ಬಳ್ಳಾರಿಯಲ್ಲೀಗ ಖಾಸಗಿ 'ಕೋವಿಡ್ ಕೇರ್ ಹೋಟೆಲ್’ ಶುರು..!
ಸೋಂಕಿತರಿಗೆ ವೈದ್ಯಕೀಯ ಸೇವೆ ಸಹಿತ ಮನೆಯ ರೀತಿ ಆರೈಕೆ ನೀಡುವುದು ಇದರ ಮೂಲ ಉದ್ದೇಶ| ಇದಕ್ಕೆ ಖಾಸಗಿ ವೈದ್ಯರು ಹಾಗೂ ಭಾರತೀಯ ವೈದ್ಯಕೀಯ ಸಂಘ ಸಾಥ್| ಹೋಟೆಲ್‌ನಲ್ಲಿ ಆರೈಕೆಯಲ್ಲಿರುವವರಿಗೆ ಗಂಭೀರ ಸ್ಥಿತಿ ಉಂಟಾದರೆ ವಿಮ್ಸ್‌ನಲ್ಲಿ 2 ಪ್ರತ್ಯೇಕ ಬೆಡ್ ಮೀಸಲಿಡಲು ನಿರ್ಧಾರ| ಹೋಟೆಲ್‌ನಲ್ಲಿ 50 ಕೋಣೆ ಮೀಸಲು| ದಿನಕ್ಕೆ 5 ಸಾವಿರದಂತೆ 10 ದಿನದ ಪ್ಯಾಕೇಜ್‌ಗೆ 50 ಸಾವಿರ ನಿಗದಿ|
ಬಳ್ಳಾರಿ(ಜು.27): ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟರೆ ಇಚ್ಛಾನುಸಾರ ಐಷಾರಾಮಿ ಸೌಲಭ್ಯಗಳು ಸಿಗುತ್ತಿರುವುದು ಗೊತ್ತೇ ಇದೆ. ಆದರೆ ಬಳ್ಳಾರಿಯಲ್ಲಿ ‘ಖಾಸಗಿ ಕೋವಿಡ್ ಕೇರ್ ಹೋಟೆಲ್’ ಶುರುವಾಗಿದೆ!
ಇಲ್ಲಿನ ಸುಸಜ್ಜಿತ ‘ಬಾಲಾ’ ಹೋಟೆಲ್‌ನ್ನು ಕೋವಿಡ್ ಹೋಟೆಲ್ ಆಗಿ ಬದಲಾಯಿಸಲಾಗಿದ್ದು ಜುಲೈ 25ರಂದು ಚಾಲನೆ ನೀಡಲಾಗಿದೆ. ಸೋಂಕಿತರಿಗೆ ವೈದ್ಯಕೀಯ ಸೇವೆ ಸಹಿತ ಮನೆಯ ರೀತಿ ಆರೈಕೆ ನೀಡುವುದು ಇದರ ಮೂಲ ಉದ್ದೇಶ. ಇದಕ್ಕೆ ಖಾಸಗಿ ವೈದ್ಯರು ಹಾಗೂ ಭಾರತೀಯ ವೈದ್ಯಕೀಯ ಸಂಘ ಸಾಥ್ ನೀಡಿದ್ದು ಹೋಟೆಲ್‌ನಲ್ಲಿ ಆರೈಕೆಯಲ್ಲಿರುವವರಿಗೆ ಗಂಭೀರ ಸ್ಥಿತಿ ಉಂಟಾದರೆ ವಿಮ್ಸ್‌ನಲ್ಲಿ 2 ಪ್ರತ್ಯೇಕ ಬೆಡ್ ಮೀಸಲಿಡಲು ನಿರ್ಧರಿಸಿದ್ದಾರೆ. ಹೋಟೆಲ್‌ನಲ್ಲಿ 50 ಕೋಣೆ ಮೀಸಲಿಡಲಾಗಿದ್ದು ದಿನಕ್ಕೆ 5 ಸಾವಿರದಂತೆ 10 ದಿನದ ಪ್ಯಾಕೇಜ್‌ಗೆ 50 ಸಾವಿರ ನಿಗದಿಗೊಳಿಸಲಾಗಿದೆ.
ಗಣಿ ನಾಡಿನಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ!
ಇಲ್ಲಿ ದಿನದ 24 ಗಂಟೆ ವೈದ್ಯಕೀಯ ಸೇವೆ, ಸುಸಜ್ಜಿತ ಕೋಣೆ, ಎಲ್‌ಇಡಿ ಟಿವಿ, ದಿನಕ್ಕೆ 3 ಬಾರಿ ಪೌಷ್ಟಿಕಾಹಾರ, ಊಟ, ಶುದ್ಧ ಕುಡಿಯುವ ನೀರು, ಕಷಾಯ, ನಿಂಬೆಯುಕ್ತ ಬಿಸಿನೀರು, ಜ್ಯೂಸ್, ವೈಫೈ, ನೀರು ಕಾಯಿಸಿಕೊಳ್ಳಲು ಕಿಟ್ಟೆಲ್, ಸಿಸಿ ಟಿವಿ ಕಣ್ಗಾವಲು, ವ್ಹೀಲ್‌ಚೇರ್, ಹೌಸ್‌ಕೀಪಿಂಗ್ ವ್ಯವಸ್ಥೆಯಿದೆ.