Asianet Suvarna News Asianet Suvarna News

ಈಜಿಪ್ಟ್ ದೇಶದಿಂದ ಬಂತು ಈರುಳ್ಳಿ : ಇಳಿಯುತ್ತಾ ಬೆಲೆ ?

ಈಜಿಪ್ಟ್ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದ್ದು ಈರುಳ್ಳಿ  ದರ ಇಳಿಕೆಯಾಗುವ ಸಾಧ್ಯತೆ ಇದೆ.  

Price Hike Onion import From Egypt To Bengaluru
Author
Bengaluru, First Published Dec 7, 2019, 12:59 PM IST | Last Updated Dec 7, 2019, 1:41 PM IST

ಬೆಂಗಳೂರು [ಡಿ.07]: ಈರುಳ್ಳಿ ಬೆಲೆ ಎಲ್ಲರ ಕಣ್ಣಲ್ಲೂ ಕೂಡ ನೀರು ತರಿಸುತ್ತಿದೆ. ದಿನದಿಂದ ದಿನಕ್ಕೆ  ಹೆಚ್ಚಾಗುತ್ತಲೇ ಇದ್ದು, ಈರುಳ್ಳು ಕೊಳ್ಳೋದು ಕಷ್ಟವಾಗಿದೆ. 

"

ಇಂತಹ ಸಂದರ್ಭದಲ್ಲಿ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಬೆಲೆ ಏರಿಕೆ, ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಈಜಿಪ್ಟ್ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. 

ಈ ಬಾರಿ ಸುರಿದ ಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಕೊರತೆಯಾಗಿದ್ದು ಪೂರೈಕೆಯೂ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಈ ನಿಟ್ಟಿನಲ್ಲಿ ಈರುಳ್ಳಿ ಬಂಗಾರದ ಬೆಲೆ ಬಂದಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಯಶವಂತಪುರದ ಮಾರುಕಟ್ಟೆಗೆ ಈರುಳ್ಳಿ ತರಿಸಿಕೊಳ್ಳಲಾಗಿದೆ. 

ಮಂಗಳೂರಿನಲ್ಲಿ ನೇಣು ಕಂಬಕ್ಕೇರಿದ ಈರುಳ್ಳಿ..!...

ಯಶವಂತಪುರಕ್ಕೆ ಒಟ್ಟು 50 ಟನ್ ಈಜಿಪ್ಟ್ ಈರುಳ್ಳಿ ತರಿಸಲಾಗಿದ್ದು, ಕೆಜಿಗೆ 120 ರಿಂದ 140 ರುಪಾಯಿ ನಿಗದಿ ಮಾಡಲಾಗಿದೆ. ಈಜಿಪ್ಟ್ ನಿಂದ ತರಿಸಿದ ಈರುಳ್ಳಿಯನ್ನು ನೋಡಲು ವ್ಯಾಪಾರಿಗಳು ಮುಗಿ ಬಿದ್ದಿದ್ದಾರೆ. 

ಈಜಿಪ್ಟ್ ನಿಂದ ಈರುಳ್ಳಿ ತರಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios