ಇಲ್ಲಿನ ಪ್ರತಿಷ್ಠಿತ ಕರ್ನಾಟಕ ಸಂಘದ 2024-25, 2025-26 ಮತ್ತು 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘದ ಅಧ್ಯಕ್ಷರಾಗಿ ಪ್ರೊ.ಎಚ್‌.ಆರ್‌. ಶಂಕರನಾರಾಯಣ ಆಯ್ಕೆಯಾಗಿದ್ದಾರೆ. 

ಶಿವಮೊಗ್ಗ (ಅ.11): ಇಲ್ಲಿನ ಪ್ರತಿಷ್ಠಿತ ಕರ್ನಾಟಕ ಸಂಘದ 2024-25, 2025-26 ಮತ್ತು 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘದ ಅಧ್ಯಕ್ಷರಾಗಿ ಪ್ರೊ.ಎಚ್‌.ಆರ್‌. ಶಂಕರನಾರಾಯಣ ಆಯ್ಕೆಯಾಗಿದ್ದಾರೆ. ಗುರುವಾರ ಸಭೆ ಸೇರಿದ ನೂತನ ನಿರ್ದೇಶಕರು ಮುಂದಿನ ಸಾಲಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದರು. 

ಅಧ್ಯಕ್ಷರಾಗಿ ಪ್ರೊ.ಎಚ್.ಆರ್.ಶಂಕರ ನಾರಾಯಣಶಾಸ್ತ್ರಿ, ಉಪಾಧ್ಯಕ್ಷರಾಗಿ ಡಾ.ಎಸ್.ನಾಗಮಣಿ, ಕಾರ್ಯದರ್ಶಿಯಾಗಿ ಎಸ್‌.ವೈ.ವಿನಯ್, ಸಹಾಯ ಕಾರ್ಯದರ್ಶಿಯಾಗಿ ಎಸ್‌.ಎಸ್‌.ವಾಗೀಶ್, ಕೋಶಾಧ್ಯಕ್ಷರಾಗಿ ಎಚ್‌. ಡಿ. ಮೋಹನ ಶಾಸ್ತ್ರಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೆ.ಎಸ್‌.ಚೇತನ್ ಅವರನ್ನು ಆಯ್ಕೆ ಮಾಡಲಾಯಿತು. 94 ವರ್ಷ ಇತಿಹಾಸವಿರುವ ಕರ್ನಾಟಕದಲ್ಲೇ ಅತಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಶಿವಮೊಗ್ಗದ ಕರ್ನಾಟಕ ಸಂಘವನ್ನು ಕುವೆಂಪು, ಬೇಂದ್ರೆಯವರು ಬೆಳೆಸಿದ್ದರು. 

ದೇಶದ ಶ್ರೇಷ್ಠ ಉದ್ಯಮಿಯಾಗಿದ್ದರೂ ಆಡಂಬರವಿಲ್ಲದೆ ಉಡುಪಿಗೆ ಬಂದಿದ್ದ ರತನ್ ಟಾಟಾ!

ಕರ್ನಾಟಕ ಸಂಘ ಚುನಾವಣೆ: ನಗರದ ಪ್ರತಿಷ್ಠಿತ ಕರ್ನಾಟಕ ಸಂಘದ ಮೂರು ವರ್ಷದ ಅವಧಿಗೆ ಕಾರ್ಯಕಾರಿ ಸಮಿತಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಚ್.ಡಿ.ಮೋಹನ ಶಾಸ್ತ್ರಿ ಬಣದ 15 ಅಭ್ಯರ್ಥಿಗಳ ಪೈಕಿ 14 ಮಂದಿ ಜಯ ಗಳಿಸಿದ್ದಾರೆ. ಎದುರಾಳಿ ಕತ್ತಿಗೆ ಚೆನ್ನಪ್ಪ ಬಣದಿಂದ ಆರ್.ಎಸ್.ಹಾಲಸ್ವಾಮಿ ಮಾತ್ರ ಗೆಲುವು ಸಾಧಿಸಿದ್ದಾರೆ. 2024-25ರಿಂದ 2026-27ನೇ ಸಾಲಿನವರೆಗೆ ಕಾರ್ಯಕಾರಿ ಮಂಡಳಿಗೆ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಬೆಳಗ್ಗೆಯಿಂದ ಮತದಾನ ನಡೆದು ಸಂಜೆ ವೇಳೆಗೆ ಫಲಿತಾಂಶ ಹೊರಬಿದ್ದಿದ್ದು ಮೋಹನ್‌ಶಾಸ್ತ್ರಿ ಬಣ ಮೇಲುಗೈ ಸಾಧಿಸಿದೆ.