ವಿಜಯಪುರ; ದೀಪಾವಳಿ ಹಿನ್ನೆಲೆ ಮುಗಿಲು ಮುಟ್ಟಿದ ಹೂ-ಹಣ್ಣಿನ ದರ!

ಬೆಳಕಿನ ಹಬ್ಬ ದೀಪಾವಳಿ ಆಚರಣೆ ಹತ್ತಿರ ಬರುತ್ತಿದ್ದಂತೆ ಬೆಲೆ ಏರಿಕೆಯ ಬಿಸಿಯೂ ಹೆಚ್ಚಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ದೀಪಾವಳಿ ಹಬ್ಬದ ಆಚರಣೆಗೆ ಗುಮ್ಮಟನಗರಿ ಜನರು ವಿವಿಧ ಮಾರುಕಟ್ಟೆಗಳಲ್ಲಿ  ನೂಕುನುಗ್ಗಲಿನಲ್ಲಿಯೂ ನಿಂತು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

Prices of flowers shoot up for Deepavali  in Vijayapura gow

ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಅ.24): ಬೆಳಕಿನ ಹಬ್ಬ ದೀಪಾವಳಿ ಆಚರಣೆ ಹತ್ತಿರ ಬರುತ್ತಿದ್ದಂತೆ ಬೆಲೆ ಏರಿಕೆಯ ಬಿಸಿಯೂ ಹೆಚ್ಚಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ದೀಪಾವಳಿ ಹಬ್ಬದ ಆಚರಣೆಗೆ ಗುಮ್ಮಟನಗರಿ ಜನರು ವಿವಿಧ ಮಾರುಕಟ್ಟೆಗಳಲ್ಲಿ  ನೂಕುನುಗ್ಗಲಿನಲ್ಲಿಯೂ ನಿಂತು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ನಗರದ ನೆಹರೂ ಹಾಗೂ ಶಾಸ್ತ್ರಿ ಮಾರುಕಟ್ಟೆಯಲ್ಲಿ‌  ದೀಪಾವಳಿ ಹಬ್ಬಕ್ಕೆ ಸಾಮಾಗ್ರಿ ಖರೀದಿಸುವವರಿಗೆ ಬೆಲೆ ಏರಿಕೆಯ ಬಿಸಿಗೆ  ಕಂಗಾಲಾಗಿದ್ದಾರೆ. ಹೂವು, ಹಣ್ಣು, ಪೂಜಾ ಸಾಮಾಗ್ರಿ ದರ ಗಗನಕ್ಕೇರಿದೆ. ಅಲ್ಲದೇ ದೀಪಾವಳಿ ಹಬ್ಬಕ್ಕೆ ಅಗತ್ಯವಿರುವ ಇತರ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸಂಭ್ರಮದ ಆಚರಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಸಂಭ್ರಮದ ದೀಪಾವಳಿ ಆಚರಣೆಗೆ ಜನರು ಮುಂದಾಗಿದ್ದಾರೆ. ಈ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ಪಟಾಕಿ ಅರ್ಧದಷ್ಟು ಸರಬರಾಜಾಗುತ್ತಿಲ್ಲ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಮಾರಾಟವೂ ಕಡಿಮೆ ಆಗಿದೆ. ಖರೀದಿಸುವವರ ಸಂಖ್ಯೆಯೂ ಕ್ಷೀಣಿಸಿದೆ. ಇದರಿಂದಾಗಿ ಹಬ್ಬದ ಕಳೆ ಕಟ್ಟುವ ಬದಲು ಮಾರಾಟಗಾರರಿಗೆ ಮಂಕು ಕವಿದಿದೆ.

ಹಸಿರು ಪಟಾಕಿಗಷ್ಟೇ ಅವಕಾಶ.!
ಎಲ್ಲಾ ಕಡೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೂ ಪಟಾಕಿ ಖರೀದಿ ಭರಾಟೆ ಮಾತ್ರ ಜೋರಾಗಿಲ್ಲ. ನಗರದ ಹಲವೆಡೆ ಪಟಾಕಿ ಅಂಗಡಿಗಳ ಮಳಿಗೆಗಳನ್ನು ಹಾಕಲಾಗಿದೆ. ಇನ್ನು ಹೆಚ್ಚಾಗಿ ಈ ವರ್ಷ ಪಟಾಕಿ ತಯಾರು ಮಾಡಿಲ್ಲ. ಇದರಿಂದಾಗಿ ತರಹೇವಾರಿ ಪಟಾಕಿ ಬಂದಿಲ್ಲ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿರುವುದು. ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷದ ಪಟಾಕಿ ಬೆಲೆಯಲ್ಲಿ ಶೇ.20ರಿಂದ 30ರಷ್ಟು ಹೆಚ್ಚಾಗಿದೆ. ಹೆಚ್ಚು ಶಬ್ಧ ಮಾಡುತ್ತಿದ್ದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ.

ಲಕ್ಷ್ಮೀ ಪೂಜೆ ಹಿನ್ನೆಲೆ ; ಹೂವು ತುಟ್ಟಿ ತುಟ್ಟಿ..!
ಈ ವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ, ಮಲ್ಲಿಗೆ, ಮೊಳ್ಳೆ, ಗುಲಾಬಿ,    ಸೇರಿದಂತೆ ಬಹುತೇಕ ಹೂವುಗಳ ಬೆಲೆ ಹೆಚ್ಚಳವಾಗಿದೆ. 
ಕನಕಾಂಬರ ಹೂ ಕೆಜಿಗೆ 300 ರಿಂದ 350 ರೂ, ಗುಲಾಬಿ ಹೂಗಳ ಬೆಲೆ ಕೆಜಿಗೆ 300 ರಿಂದ 400 ವರೆಗೆ,  ಮಲ್ಲಿಗೆಗೆ ₹ 800 ರೂಗಳ ವರೆಗೂ ಬೆಲೆ ಇದೆ.  

ಹಣ್ಣುಗಳ ದರ ದುಪ್ಪಟ್ಟು, ಗ್ರಾಹಕರು ಹೈರಾಣು..!
ಇನ್ನು ಹಣ್ಣುಗಳ ಪೈಕಿ ಸೇಬು, ದಾಳಿಂಬೆ, ಮೂಸಂಬಿ, ಸೀತಾಫಲ ಹಾಗೂ ಬಾಳೆಹಣ್ಣುಗಳ ಬೆಲೆಯೂ ಹೆಚ್ಚಳವಾಗಿದ್ದು, ಜನರು ಕೊಳ್ಳುವುದೋ ಬೇಡವೋ ಎಂಬ ಚಿಂತೆಯಲಿದ್ದಾರೆ. ಒಂದು ಡಜನ್ ಸೇಬು ಹಣ್ಣಿಗೆ 400, ಒಂದು ಡಜನ್ ಮೂಸಂಬಿ ಹಾಗೂ ದಾಳಿಂಬೆ 300-350, ಒಂದು ಡಜನ್ ಸೀತಾಫಲ 200 ಹಾಗೂ ಒಂದು ಡಜನ್ ಬಾಲೆಹಣ್ಣಿನ ಬೆಲೆ 40 ರೂಗಳಿಗೆ ಏರಿಕೆಯಾಗಿದೆ. 

ನಿರಂತರ ಮಳೆಯಿಂದ ಗಗನಕ್ಕೆರಿದ ದರಗಳು..!
‘ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದೆ, ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರಕ್ಕೆ  ತರಕಾರಿ, ಹಣ್ಣುಗಳ ಹಾಗೂ ಹೂಗಳ    ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇದು ಈ ವರ್ಷದ ಕೊನೆಯ ಹಾಗೂ ಅತಿ ದೊಡ್ಡ ಹಬ್ಬವಾದರಿಂದ  ಹೂವು, ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಅದರಲ್ಲಿಯೂ ಈ ಬಾರಿ ಹೆಚ್ಚು ಮಕೆಯಾಗಿದ್ದರಿಂದ ಬೆಲೆ ಹೂ ಹಾಗೂ ಹಣ್ಣುಗಳು ಇಳುವರಿ ಕಡಿಮೆಯಾಗಿದ್ದು, ಮುಂದಿನ ಎರಡು ದಿನ ಹೂವುಗಳಿಗೆ ಮತ್ತಷ್ಟು ಬೇಡಿಕೆ ಇರಲಿದೆ’ ಎನ್ನುತ್ತಾರೆ ವ್ಯಾಪಾರಿಗಳು.

Diwali 2022: ನರಕ ಚತುದರ್ಶಿ ಹಿನ್ನೆಲೆ ಏನು? ಆಚರಣೆ ಹೇಗೆ?

ದರ ದುಬಾರಿ ನಡುವೆ ವಿಜ್ರಂಭಣೆಯ ಹಬ್ಬ..!
ಕಳೆದ ಮೂರು ವರ್ಷಗಳಿಂದ ಕೋವಿದ್ ಕಾರಣದಿಂದಾಗಿ ದೀಪಗಳ ಹಬ್ಬ ದೀಪಾವಳಿಯನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಭಾರಿ ಜೋವಿದ್ ಮಾಯವಾಗಿರುವ ಹಿನ್ನೆಲೆಯಲ್ಲಿ ಅತ್ಯಂತ ಸಂತಸ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. 

Deepavali ನಂತ್ರ ಆರೋಗ್ಯ ರಕ್ಷಣೆ ಹೀಗಿರಲಿ, ಅಸ್ತಮಾ ಇರೋರಿಗೆ ಹೆಚ್ಚು ಕಾಳಜಿ ಅಗತ್ಯ

ಗುಮ್ಮಟನಗರಿಯಲ್ಲಿ ಹೂವು ಹಣ್ಣುಗಳ ದರ ಹೀಗಿದೆ..!
ಬಿಡಿ ಹೂವು ಹಾಗೂ ಹಣ್ಣಿನ ದರಗಳು.(ಪ್ರತಿ ಕೆಜಿಗೆ ಹಾಗೂ ಪ್ರತಿ ಡಜನ್ ಗೆ)
ಮಲ್ಲಿಗೆ              -  800 
ಸೇವಂತಿಗೆ          -  400 
ಗುಲಾಬಿ             -  300
ಕನಕಾಂಬರ.       -  350
ಬಾಳೆಹಣ್ಣು        -  40
ಸೇಬುಹಣ್ಣು        -  400
ಮೂಸಂಬಿ          -  300
ದಾಳಿಂಬೆ             - 300
ಸೀತಾಫಲ           -  200

Latest Videos
Follow Us:
Download App:
  • android
  • ios