ಕನ್ನಡಪರ ಹೋರಾಟಗಾರ‌ರ‌ ವಿರುದ್ಧವೇ ಪ್ರಕರಣ ದಾಖಲಿಸಿ ಅವರ ಕೆಂಗಣ್ಣಿಗೆ ಗುರಿಯಾಗಿದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಶಾಸಕ‌ ಚಂದ್ರಪ್ಪ 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜ.11): ಶಾಸಕ ಅಂದ್ರೆ ಸಾರ್ವಜನಿಕರ ರಕ್ಷಕರಾಗಿರಬೇಕು. ಆದ್ರೆ ಈ ಜಿಲ್ಲೆಯ ಬಿಜೆಪಿ ಶಾಸಕನೋರ್ವ ಕನ್ನಡಪರ ಹೋರಾಟಗಾರ‌ರ‌ ವಿರುದ್ಧವೇ ಪ್ರಕರಣ ದಾಖಲಿಸಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಆ ಶಾಸಕ ಎಲ್ಲೇ ಸಿಕ್ಕರೂ ಮಸಿ ಬಳೆಯುತ್ತೇವೆಂದು ಹೋರಾಟಗಾರರು ಎಚ್ವರಿಸಿದ್ದಾರೆ. ಅಷ್ಟಕ್ಕೂ ಆ ಶಾಸಕ‌ ಯಾರು? ಕನ್ನಡ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರೋದಾದ್ರು ಯಾಕೆ? ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

ನೋಡಿ‌ ಹೀಗೆ ಫ್ಲೆಕ್ಸ್‌ಗೆ ಮಸಿ ಬಳಿಯುತ್ತಿರುವ ಕನ್ನಡ ಪರ ಹೋರಾಟಗಾರರು. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಿಜೆಪಿ‌ ಹಿರಿಯ ಶಾಸಕ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ. ಹೌದು ಜನವರಿ 5 ರಂದು ಕೋಟೆನಾಡು ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿದ್ರು. ಎಸ್ಸಿ, ಎಸ್ಟಿ ಹಾಗು ಒಬಿಸಿ ಕಾರ್ಯಕರ್ತರ ಸಮಾವೇಶ‌ ನಡೆಸಿದ್ರು. ಆಗ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ‌ ಎಂ‌.ಚಂದ್ರಪ್ಪ ಅವರ ಹೈಕಮಾಂಡ್ ನಾಯಕರಿಗೆ ಅದ್ಧೂರಿ ಸ್ವಾಗತ ಕೋರಲು, ಮುರುಘಾ ಮಠದ ಆವರಣದಲ್ಲಿ ಬೃಹತ್ ಫ್ಲೆಕ್ಸ್ ಹಾಕಿಸಿದ್ದರು. ಅದು ಆಂಗ್ಲ ಭಾಷೆಯಲ್ಲಿದ್ದೂ, ಹಾರ್ಟ್‌ಲಿ ವೆಲ್ ಕಮ್ ನಡ್ಡಾಜಿ ಅಂತ ಸ್ವಾಗತ ಕೋರಿದ್ದರು. ಹೀಗಾಗಿ ಅದನ್ನು ವಿರೋಧಿಸಿದ‌ ಚಿತ್ರದುರ್ಗದ ಕರುನಾಡ ವಿಜಯಸೇನೆ ಕಾರ್ಯಕರ್ತರು ಕನ್ನಡ ಉಳಿಸಿ ಅಂತ‌ ಆ ಫ್ಲೆಕ್ಸ್‌ ಮೇಲೆ‌ ಬರೆದು ಅದರಲ್ಲಿನ ಭಾವಚಿತ್ರಗಳಿಗೆ ಮಸಿ ಬಳೆದಿದ್ದರು. ಅದನ್ನು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಮಾಡಿದ್ದರು. ಹೀಗಾಗಿ ಆಕ್ರೋಶಗೊಂಡ ಶಾಸಕ ಚಂದ್ರಪ್ಪ ಬೆಂಬಲಿಗನಾದ‌ ಸುನಿಲ್‌ ಎನ್ನುವವರು, ಕನ್ನಡಪರ ಕಾರ್ಯಕರ್ತನ‌ದ ಜಗದೀಶ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ ಎಂದು ಚಿತ್ರದುರ್ಗದ ‌ಎಸ್ಪಿ ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ, ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ

ಇನ್ನು ‌ಕನ್ನಡಪರ‌ ಹೋರಾಟಗಾರರ‌‌ ವಿರುದ್ಧ‌ ಪ್ರಕರಣ‌ ದಾಖಲಾದ ಬೆನ್ನಲ್ಲೇ ಕರುನಾಡ‌ ವಿಜಯಸೇನೆ‌ ಅಧ್ಯಕ್ಷ‌ ಶಿವಕುಮಾರ್ ‌ರೊಚ್ಚಿಗೆದ್ದಿದ್ದಾರೆ. ಹೊಳಲ್ಕೆರೆ ಶಾಸಕ‌ ಚಂದ್ರಪ್ಪ ಕನ್ನಡ ವಿರೋಧಿಯಾಗಿದ್ದಾರೆ. ಅವರ ತಪ್ಪನ್ನು ತಿದ್ದಿಕೊಳ್ಳದೇ‌ ನಮ್ಮ‌ ಕಾರ್ಯಕರ್ತರ‌ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಶಾಸಕ ಚಂದ್ರಪ್ಪ ನಮಗೆ ಎಲ್ಲಿ‌ ಸಿಕ್ರೂ ಅಲ್ಲಿಯೇ ಅವರ ಮುಖಕ್ಕೆ ಮಸಿ ಬಳೆಯುತ್ತೇವೆ. ಹಾಗೂ ಅವರ ಶಿಕ್ಷಣ‌ ಸಂಸ್ಥೆಗಳಲ್ಲಿ‌ ಅಳವಡಿಸಿರುವ ಆಂಗ್ಲ‌ ನಾಮಫಲಕ‌ಗಳನ್ನು ತೆರವು ಗೊಳಿಸುವವರೆಗೆ ಹೋರಾಟ ನಡೆಸ್ತೇವೆ. ಅದೆಷ್ಟು‌ ಕೇಸು‌ ದಾಖಲಿಸ್ತಾರೆ ನೋಡ್ತಿವೆಂದು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆ ಕನ್ನಡವನ್ನು‌ ಉಳಿಸಲು‌ ಮುಂದಾದ ಕನ್ನಡ ಪರ ಹೋರಾಟಗಾರರ ವಿರುದ್ಧ ಕೇಸು ದಾಖಲಾಗಿದೆ. ಹೀಗಾಗಿ ಶಾಸಕ‌ ಚಂದ್ರಪ್ಪ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ‌ ಮುಗಿಲು ಮುಟ್ಟಿದೆ. ಶಾಸಕರು ಎಲ್ಲೇ ಸಿಕ್ರು ಮಸಿ ಬಳೆಯುತ್ತೇವೆಂದು ಎಚ್ಚರಿಸಿದ್ದಾರೆ. ಹೀಗಾಗಿ, ಇದು ಇನ್ಯಾವ ತಿರುವು ಪಡೆಯಲಿದೆಯೊ ಅನ್ನೋದನ್ನ ಕಾದು ನೋಡಬೇಕಿದೆ.