ವಿಜಯಪುರ, (ಜೂನ್.19): ಕರ್ನಾಟಕದ ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ  ಪ್ರೊ.ಓಂಕಾರ ಕಾಕಡೆ ಅವರನ್ನು ನೇಮಕ ಮಾಡಲಾಗಿದೆ.

 ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಓಂಕಾರ ಕಾಕಡೆ ಅವರನ್ನು ನೇಮಕ ಮಾಡಿ ರಾಜ್ಯಪಾಲ ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ವಜುಬಾಯಿ ವಾಲಾ ಅವರು ಇಂದು (ಶುಕ್ರವಾರ) ಆದೇಶ ಹೊರಡಿಸಿದ್ದಾರೆ.  

ಚೀನಿ ವಸ್ತು ನಿರ್ಬಂಧಕ್ಕೆ ಮುಂದಾದ ಇಂಡಿಯಾ, ಬಾಲಿವುಡ್‌ನಲ್ಲಿ ಮ್ಯೂಸಿಕ್ ಮಾಫಿಯಾ;ಜೂ.19ರ ಟಾಪ್ 10 ಸುದ್ದಿ!

ಕುಲಪತಿಯಾಗಿ 4 ವರ್ಷಗಳ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಪ್ರೊ.ಸಬಿಹಾ ಭೂಮಿಗೌಡ ಅವರು ಇಂದು (ಜೂನ್ 19) ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕುರ್ಚಿಗೆ ಪ್ರೊ.ಓಂಕಾರ ಕಾಕಡೆ ಅವರನ್ನ ನೇಮಿಸಲಾಗಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ- 2000ನ ಸೆಕ್ಷನ್ 16 (2) ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ಈ ನೇಮಕ ಮಾಡಲಾಗಿದೆ. 

ಅಧಿಕಾರ ಹಸ್ತಾಂತರ
 ರಾಜ್ಯಪಾಲರ ಆದೇಶದಂತೆ ಪ್ರೊ.ಸಬಿಹಾ ಭೂಮಿಗೌಡ ಅವರು ನೂತನ ಕುಲಪತಿ ಪ್ರೊ.ಓಂಕಾರ ಕಾಕಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸರಳ ಸಮಾರಂಭದಲ್ಲಿ ನಾಲ್ಕು ವರ್ಷ ಸೇವೆ  ಸಲ್ಲಿಸಿ ನಿವೃತ್ತರಾದ ಪ್ರೊ.ಸಬಿಹಾ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.