ಬೆಂ.ಗ್ರಾಮಾಂತರ(ಜು.31) : ಎಲ್ಲರನ್ನೂ ರಕ್ಷಿಸುವ ದೇವರ ಹುಂಡಿಯನ್ನು ಮಾತ್ರ ಕಳ್ಳತನವಾಗೋದ್ರಿಂದ ರಕ್ಷಿಸೋಕೆ ಸಾಧ್ಯವಾಗಿಲ್ಲ. ತಿಂಗಳಿಗೆ ಸುಮಾರು 20 ಲಕ್ಷ ರೂಪಾಯಿಯಷ್ಟು ಸಂಗ್ರಹವಾಗುವ ದೇವಾಲಯದ ಹುಂಡಿಗೆ ಅರ್ಚಕರೇ ಕನ್ನ ಹಾಕಿರೋ ಆರೋಪ  ನೆಲಮಂಗಲದಲ್ಲಿ ಕೇಳಿಬಂದಿದೆ.

ದೇವರ ಹುಂಡಿಗೆ ಅರ್ಚಕರೇ ಕನ್ನ ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಅರ್ಚಕರು ಹುಂಡಿ ದುಡ್ಡನ್ನು ಬಕೆಟ್‌ನಲ್ಲಿ ಸಾಗಿಸಿದ್ದಾರೆ ಎನ್ನಲಾಗುತ್ತಿದೆ.

ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿಯ ಶ್ರೀ ಭದ್ರಕಾಳಮ್ಮ, ವಿರಭದ್ರಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದೆ. ಪ್ರಖ್ಯಾತ ಹಿಂದೂ ದೇವಾಲಯವಾದ ದೇವರ ಹೊಸಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿ‌ದೇವಾಲಯದಲ್ಲಿ ಅರ್ಚಕರು ಹುಂಡಿ ದುಡ್ಡನ್ನು ಬಕೆಟ್‌ನಲ್ಲಿ ಸಾಗಿಸಿದ್ದಾರೆ ಎಂಬ ಆರೋಪದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬೀಗ ಹಾಕಿದ್ರೂ ಸೇಫ್ ಅಲ್ಲ ಮನೆ: ಹಾಡಹಗಲೇ ದರೋಡೆ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಂತಹ ಕಾಲ ಬಂತಪ್ಪಾ ಎಂದು ಭಕ್ತರ ಆತಂಕ ವ್ಯಕ್ತಪಡಿಸಿದ್ದಾರೆ. ದೇವರಿಗೆ ಅರ್ಪಿಸಿದ ಕಾಣಿಕೆಗೆ ಕನ್ನ ಹಾಕಿರೋ ಆರೋಪದ ಹಿನ್ನೆಲೆಯಲ್ಲಿ ದೇವರ ದುಡ್ಡಿಗೇ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಮುಜರಾಯಿ ಅಧಿಕಾರಿಗಳ ಗಮನಕ್ಕೂ ಬಾರದೆ ಹಣ ಎಣಿಕೆ ನಡೆಸಿರೋ ಬಗ್ಗೆ ಅನುಮಾನಗಳು ಮೂಡಿದ್ದು, ಈ ದೇವಾಲಯದಲ್ಲಿ ಆರು ತಿಂಗಳಿಗೆ ಸುಮಾರು ಇಪ್ಪತ್ತು‌ ಲಕ್ಷ ಹುಂಡಿ ಹಣ ಸಂಗ್ರಹವಾಗುತ್ತದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ