ದೇವಸ್ಥಾನದ ಕೆರೆಗಳಿಗೆ ಅಲಂಕಾರಿಕ ಮೀನು: ಸಚಿವ ಕೋಟ
ದೇವಸ್ಥಾನ ಹಾಗೂ ಇತರ ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕಾ ಮೀನುಗಳನ್ನು ಸಾಕಣೆಗೆ ನೀಡಲು ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಹೇಳಿದ್ದಾರೆ. ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕ ಮೀನುಗಳನ್ನು ಸಾಕಾಣಿಕೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಉಡುಪಿ(ಸೆ.29): ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿರುವ ಕೆರೆಗೆ ಅಲಂಕಾರಿಕ ಮೀನು ಸಾಣಿಕೆಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಮೀನುಗಳನ್ನು ಬಿಡುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕ ಮೀನುಗಳನ್ನು ಸಾಕಾಣಿಕೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣದ ಕೆರೆ, ದೇವಸ್ಥಾನದ ಕೆರೆಗಳಿಗೆ ಅಲಂಕಾರಿಕ ಮೀನು ಬಿಡುವ ಯೋಜನೆ ರೂಪಿಸಲಾಗುವುದ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ನೇತ್ರಾವತಿ ಸೇತುವೆಯಲ್ಲಿ ಮತ್ತೊಂದು ಆತ್ಮಹತ್ಯೆ: ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ
ಇಲಾಖೆಯ ಉಪ ನಿರ್ದೇಶಕ ಗಣೇಶ್ ಮೀನು ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ದಿನಕರ ಬಾಬು, ಇಲಾಖೆಯ ಮುಖ್ಯಸ್ಥ ಶಿವಕುಮಾರ್, ಕಿರಣ್, ಚಂದ್ರಶೇಖರ್,ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ, ಪಿಡಿಒ ಶೈಲಾ ಎಸ್. ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ ಹಾಗೂ ಕಾರಂತ ಥೀಮ್ ಪಾರ್ಕ್ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ನಮ್ ಕಡೆ ಮಾತ್ ಕೇಳಿದ್ರೆ ಎದೆ ಹೊಡ್ಕೋತೀರಿ: ಉಡುಪಿಯಲ್ಲಿ ಶ್ರೀರಾಮುಲು ಹಾಸ್ಯ ಚಟಾಕಿ