ಬೆಂಗಳೂರು(ಡಿ.  10)  ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲವೊಂದು ಬಯಲಾಗಿದೆ.  ಪೂರ್ವ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ಮಾಡಿದ್ದಾರೆ.  ರಾಮಮೂರ್ತಿ ನಗರದ ರೆಸಿಡೆನ್ಶಿಯಲ್ ಏರಿಯಾದಲ್ಲಿ ದಂಧೆ ನಡೆಸುತ್ತಿದ್ದ  ಉಗಾಂಡಾದ ಮಹಿಳೆಯನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಇಬ್ಬರು ನಕ್ಕಾಜಿ ಫೈನಾಹಾ ಮತ್ತು ಫೈಜುಲ್ಲಾ ಅಹ್ಮದ್ ಎಂದು ಗುರುತಿಸಲಾಗಿದೆ. ಫೈನಾಹಾ ಉಗಾಂಡಾದ ಪ್ರಜೆಯಾಗಿದ್ದರೆ, ಅಹ್ಮದ್ ರಾಮಮೂರ್ತಿ ನಗರದ ನಿವಾಸಿ.

ಸಿಸಿಬಿಯ ಮಹಿಳಾ ಸಂರಕ್ಷಣಾ ವಿಭಾಗಕ್ಕೆ ವಸತಿ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ  ಎಂಬ ಸುಳಿವು ಸಿಕ್ಕಿತ್ತು.  ಮಾಹಿತಿ ಆಧರಿಸಿ ದಾಳಿ ಮಾಡಿದಾಗ  ಗ್ರಾಹಕರು ಸಹ ಇದ್ದರು!

ಹೊರಗೆ ಸ್ಪಾ... ಒಳಗೆ ವಯಾಗ್ರಗಳ ರಾಶಿ ರಾಶಿ

ಜಾಲದಿಂದ ಮಹಿಳೆಯರನ್ನು ರಕ್ಷಣೆ ಮಾಡಿ ಸುರಕ್ಷಿತ ಜಾಗಕ್ಕೆ ಕಳಿಸಿಕೊಡಲಾಗಿದೆ. ವಿದೇಶಿ ಆರೋಪಿ ಬಳಿ ಪಾಸ್ ಪೋರ್ಟ್ ಸಹ ಇಲ್ಲವಾಗಿದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ವಿದೇಶಿಯರು ಒಂದು ವರ್ಷದ ಹಿಂದೆ ಫೈಜುಲ್ಲಾ ಅಹ್ಮದ್ ಒಡೆತನದ ಅಪಾರ್ಟ್ಮೆಂಟ್ ನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ನಂತರ ಇಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಟೂರಿಸ್ಟ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ವಿದೇಶಿ ಮಹಿಳೆ ಅವಧಿ ಮುಗಿದರೂ ಇಲ್ಲಿಯೇ ಇದ್ದರು ಎಂಬುದು ಪ್ರಾಥಮಿಕ ಮಾಹಿತಿ.

ಗ್ರಾಹಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್: 
ವೇಶ್ಯಾವಾಟಿಕೆ ನಡೆಯುತ್ತಿದ್ದು ಇಲ್ಲಿಗೆ ಬನ್ನಿ ಎಂಬ ಅರ್ಥದಲ್ಲಿ ವಿದೇಶಿ ಮಹಿಳೆ ಜಾಹೀರಾತನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಳು. ವಿದೇಶಿ ಮಹಿಳೆ ಮತ್ತು ಅಹಮದ್ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ದಾಳಿ ವೇಳೆ ಅಲ್ಲಿದ್ದ ಗ್ರಾಹಕರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳಿಸಿಕೊಟ್ಟು ಹೇಳಿಕೆ ಪಡೆದುಕೊಳ್ಳಲಾಗಿದೆ.