ಮೈಸೂರು (ಡಿ.18): ಹೊರಗೆ ಪರಿಷತ್‌ನ ಗೌರವದ ಬಗ್ಗೆ ಮಾತನಾಡುವ ಬಿಜೆಪಿಯ ಅನಾಚಾರದ ಬಗ್ಗೆ ಜನ ನೋಡುತ್ತಿದ್ದಾರೆ.ಅವರಿಗೆ ನಾಚಿಕೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ನಿಮ್ಮ ಜಾಗ ಮತ್ತು ದಾರಿ ಎಲ್ಲಿ ಎಂದು ತೋರಿಸುತ್ತಾರೆ. ಮೇಲ್ಮನೆಯಲ್ಲಿ ಸಚಿವರಾದ ಅಶ್ವಥ್‌ ನಾರಾಯಣ್‌, ಮಾಧುಸ್ವಾಮಿ ಏನು ಮಾಡುತ್ತಿದ್ದರು? ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಸಭಾಪತಿಯ ಛೇಂಬರ್‌ ಗೇಟ್‌ ಹಾಕಲು ಏಕೆ ಪ್ರಚೋದನೆ ನೀಡುತ್ತಿದ್ದರು. ವಿಧಾನಸಭಾ ಸದಸ್ಯರಾದ ನಿಮಗೆ ಪರಿಷತ್‌ನಲ್ಲಿ ಏನು ಕೆಲಸ ಎಂದು ಪ್ರಶಿಸಿದರು.

ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಮೋದಿ ಪ್ರಮುಖ ಪಾತ್ರ: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ ..

ಗಾಗಲೇ ಇಲಾಖೆಯ ಶೇ. 60 ಭಾಗವನ್ನು ಖಾಸಗೀಕರಣಗೊಳಿಸಲಾಗಿದೆ. ಪ್ರಧಾನಿ ಮೋದಿ ಇಡೀ ದೇಶವನ್ನು ಮಾರಲು ಮುಂದಾಗಿದ್ದಾರೆ. ದೇಶದಲ್ಲಿ 70 ರೈಲ್ವೆ ನಿಲ್ದಾಣವನ್ನು 3 ವರ್ಷಗಳಿಂದ ಖಾಸಗಿಯವರಿಗೆ ವಹಿಸಲಾಗಿದೆ. 2017ರಲ್ಲಿ ದೇಶಾದ್ಯಂತ 151 ರೈಲನ್ನು ಖಾಸಗಿಯವರಿಗೆ ನೀಡಲಾಗಿದೆ. 34 ಪ್ರಮುಖ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲಾಗಿದೆ. ಹಂತ ಹಂತವಾಗಿ ಇಲಾಖೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ, ಅದಾನಿ ಗ್ರೂಪ್‌ಗೆ ವಹಿಸಲು ಕೇಂದ್ರ ಮುಂದಾಗಿದೆ ಎಂದು ಅವರು ಆರೋಪಿಸಿದರು.

ರೈಲು ಎಂಜಿನ್‌ಗಳಲ್ಲಿ ಅದಾನಿ ಕಂಪನಿಯ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ. ಮುಂದೆ ರೈಲಿನ ಶೌಚಾಲಯಕ್ಕೆ ಹಣ ಪಾವತಿಸುವ ಪರಿಸ್ಥಿತಿ ಬರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ ಇದ್ದರು.

ದನದ ಮಾಂಸ ರಫ್ತು ಹೆಚ್ಚಳ :  ನರೇಂದ್ರಮೋದಿ ಭಾರತದ ಪ್ರಧಾನಿಯಾದ ಮೇಲೆ ದೇಶದ ದನದ ಮಾಂಸ ರಫ್ತು ಸುಮಾರು ಶೇ. 25ರಷ್ಟುಹೆಚ್ಚಾಗಿದೆ. ಪ್ರಪಂಚದಲ್ಲಿಯೇ ಬೀಫ್‌ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಪ್ರತಿನಿತ್ಯ 20 ಲಕ್ಷ ಟನ್‌ ದನದ ಮಾಂಸ ರಫ್ತಾಗುತ್ತಿದೆ. ಪ್ರಮುಖ ರಫ್ತು ಕಂಪನಿಗಳ ಮಾಲೀಕರು ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ನಾಯಕರಿಗೆ ಗಾಂಧಿ ತತ್ತ$್ವದ ಮೇಲೆ ನಂಬಿಕೆ ಇದ್ದರೆ ಕೂಡಲೇ ಎಲ್ಲಾ ರಫ್ತು ಕಂಪನಿಯನ್ನು ಮುಚ್ಚಿಸಲಿ. ಈ ಕಾಯ್ದೆ ಜಾರಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಅವರು ಕಿಡಿಕಾರಿದರು.