ಬೆಂಗಳೂರು [ಡಿ.21]: ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಈರುಳ್ಳಿ ಬೆಲೆ ದಿಢೀರ್‌ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕೆ.ಜಿ. 20, 50 ರು., ಮಧ್ಯಮ ಈರುಳ್ಳಿ ಕೆ.ಜಿ. 60ರಿಂದ 70 ರು., ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.80ರಿಂದ 90 ರು. ನಿಗದಿಯಾಗಿದೆ.

ಈರುಳ್ಳಿ ಪೂರೈಕೆಯಲ್ಲಿ ಸುಧಾರಣೆ ಕಂಡು ಬಂದಿರುವುದರಿಂದ ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 5500ರಿಂದ 10 ಸಾವಿರ ರು. ನಿಗದಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಇಳಿಕೆಯಾಗುವ ಸಾಧ್ಯತೆ ಇದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಗೆ (ಎಪಿಎಂಸಿ) ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಕರ್ನಾಟಕದ ವಿವಿಧ ರಾಜ್ಯಗಳಿಂದ ಹೊಸ ಈರುಳ್ಳಿ ಸರಬರಾಜಾಗುತ್ತಿದೆ. ಜತೆಗೆ ಈಜಿಪ್ಟ್‌, ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಂಡಿರುವುದರಿಂದ ಬೇಡಿಕೆ ಕುಸಿದಿದೆ.

ಈರುಳ್ಳಿ ಒಂದೇ ಅಲ್ಲ, ಆಲೂಗಡ್ಡೆ ಬೆಲೆ ನಿಮಗೆ ಗೊತ್ತಿಲ್ವ...

ಸಗಟು ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕ್ವಿಂಟಲ್‌ 2000ದಿಂದ 3000 ರು., ಮಧ್ಯಮ 6000-7000 ರು., ಗುಣಮಟ್ಟದ್ದು ಕ್ವಿಂಟಲ್‌ 8000-10,000 ರು., ಈಜಿಪ್ಟ್‌ ಈರುಳ್ಳಿ ಕ್ವಿಂಟಲ್‌ಗೆ 6500-7000 ರು.ಗೆ ಮಾರಾಟವಾಗುತ್ತಿದೆ. ಟರ್ಕಿ ಈರುಳ್ಳಿ ಕ್ವಿಂಟಲ್‌ಗೆ 7000ದಿಂದ 7200 ರು. ಗೆ ಖರೀದಿಯಾಗುತ್ತಿದೆ. ಶುಕ್ರವಾರ ಎಪಿಎಂಸಿ ಮಾರುಕಟ್ಟೆಯಲ್ಲಿ 39042ಕ್ಕೂ ಹೆಚ್ಚು ಚೀಲ ಈರುಳ್ಳಿ ಸರಬರಾಜಾಗಿದೆ ಎಂದು ಎಪಿಎಂಸಿ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್‌ ಶಂಕರ್‌ ತಿಳಿಸಿದರು.