ಮಂಡ್ಯ(ಫೆ.02): ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಪಡಿತರ ವಿತರಣೆ ಯೋಜನೆ ಸರ್ವರ್‌ ಸಮಸ್ಯೆಯಿಂದಾಗಿ ಕೂಲಿ ಬಿಟ್ಟು ಕಾಯುವ ಪರಿಸ್ಥಿತಿ ಭಾರತೀನಗರ ಗ್ರಾಮಾಂತರ ಪ್ರದೇಶದಲ್ಲಿ ಎದುರಾಗಿದೆ.

ಸಹಕಾರಿ ವ್ಯವಸ್ಥೆಯಡಿ ಪಡಿತರ ವಿತರಣೆ ಜಾರಿಗೊಳಿಸಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ಪಡಿತರದಾರರು ಕೂಲಿ ಬಿಟ್ಟು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಪಡಿತರ ಸಿಗದೆ ಹೈರಾಣಾಗುತ್ತಿದ್ದಾರೆ.

ಬಜೆಟ್‌ನಲ್ಲಿ ಮೋದಿ ಭರವಸೆ ಈಡೇರಿಸಿಲ್ಲ: ಈಶ್ವರ ಖಂಡ್ರೆ

ಭಾರತೀನಗರ, ಹಾಗಲಹಳ್ಳಿ, ಮೆಣಸಗೆರೆ, ಅಣ್ಣೂರು, ಕೆ.ಪಿ.ದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಹಕಾರ ಸಂಘಗಳಲ್ಲಿ ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ವಿತರಣೆ ಮಾಡಲಾಗುತ್ತಿದೆ. ಪಡಿತರ ವಿತರಣೆಯಲ್ಲಿನ ಅಕ್ರಮ ತಡೆಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಪಡಿತರದಾರರಲ್ಲಿ ಒಬ್ಬರು ಹೆಬ್ಬೆಟ್ಟು ಮುದ್ರೆ ಒತ್ತಿದರೆ ಅದು ಸರಿಯಾಗಿದ್ದಲ್ಲಿ ಪಡಿತರ ವಿತರಣೆ ಮಾಡಲಾಗುತ್ತದೆ.

ಸರತಿ ಸಾಲಿನಲ್ಲಿ ನಿಲ್ಲುವುದು ಸವಾಲು:

ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೆ ಸರ್ವರ್‌ ಸಮಸ್ಯೆ ಮಾತ್ರ ಕಾಡುತ್ತದೆ. ಕೆæಲ ಕಾಲ ಸೇವೆ ಲಭ್ಯವಾದರೆ ಮೂರ್ನಾಲ್ಕು ಪಡಿತರದಾರರಿಗೆ ಪಡಿತರ ಸಿಗುವಷ್ಟರಲ್ಲಿ ಸಮಸ್ಯೆಯುಂಟಾಗಲಿದ್ದು ಗಂಟೆಗಟ್ಟಲೆ ಸವರ್ರ ಸಿಗುವುದೇ ಇಲ್ಲ. ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವ ಬಡಜನತೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಮುಂದೆ ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸವಾಲಿನಂತಾಗಿರುವ ಸರತಿ ಸಾಲಿನಲ್ಲಿ ನಿಂತರು ಪಡಿತರ ಸಿಗುತ್ತಿಲ್ಲ. ಕೂಲಿಗೂ ಹೋಗುವಂತಿಲ್ಲ. ಇತ್ತ ಆಹಾರ ಧಾನ್ಯವೂ ಸಿಗುತ್ತಿಲ್ಲ.

ಎರಡು ಮೂರು ದಿನ ಪಡಿತರ ಇಲ್ಲ:

ಸರ್ವರ್‌ ಸಮಸ್ಯೆ ದೊಡ್ಡ ಕಗ್ಗಂಟಾಗಿದೆ. ಎರಡು ಮೂರು ದಿನ ಕಾದರೂ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಗಡಿ ಮಾಲೀಕರು ಕೈಚೆಲ್ಲಿ ಕೂತಿದ್ದಾರೆ. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಬಡಜನರ ಗೋಳು ಕೇಳುವರಿಲ್ಲ. ತುತ್ತಿನ ಕೂಳಿಗಾಗಿ ದಿನದ ಕೂಲಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಡಿತರದಾರರು ಕಿಡಿಕಾರಿದ್ದಾರೆ.

ತಿಂಗಳ ಅಂತ್ಯದೊಳಗೆ ಪಡಿತರ ಆಹಾರ ಸಿಗದಿದ್ದರೆ ಸರ್ಕಾರಕ್ಕೆ ಹಿಂತಿರುಗಿಸಲಾಗುತ್ತದೆ. ಬಡಜನರಿಗಾಗಿ ರೂಪಿಸಿದ ಈ ಯೋಜನೆ ಯಾವುದಕ್ಕೂ ಪ್ರಯೋಜನವಿಲ್ಲದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಪಡಿತರ ಆಹಾರ ಸಿಗುವಂತೆ ಸಮರ್ಪಕ ಸರ್ವರ್‌ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪಡಿತರದಾರರು ಆಗ್ರಹಿಸಿದ್ದಾರೆ.

ನಾಪೋಕ್ಲಿನಲ್ಲಿ ವರ್ಷದ ಮೊದಲ ಮಳೆ

ಪ್ರತಿನಿತ್ಯವೂ ಸರ್ವರ್‌ ಸಮಸ್ಯೆಯಿಂದ ಸಮರ್ಪಕವಾಗಿ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಜನರು ದಿನಗಟ್ಟಲೆ ಕಾದರೂ ಪಡಿತರ ಸಿಗುತ್ತಿಲ್ಲ. ಸರ್ವರ್‌ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ ಹಾಗಲಹಳ್ಳಿಯ ನ್ಯಾಯಬೆಲೆ ಅಂಗಡಿ ಮಾಲೀಕ ಪುಟ್ಟಲಿಂಗೇಗೌಡ ಹೇಳಿದ್ದಾರೆ.

ನಿಗದಿತ ಅವಧಿಯೊಳಗೆ ಪಡಿತರದಾರರಿಗೆ ಪಡಿತರ ಪದಾರ್ಥಗಳನ್ನ ವಿತರಿಸಬೇಕು. ಇದು ಸರ್ಕಾರದ ಉದ್ದೇಶವಾದರೂ ಇಲ್ಲಿನ ಕೆಲವು ಆಡಳಿತ ಮಂಡಳಿ ಮತ್ತು ನೌಕರರು ತಮಗೆ ಇಷ್ಟಬಂದಂತೆ ಮಳಿಗೆ ತೆರೆದು ಒಂದಷ್ಟುಬಡ ಜನರಿಗೆ ವಿತರಿಸಿ ಸರ್ವರ್‌ ಸಮಸ್ಯೆ ಎದುರಾಗಿದೆ ಎಂದು ಅಂಗಡಿಗೆ ಮುಚ್ಚಿಕೊಳ್ಳುತ್ತಾರೆ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದ್ದಾರೆ.Problems in Public distribution system in mandya

-ಅಣ್ಣೂರು ಸತೀಶ್‌