ಬಾದಾಮಿ(ಆ.20): ಮಂಗಳವಾರ ರಾತ್ರಿಯಿಂದ ಮಲಪ್ರಭಾ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದ ಸುಮಾರು 15ಕ್ಕೂ ಹೆಚ್ಚು ಕೋತಿಗಳನ್ನು (ಮಂಗ) ರಕ್ಷಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

"

ಚಿಕ್ಕನಸಬಿ ಗ್ರಾಮದ ನದಿ ಪಕ್ಕದ ಗಿಡವೊಂದರಲ್ಲಿ ಎಂದಿನಂತೆ ಕೋತಿಗಳು ರಾತ್ರಿ ಮಲಗಿಕೊಂಡಿವೆ. ನವಿಲು ತೀರ್ಥ ಜಲಾಶಯದಿಂದ ಕಳೆದ ನಾಲ್ಕೈದು ದಿನಗಳಿಂದ ಮಲಪ್ರಭಾ ನದಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಆ ಮರವು ಜಲಾವೃತವಾಗಿದೆ. ಬೆಳಗ್ಗೆ ಕೋತಿಗಳು ಅದನ್ನು ನೋಡಿ ಭೀತಿಗೊಂಡಿವೆ. 

ಮಲಪ್ರಭೆ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ನವಿಲು ರಕ್ಷಣೆ

ಬೆಳಗ್ಗೆ 10 ಗಂಟೆವರೆಗೂ ಕಾಯ್ದು ಕುಳಿತಿವೆ. ಅಷ್ಟಾದರೂ ನೀರು ಕಡಿಮೆಯಾಗದ್ದರಿಂದ ಒಂದೊಂದಾಗಿ ಆ ಮರದಿಂದ ಪ್ರವಾಹದ ನೀರಿನಲ್ಲಿಯೇ ಜಿಗಿದು ಪಾರಾಗಾಲು ಯತ್ನಿಸಿವೆ. ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಕೋತಿಗಳನ್ನು ರಕ್ಷಿಸಿದ್ದಾರೆ.