Asianet Suvarna News Asianet Suvarna News

BSPಯಿಂದ 6 ಮಂದಿ ಉಚ್ಚಾಟನೆ : ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ

6 ಮಂದಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ನಿಷ್ಠಾವಂತರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

Protest Against 6 members Expelled From BSP in Hassan
Author
Bengaluru, First Published Nov 27, 2019, 2:39 PM IST

ಬೇಲೂರು[ನ.27]: ಬಹುಜನ ಸಮಾಜ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟಿಸಿರುವ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಗಂಗಾಧರ್‌ ಬಹುಜನ ಅವರ ವಿರುದ್ಧ ಸೋಮವಾರ ಪಟ್ಟಣದಲ್ಲಿ ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ತಾಲೂಕು ಮುಖಂಡ ತೀರ್ಥೇಶ್‌ ಮಾತನಾಡಿ, ಬಿಎಸ್‌ಪಿ ಒಂದು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆಯುವಂತಹ ಶಕ್ತಿ ಹೊಂದಿದ್ದು, ಬಿಎಸ್‌ಪಿಗೆ ತಾಲೂಕಿನಲ್ಲಿ ನೆಲೆ ಇಲ್ಲದ ಸಂದರ್ಭದಲ್ಲಿ ಬಿಎಸ್‌ ಪಿ ಪಕ್ಷವನ್ನು ಸುಮಾರು 20 ವರ್ಷಕ್ಕೂ ಹೆಚ್ಚು ಕಾಲದಿಂದ ಪಕ್ಷವನ್ನು ಬಲ ಪಡಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷವನ್ನು ಕಟ್ಟಿಬೆಳೆಸಿದಂತ ನಿಷ್ಠಾವಂತ ಕಾರ್ಯಕರ್ತರನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅವರನ್ನು ಉಚ್ಚಾಟನೆ ಮಾಡಲು ರಾಜ್ಯ ಅಧ್ಯಕ್ಷರಿಗೆ ಇಲ್ಲ ಸಲ್ಲದ ಸುಳ್ಳು ಹೇಳಿ, ನಿಷ್ಟಾವಂತ ಕಾರ್ಯಕರ್ತರನ್ನು ಉಚ್ಚಾಟಿಸಿರುವುದು,ನಿಜಕ್ಕೂ ನಾಚಿಕೆ ಗೇಡಿನ ವಿಚಾರ. ತಕ್ಷಣವೇ ಎಚ್ಚೆತ್ತುಕೊಂಡು ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಶೀಘ್ರ ಕ್ರಮ ಕೈಗೊಳ್ಳಲಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಎಸ್‌ಪಿ ಮುಖಂಡ ಶಶಿಧರ ಮೌರ್ಯ ಮಾತನಾಡಿ, ಸಂಘಟನೆ ವಿಷಯದಲ್ಲಿ ಯೋಗಣ್ಣ ಎಂದಿಗೂ ಸಹ ಮುಂದೆ. ಆದರೆ, ಕೆಲ ಕುತಂತ್ರಿಗಳು ಮಾಡಿದಂತಹ ದುಡುಕಿನ ನಿರ್ಧಾರದಿಂದಾಗಿ ಇಂದು ಯೋಗಣ್ಣ ಸೇರಿದಂತೆ ಒಟ್ಟು 6 ಜನರನ್ನು ಉಚ್ಚಾಟಿಸಿರುವ ಅವರ ಕ್ರಮ ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ಮುಖಂಡರಾದ ವೆಂಕಟೇಶ್‌, ಶಿವಕುಮಾರ್‌, ಮಧುಸೂದನ್‌, ರಘು, ಯೋಗಿಶ್‌, ಶಾರದಮ್ಮ, ಪುಷ್ಪ, ರಾಧಾಮಣಿ, ಜ್ಯೋತಿ ಇತರರು ಇದ್ದರು.

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios