ಮಡಿಕೇರಿ(ಫೆ.02): ಒಂದೆಡೆ ವಿಪರೀತ ಚಳಿ, ಕೆಲವು ಕಡೆ ಬಿಸಲು ಇದ್ದರೆ ಮಡಿಕೇರಿಯಲ್ಲಿ ಮಾತ್ರ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆ ಇದಾಗಿದ್ದು, ಶನಿವಾರ ಮಧ್ಯಾಹ್ನನ ನಂತರ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯ ನಾಪೋಕ್ಲು ಭಾಗದಲ್ಲಿ ಶನಿವಾರ ವರ್ಷದ ಮೊದಲ ಮಳೆಯಾಗಿದ್ದು, ಇಳೆಯನ್ನು ತಂಪಾಗಿಸಿದೆ. ಶನಿವಾರ ಮಧ್ಯಾಹ್ನದ ಬಳಿಕ ಪಟ್ಟಣ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣ ಮನೆ ಮಾಡಿ ಸಾಧಾರಣ ಮಳೆಯಾಗಿದೆ.

ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಕಾರಣಕರ್ತ ಜೈಲಿಗೆ

ಈ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನ ಕೆಲಸ ಬಿರುಸಿನಿಂದ ಸಾಗುತ್ತಿದ್ದು ಮನೆಯಂಗಳದಲ್ಲಿ ಬೆಳೆಗಾರರು ಕಾಫಿಯನ್ನು ಒಣಗಲು ಹಾಕಿದ್ದು ದಿಢೀರ್‌ ಆಗಿ ಸುರಿದ ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ಒಣಗಲು ಹರಡಿದ್ದ ಕಾಫಿಯನ್ನು ಮುಚ್ಚಿಡಲು ಬೆಳೆಗಾರರು ಪರದಾಡುವಂತಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿತು.