ತುರುವೇಕೆರೆ (ಡಿ.16):  ವೇಶ್ಯವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಮೀನಾಕ್ಷಿ ನಗರದ ಮೂರ್ತಿ, ಸುಂಕಲಾಪುರದ ರಾಮಲಿಂಗಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಉಡಿಸಲಮ್ಮದೇವಿ ದೇವಸ್ಥಾನದ ಪಕ್ಕದಲ್ಲಿದ್ದ ಕೃಷ್ಣ ಎಂಬುವವರ ಮನೆಯನ್ನು ಪ್ರಮುಖ ಆರೋಪಿ ಮೂರ್ತಿ ಬಾಡಿಗೆ ಪಡೆದು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದನೆಂದು ಹೇಳಲಾಗಿದೆ. 

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ..ಗ್ರಾಹಕರನ್ನು ಸೆಳೆಯಲು ಎಂಥಾ ಪ್ಲಾನ್!

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‌ಐ ಪ್ರೀತಮ್‌ ನೇತೃತ್ವದ ತಂಡ ದಾಳಿ ಮಾಡಿ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರು ಸಂತ್ರಸ್ತ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಸಂತ್ರಸ್ತ ಮಹಿಳೆಯರನ್ನು ಅವರ ಪೋಷಕರ ವಶಕ್ಕೆ ನೀಡಲಾಗಿದೆ. ಈ ಸಂಬಂಧಪಟ್ಟಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.