* ಇಂದು ಹಲಸೂರಿನಲ್ಲಿ ಮದ್ಯ ಮಾರಾಟ ನಿಷೇಧ* ಕೋದಂಡರಾಮಲಿಂಗೇಶ್ವರ ಸ್ವಾಮಿ ಹಾಗೂ ವಿವಿಧ ದೇವರ ಪಲ್ಲಕ್ಕಿ ಉತ್ಸವ* ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ
ಬೆಂಗಳೂರು(ಏ.11): ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಬಾರ್(Bar), ವೈನ್ಸ್‌ಶಾಪ್, ಪಬ್‌ಗಳು ಸೇರಿದಂತೆ ಎಲ್ಲಾ ರೀತಿಯ ಮದ್ಯ(Alcohol) ಮಾರಾಟ ಅಂಗಡಿಗಳಲ್ಲಿ ಏ.11ರಂದು ಬೆಳಗ್ಗೆ 6ರಿಂದ ಏ.12ರ ಸಂಜೆ 5ರವರೆಗೆ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant) ಆದೇಶಿಸಿದ್ದಾರೆ.
ನಗರದ ಪೊಲೀಸ್ ಪೂರ್ವ ವಿಭಾಗದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋದಂಡರಾಮಲಿಂಗೇಶ್ವರ ಸ್ವಾಮಿ ಹಾಗೂ ವಿವಿಧ ದೇವರ ಪಲ್ಲಕ್ಕಿ ಉತ್ಸವ(God Pallakki Utsava) ಜರುಗಲಿದೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಮದ್ಯಪ್ರಿಯರಿಗೆ ಚಡಪಡಿಕೆ, ಕರ್ನಾಟಕದಲ್ಲಿ ‘ಎಣ್ಣೆ’ ಸಿಗಲ್ಲ!
ನಾಡಿದ್ದು ವಿವಿಧ ವ್ಯಾಪ್ತಿ ಮದ್ಯ ಮಾರಾಟ ನಿಷೇಧ
ನಗರ ಪೊಲೀಸ್ ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಬಾರ್, ವೈನ್ಸ್‌ಶಾಪ್, ಪಬ್‌ಗಳು ಸೇರಿದಂತೆ ಎಲ್ಲ ರೀತಿಯ ಮದ್ಯ ಮಾರಾಟ ಅಂಗಡಿಗಳಲ್ಲಿ ಏ.13ರಂದು ಬೆಳಗ್ಗೆ 6ರಿಂದ ಏ.14ರ ಸಂಜೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ನಗರದ ಪೊಲೀಸ್ ಪೂರ್ವ ವಿಭಾಗದ ಭಾರತೀ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಯಾಲಮ್ಮ ದೇವಾಲಯದಲ್ಲಿ(Temple) ರಥೋತ್ಸವ(Fair) ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೂರ್ವ ವಿಭಾಗದ ಪುಲಿಕೇಶಿ ನಗರ, ಭಾರತೀನಗರ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್, ಡಿ.ಜೆ.ಹಳ್ಳಿ ಮತ್ತು ಉತ್ತರ ವಿಭಾಗದ ಜೆ.ಸಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ವಿಸ್ಕಿಯನ್ನು ಐಸ್ ಹಾಕಿ ಕುಡಿಯಬಾರದು ಅಂತಾರಲ್ಲ ಯಾಕೆ ?
ರಾಯಚೂರಲ್ಲಿ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮದ್ಯ ಮಾರಾಟ ದಂಧೆ..!
ರಾಯಚೂರು(ಏ.09): ಬಿಸಿಲುನಾಡು ರಾಯಚೂರು(Raichur) ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ರಾಯಚೂರು ಸಿಟಿಯಲ್ಲಿ ಸಿಎಚ್ ಪೌಡರ್ ಮಾರಾಟ ದಂಧೆಯೂ ಜೋರಾಗಿ ನಡೆದಿದೆ. ಇಂತಹ ದಂಧೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಪೊಲೀಸರು(Police) ಹಗ್ಗಲು ಮತ್ತು ರಾತ್ರಿ ಗಸ್ತು ತಿರುಗಿದ್ರು. ದಂಧೆಕೋರರು ಮಾತ್ರ ಕಳ್ಳ ಮಾರ್ಗದ ಮುಖಾಂತರ ರಾಯಚೂರು ಸಿಟಿಗೆ ಎಂಟ್ರಿ ಕೊಟ್ಟು, ಸಿಎಚ್ ಪೌಡರ್ ಮಿಶ್ರಿತ ಹೆಂಡ ಮಾರಾಟ ಮಾಡುವುದು ಮಾತ್ರ ನಿಲ್ಲಿಸುತ್ತಿಲ್ಲ.
ಇಷ್ಟು ದಿನಗಳ ಕಾಲ ಬೈಕ್, ಕಾರು, ಬುಲೇರೋ ವಾಹನಗಳನ್ನ ಬಳಸಿ ಅಕ್ರಮ ಸೇಂಧಿ ಸಾಗಾಟ ಮಾಡುತ್ತಿದ್ರು. ಇದಕ್ಕೆ ಅಬಕಾರಿ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಕೆಲ ದಂಧೆಕೋರರು ನದಿಯಲ್ಲಿ ತೆಪ್ಪದ ಮೂಲಕವೂ ಅಕ್ರಮ ಸೇಂದಿ ತಂದುಕೊಂಡು ಬಂದು ಲಾಕ್ ಆಗಿದ್ರು. ಆದ್ರೀಗ ಮತ್ತೊಂದೆಜ್ಜೆ ಮುಂದೆ ಹೋಗಿರೋ ದಂಧೆಕೋರರು ಆಂಧ್ರ(Andhra Pradesh) ಮತ್ತು ತೆಲಂಗಾಣದಿಂದ(Telangana) ಬರುವ ರೈಲುಗಳಲ್ಲಿ(Railway) ಸಿಎಚ್ ಪೌಂಡರ್ ಸಾಗಾಟ ದಂಧೆ ನಡೆಸಿದ್ರು. ಕೂಲಿಕಾರ್ಮಿಕರ ವೇಷದಲ್ಲಿ ಚೀಲಗಳಲ್ಲಿ ಅಕ್ರಮ ಸೇಂಧಿಯ ಬಾಟಲ್ಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡಿ ಹೋಗುತ್ತಿದ್ರು. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಚೆಕ್ ಮಾಡುವಾಗ ಸಿಎಚ್ ಪೌಂಡರ್ ಸೇಂಧಿ ಸಮೇತ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ದಂಧೆಕೋರರು ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದರು.
