ರೈತ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ. 

ಗೋಕಾಕ(ಫೆ.02): ಬಹು ನಿರೀಕ್ಷಿತ ಕೇಂದ್ರ ಬಜೆಟ್‌-2023 ಘೋಷಣೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೂ ಅನುದಾನ ಘೋಷಿಸಲಾಗಿದೆ. ಇದರಿಂದ ರೈತ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ರೈಲ್ವೆಗೂ ಅನುದಾನ ಘೋಷಣೆ, ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಇನ್ನು ಮಧ್ಯಮ ವರ್ಗದ ಜನರ ಹೊರೆಯನ್ನು ಸರ್ಕಾರ ಕಡಿಮೆ ಮಾಡಿದ್ದು, ಆದಾಯ ತೆರಿಗೆ ಮಿತಿಯಲ್ಲಿ ರಿಯಾಯಿತಿ ನೀಡಲಾಗಿದೆ. ಹೊಸ ತೆರಿಗೆ ಪದ್ಧತಿ ಅನ್ವಯ ಇನ್ಮುಂದೆ ಏಳು ಲಕ್ಷದವರೆಗೆ ತೆರಿಗೆ ಪಾವತಿಸುವಂತಿಲ್ಲ. ಬಜೆಟ್‌ ಆರ್ಥಿಕ ಅಭಿವೃದ್ಧಿಗೆ ಬೂಸ್ಟರ್‌ ಡೋಸ್‌ ನೀಡಿದಂತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

Union Budget:ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಖರ್ಚಿಗೆ ಹಣ ಕಳುಹಿಸಿದ್ರೂ ಜೇಬಿಗೆ ಬೀಳುತ್ತೆ ಕತ್ತರಿ

ಜನ ಸ್ನೇಹಿ ಬಜೆಟ್‌: ಬಾಲಚಂದ್ರ

ಗೋಕಾಕ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್‌ ಆಗಿದೆ. ದೇಶದ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಹತ್ತು ಹಲವಾರು ಅಂಶಗಳನ್ನು ಅವರು ಕೊಡುಗೆಯಾಗಿದೆ ಎಂದು ಕೆಎಮ್‌ಎಫ್‌ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಲ್ಯಾಬ್‌ನಲ್ಲೇ ತಯಾರಾಗುತ್ತೆ ಗುಣಮಟ್ಟದ ವಜ್ರ.: ಐಐಟಿಗಳಿಗೆ 5 ವರ್ಷದಲ್ಲಿ ವಜ್ರ ಸಂಶೋಧಿಸುವ ಹೊಣೆ

ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ .5300 ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಅದರಂತೆ ಆದಾಯ ಮಿತಿ ಹೆಚ್ಚಳ, ಕೃಷಿ ಉದ್ಯಮಿಗಳ ಸ್ಟಾರ್ಟಪ್‌ ಆಪ್‌ಗೆ ಉತ್ತೇಜನ, 157 ಹೊಸ ನರ್ಸಿಂಗ್‌ ಕಾಲೇಜು ಸ್ಥಾಪನೆ, 50 ಹೊಸ ವಿಮಾನ ನಿಲ್ದಾಣ, ಏಕಲವ್ಯ ಶಾಲಾ ವಸತಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮಹಿಳಾ ಸಮ್ಮಾನ್‌ ಯೋಜನೆ, ಯುವಕರ ಕೌಶಲಕ್ಕೆ ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಂಶಗಳು, ರಾಷ್ಟ್ರೀಯ ಡಿಜಿಟಲ್‌ ಗ್ರಂಥಾಲಯ ಸ್ಥಾಪನೆ, ಆವಾಸ್‌ ಯೋಜನೆಗೆ ಉತ್ತೇಜನದಂತಹ ಹತ್ತು ಹಲವಾರು ಯೋಜನೆಗಳು ದೇಶವನ್ನು ವಿಶ್ವದಲ್ಲಿ ಮತ್ತಷ್ಟು ಉನ್ನತ್ತಕ್ಕೇರಿಸಲು ಅನುಕೂಲವಾಗಿದೆ. ಸಮೃದ್ಧ ಭಾರತ ನಿರ್ಮಾಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್‌ ಮತ್ತಷ್ಟು ಶಕ್ತಿ ತುಂಬಿದೆ ಎಂದಿದ್ದಾರೆ.

ಇದು ಚುನಾವಣೆ ಬಜೆಟ್‌

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಕೇಂದ್ರ ಬಜೆಟ್‌ ಕೇವಲ ಚುನಾವಣೆ ಉದ್ದೇಶಕ್ಕಾಗಿ ಮಂಡಿಸಿದ ಬಜೆಟ್‌. ಕೇವಲ ಸುಳ್ಳು ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಯಾವುದೇ ಕ್ರಮಗಳೂ ಇಲ್ಲ. ಯುವ ಸಮುದಾಯಕ್ಕಾಗಿ, ನಿರುದ್ಯೋಗಿ ಯುವ ಜನರಿಗಾಗಿ ಬಜೆಟ್‌ನಲ್ಲಿ ಯಾವುದೇ ಭರಸೆಗಳು, ಆಶಾದಾಯಕ ಯೋಜನೆಗಳೂ ಇಲ್ಲ. ಇದೊಂದು ನಿರಾಶಾದಾಯಕ ಬಜೆಟ್‌ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.