ಲ 15ರಲ್ಲಿ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ. ಅಭ್ಯರ್ಥಿ ಆಯ್ಕೆಗೆ ಈಗಾಗಲೇ 3 ಸುತ್ತಿನ ಸಭೆಗಳಾಗಿವೆ. ಮೈತ್ರಿ ಸರ್ಕಾರಕ್ಕೆ ದ್ರೋಹ ಮಾಡಿದವರಿಗೆ ಮತದಾರರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
24ರಂದು ಉಪವಾಸ ಸತ್ಯಾಗ್ರಹ:
ಕರಾವಳಿ, ಬೆಳಗಾವಿಯಲ್ಲಿ ಉಪವಾಸ: ಬಿಜೆಪಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲವಾಗಿರುವುದನ್ನು ಖಂಡಿಸಿ ಸೆ.24ರಂದು ಬೆಳಗಾವಿಯಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೃಹತ್ ಉಪವಾಸ ಸತ್ಯಾಗ್ರಹ ನಡೆಯಲಿದೆ. ಅದಕ್ಕೂ ಮುಂಚೆ 10 ಗಂಟೆಗೆ ಅಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ರಾಜ್ಯದ ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿದಂತೆ ಎಲ್ಲ ಜಿಲ್ಲೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಅದಾದ ಬಳಿಕ ಈ ತಿಂಗಳಾಂತ್ಯದೊಳಗೆ ಎಲ್ಲ ರಾಜ್ಯ ನಾಯಕರ ಒಗ್ಗೂಡುವಿಕೆಯಲ್ಲಿ ದಕ್ಷಿಣ ಕನ್ನಡದಲ್ಲೂ ಬೃಹತ್ ಉಪವಾಸ ಸತ್ಯಾಗ್ರಹ ಆಯೋಜಿಸಲಾಗುವುದು ಎಂದು ಐವನ್ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಅಪ್ಪಿ, ನಝೀರ್ ಬಜಾಲ್ ಇದ್ದರು.
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತೆಗೆ ಗಾಂಧಿ ಮೆರುಗು..!