ಮೈಸೂರು(ಏ.30): ಲಾಕ್‌ಡೌನ್‌ನಿಂದ ಪ್ರವಾಸಿಗರಿಲ್ಲದೆ ಮೈಸೂರು ಮೃಗಾಲಯದಲ್ಲಿ ವೆಚ್ಚಗಳನ್ನು ಭರಿಸುವುದು ಕಷ್ಟವಾಗಿರುವ ಬಗ್ಗೆ ಮೃಗಾಲಯದಿಂದ ಸಾರ್ವಜನಿಕರ ನೆರವು ಕೇಳಲಾಗಿತ್ತು. ಇದಕ್ಕೆ ಸ್ಪಂದಿಸಿದ ಖಾಸಗಿ ಕಾಲೇಜಿನ ಪ್ರಾಂಶುಪಾಲೆಯೊಬ್ಬರು ಆರ್ಥಿಕ ನೆರವು ನೀಡಿದ್ದಾರೆ.

ಮೃಗಾಲಯ ಸಂಕಷ್ಟಕ್ಕೆ ನೆರವಾದ ಖಾಸಗಿ ಕಾಲೇಜಿನ ಪ್ರಾಂಶುಪಾಲೆ ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲೆ ನಿವೇದಿತಾ ಲೋಕೇಶ್ ಸಹಾಯ ಮಾಡಿದ್ದಾರೆ.

ಮೊದಲ ಬಾರಿ ಜನರ ನೆರವು ಕೇಳಿದ ಮೈಸೂರು ಮೃಗಾಲಯ..!

ತಮ್ಮ ವೈಯುಕ್ತಿಕ ಹಣದಿಂದ‌ ಒಂದು ಲಕ್ಷ ದೇಣಿಗೆ ನೀಡಿದ್ದು, ಮೃಗಾಲಯ ಸಂಕಷ್ಟದಲ್ಲಿದೆ ಎಂದು ತಿಳಿದು ಸಹಾಯಕ್ಕೆ ನೆರವಾಗಿದ್ದಾರೆ. ನಿವೇದಿತಾ ಮೃಗಾಲಯ ನಿರ್ದೇಶಕರಿಗೆ ಚೆಕ್ ಹಸ್ತಾಂತರ ಮಾಡಿದ್ದಾರೆ.

ಮೃಗಾಲಯದಲ್ಲಿ ವಿದ್ಯುತ್, ನೀರು ಆಹಾರ ಸೇರಿ ಎಲ್ಲದಕ್ಕೂ ಸಮಸ್ಯೆಯಾಗಿದ್ದು, ನಿರ್ವಹಣೆಗೆ ತಿಂಗಳಿಗೆ ಸುಮಾರು 2 ಕೋಟಿ ರೂಪಾಯಿ ಖರ್ಚಾಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಮೃಗಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಮೃಗಾಲಯದಿಂದ ಸಾರ್ವಜನಿಕೆ ನೆರವು ಕೋರಲಾಗಿತ್ತು.