ಅದು ಜಗತ್ತಿಗೆ ರಾಮಾಯಣ ಬೋಧಿಸಿದ ಆದಿಕವಿಯ ಹೆಸರಿನ ಕಟ್ಟಡ. 8 ವರ್ಷಗಳ ಹಿಂದೆ 3 ಕೋಟಿ 50 ಲಕ್ಷದಲ್ಲಿ ಆರಂಭಗೊಂಡ ಆ ಬೃಹತ್ ಬಿಲ್ಡಿಂಗ್ ಗೆ ಇಂದಿಗೂ ಇಲ್ಲ ಉದ್ಘಾಟನೆ ಭಾಗ್ಯ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.11): ಅದು ಜಗತ್ತಿಗೆ ರಾಮಾಯಣ ಬೋಧಿಸಿದ ಆದಿಕವಿಯ ಹೆಸರಿನ ಕಟ್ಟಡ. 8 ವರ್ಷಗಳ ಹಿಂದೆ 3 ಕೋಟಿ 50 ಲಕ್ಷದಲ್ಲಿ ಆರಂಭಗೊಂಡ ಆ ಬೃಹತ್ ಬಿಲ್ಡಿಂಗ್ ಗೆ ಇಂದಿಗೂ ಇಲ್ಲ ಉದ್ಘಾಟನೆ ಭಾಗ್ಯ. ಶೇ.80 ರಷ್ಟು ಕೆಲಸ ಮುಗ್ದಿರೋ ಆ ಬೃಹತ್ ಕಟ್ಟಡವಿಂದು ಕುಡುಕರ ಅಡ್ಡೆಯಾಗಿದೆ. ಅಂದು 3 ಕೋಟಿ 50 ಹಣ ಕೊಟ್ಟ ಕಾಂಗ್ರೆಸ್ ಸರ್ಕಾರವೇ ಇಂದು 57 ಲಕ್ಷ ನೀಡದೆ ಸಮೃದ್ಧವಾಗಿರೋ ಕಟ್ಟಡವನ್ನ ಹಾಳು ಕೊಂಪೆ ಮಾಡಿದೆ. ಸರ್ಕಾರ ಗ್ಯಾರಂಟಿಗೆ ದುಡ್ಡು ಸುರಿಯುತ್ತಿರೋದ್ರಿಂದ್ಲೇ ಹಣ ಕೊಡ್ತಿಲ್ಲ ಎಂದು ಸಮುದಾಯದ ಜನ ಸರ್ಕಾರದ ವಿರುದ್ಧ ಕಿಡಿಕಾರ್ತಿದ್ದಾರೆ.
ಕಿಟಕಿ ಗಾಜು ಪುಡಿ ಪುಡಿ: ಚಿಕ್ಕಮಗಳೂರು ನಗರದಲ್ಲಿ ನಿರ್ಮಾಣವಾಗಿರೋ ಅದಿಕವಿ ವಾಲ್ಮೀಕಿ ಹೆಸರಿನ ವಾಲ್ಮೀಕಿ ಭವನ ಉದ್ಘಾಟನೆಗೂ ಮುನ್ನವೇ ದುಸ್ಥಿತಿಗೆ ತಲುಪಿದೆ.ಕಟ್ಟಡದ ಮೇಲ್ಭಾಗದಲ್ಲಿ ಬಿಯರ್ ಬಾಟಲಿಗಳು,ಕಟ್ಟಡದ ಹೊರಭಾಗದ ಮೆಟ್ಟಿಲುಗಳ ಮೇಲೆ ಬೆಳೆದಿರೋ ಗಿಡ-ಘಂಟೆಗಳು, ಉದ್ಘಾಟನೆಗೂ ಮುನ್ನವೇ ಹೊಡೆದಿರೋ ಕಿಟಕಿಯ ಗಾಜುಗಳು, ಅರ್ಧಂಬರ್ಧಕ್ಕೆ ನಿಂತಿರೋ ಕಾಂಪೌಂಡ್ ನ ಇಂದಿನ ಚಿತ್ರಣವಾಗಿದೆ. ಈ ವಾಲ್ಮೀಕಿ ಭವನ ಆರಂಭವಾಗಿದ್ದು 2017ರಲ್ಲಿ.
ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ
ಅಂದು ಇದೇ ಕಾಂಗ್ರೆಸ್ ಸರ್ಕಾರ ಕಾಮಗಾರಿಗೆಂದು 3 ಕೋಟಿ 50 ಲಕ್ಷ ಹಣ ಬಿಡುಗಡೆಯಾಗಿತ್ತು. ಆ ಹಣದಲ್ಲಿ ಕೆಲಸವೂ ಆಯ್ತು. ಅದ್ರೆ, ಆ ಹಣ ಸಾಲೋದಿಲ್ಲ ಅಂತ ಗುತ್ತಿಗೆದಾರ ಮತ್ತಷ್ಟು ಅನುದಾನ ಬೇಕೆಂದು ಮತ್ತೆ 75 ಲಕ್ಷಕ್ಲೆ ಬೇಡಿಕೆ ಇಟ್ಟಿದ್ರು. ಹಿಂದಿನ ಬಿಜೆಪಿ ಸರದಕಾರ 18 ಲಕ್ಷ ನೀಡಿತ್ತು. ಅದರಲ್ಲೂ ಅಲ್ಪ-ಸ್ವಲ್ಪ ಕೆಲಸವಾಗಿತ್ತು. ಆದ್ರೀಗ, ಕಳೆದ ವರ್ಷಗಳಿಂದ ಸರ್ಕಾರ 57 ಲಕ್ಷ ನೀಡದ ಕಾರಣ ಸಮೃದ್ಧ ಕಟ್ಟಡವನ್ಮ ಜನ ಬೇಕಾದಾಗ,ಬೇಕಾದಂತೆಲ್ಲಾ ಬಳಸುವಂತಾಗಿದೆ. ಅತ್ತ ಗುತ್ತಿಗೆದಾರ ಕೀಯನ್ನೂ ಕೊಡ್ತಿಲ್ಲ. ಇತ್ತ ಸರ್ಕಾರ ಕೂಡ ಕೀ ಪಡೆದುಕೊಳ್ಳುವ ಗೋಜಿಗೆ ಹೋಗ್ತಿಲ್ಲ.
ಅನುದಾನ ಬಿಡುಗಡೆಯಾಗದೇ ಕಾಮಗಾರಿ ಅಪೂರ್ಣ: ಇನ್ನು ಅಧಿಕಾರಿಗಳ ನಡೆ ಹಾಗೂ ಸರ್ಕಾರ ಸೈಲೆಂಟ್ ಆಗಿರೋದಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರು ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಟ್ಟಡ ಆಯ್ತು. ಹೋರಾಟ ಮಾಡಿದ್ದಕ್ಕೆ ಕಾಪೌಂಡು ನಿರ್ಮಾಣ ಆಯ್ತು. ಎಲ್ಲದಕ್ಕೂ ಹೋರಾಟ ಅನಿವಾರ್ಯವಾಗಿದೆ. ನಮ್ಮದು ಹಿಂದುಳಿದ ಸಮಾಜ ಆಗಿರೋದ್ರಿಂದ ಯಾರು ನಮ್ಮ ಬೇಡಿಕೆ ಈಡೇರಿಸ್ತಿಲ್ಲ. ಕೋಟ್ಯಾಂತರ ಹಣ ವೆಚ್ಚ ಮಾಡಿ ಕಟ್ಟಿದ ಬಿಲ್ಡಿಂಗ್ ಇಂದು ಕುಡುಕರ ಅಡ್ಡೆಯಾಗಿದೆ. ಈ 57 ಲಕ್ಷಕ್ಕೆ ಮತ್ತೆಷ್ಟು ಹೋರಾಟ ಮಾಡಬೇಕೋ.
ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ: ಮಾಜಿ ಸಚಿವ ಬಿ.ಸಿ.ಪಾಟೀಲ್
ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಹಣ ಬಿಡುಗಡೆ ಸಣ್ಣ ಸಮುದಾಯದ ಭವನಕ್ಕೆ ಉದ್ಘಾಟನಾ ಭಾಗ್ಯ ಕೊಡಬೇಕೆಂದು ಸಮುದಾಯದವರು ಆಗ್ರಹಿಸಿದ್ದಾರೆ. ಒಟ್ಟಾರೆ, ಹತ್ರತ್ರ 8 ವರ್ಷ ಕಳೆದರೂ ಶೇ. 90ರಷ್ಟು ಕಾಮಗಾರಿ ಮುಗಿದಿರೋ ಬಿಲ್ಡಿಂಗ್ ಉದ್ಘಾಟನೆಯಾಗದೆ, ಸಮಾಜದ ಬಳಕೆಗೆ ಇಲ್ಲದಂತಾಗಿದೆ. ಸರ್ಕಾರ ದುಡ್ ಕೊಡ್ತಿಲ್ಲ. ದುಡ್ಡಿಲ್ಲ ಅಂತ ಗುತ್ತುಗೆದಾರ ಕೆಲಸ ಮಾಡ್ತಿಲ್ಲ. ಬಿಲ್ಡಿಂಗ್ ಆಗಿಲ್ಲ ಅಂತ ಅಧಿಕಾರಿಗಳು ಕೀ ಪಡೆದುಕೊಳ್ತಿಲ್ಲ. ಸರ್ಕಾರ-ಅಧಿಕಾರಿಗಳು-ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಇಂದು ಬಿಲ್ಡಿಂಗ್ ಹಾಳುಕೊಂಪೆಯಾಗಿದ್ದು, ಅಭಿವೃದ್ಧಿಯ ದುಡ್ಡು ಗ್ಯಾರಂಟಿ ಒಡಲು ಸೇರ್ತಾ ಎಂಬ ಪ್ರಶ್ನೆ ಕಾಡ್ತಿದೆ.
