ಸಾಲಿಗ್ರಾಮ ಮತ್ತು ಕೆ.ಆರ್‌. ನಗರ ತಾಲೂಕುಗಳ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಕೊರತೆ ಇದ್ದು, ಮಳೆ ಹಾನಿ ಸೇರಿದಂತೆ ವಿವಿಧ ಕೆಲಸಗಳನ್ನು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮ ಲೆಕ್ಕಿಗರ ನೇಮಕಕ್ಕೆ ಒತ್ತಡ ಹಾಕುವುದಾಗಿ ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಕೆ.ಆರ್‌. ನಗರ (ಸೆ.05): ಸಾಲಿಗ್ರಾಮ ಮತ್ತು ಕೆ.ಆರ್‌. ನಗರ ತಾಲೂಕುಗಳ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಕೊರತೆ ಇದ್ದು, ಮಳೆ ಹಾನಿ ಸೇರಿದಂತೆ ವಿವಿಧ ಕೆಲಸಗಳನ್ನು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮ ಲೆಕ್ಕಿಗರ ನೇಮಕಕ್ಕೆ ಒತ್ತಡ ಹಾಕುವುದಾಗಿ ಶಾಸಕ ಸಾ.ರಾ. ಮಹೇಶ್‌ ಹೇಳಿದರು. ತಾಲೂಕು ಕಚೇರಿಯಲ್ಲಿ ಮಳೆ ಹಾನಿಯಾದ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಒಂದು ವರ್ಷದಿಂದ ಎರಡು ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ 64 ಗ್ರಾಮ ಲೆಕ್ಕಿಗರ ಪೈಕಿ ಕೇವಲ 17 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ದೂರವಾಣಿ ಮೂಲಕ ಚರ್ಚಿಸಿದರು.

2022 ಸಾಲಿನಲ್ಲಿ ಮಳೆಗೆ ಹಾನಿಗೀಡಾದ 323 ಮನೆಗಳ ಮಾಲೀಕರಿಗೆ ತಲಾ 95 ಸಾವಿರ ಮೊದಲ ಕಂತಿನ ಹಣ ನೀಡಲಾಗಿದ್ದು, ಶೇ. 80 ರಿಂದ 90 ರಷ್ಟುಹಾನಿಯಾಗಿದ್ದರೆ 5 ಲಕ್ಷ , ಶೇ. 50 ರಿಂದ 75 ರಷ್ಟು ಹಾನಿಯಾಗಿದ್ದರೆ 3 ಲಕ್ಷ, ಶೇ. 15 ರಿಂದ 30 ರಷ್ಟುಹಾನಿಯಾಗಿದ್ದರೆ 50 ಸಾವಿರ ಪರಿಹಾರ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು. ಮಳೆಗೆ ಮನೆ ಹಾನಿಯಾದವರು ಕಡ್ಡಾಯವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ತಹಸೀಲ್ದಾರ್‌ಗಳಾದ ಎಸ್‌. ಸಂತೋಷ್‌, ಕೆ.ಎನ್‌. ಮೋಹನ್‌ಕುಮಾರ್‌, ತಾಪಂ ಇಓ ಎಚ್‌.ಕೆ. ಸತೀಶ್‌, ಉಪ ತಹಸೀಲ್ದಾರ್‌ಗಳಾದ ಕೃಷ್ಣಮೂರ್ತಿ, ಮಹೇಶ್‌, ಮಹೇಂದ್ರ, ಮಂಜುನಾಥ್‌, ಆರ್‌ಐ ಶಶಿಕುಮಾರ್‌, ಹೇಮಂತ್‌ಕುಮಾರ್‌, ಹೇಮಂತ್‌, ಗ್ರಾಮ ಲೆಕ್ಕಿಗರಾದ ರಶ್ಮಿ, ಲಕ್ಷ್ಮೀಪೂಜಾರ್‌, ರಿಯಾನ, ಶಶಿಕಾಂತ್‌, ದರ್ಶನ್‌ ಇದ್ದರು.

50 ವರ್ಷ ದಾಟಿದ ಮಹಿಳೆಯರ ಸಾಹಸ: 140 ದಿನದಲ್ಲಿ 4841 ಕಿ.ಮೀ. ಹಿಮಾಲಯ ಚಾರಣ..!

ಸಹಕಾರ ಸಂಘದ ಸದಸ್ಯರ ಬೇಡಿಕೆಗೆ ಆದ್ಯತೆ ನೀಡಿ: ಸಹಕಾರ ಸಂಘಗಳಲ್ಲಿ ಸದಸ್ಯರಾಗುವವರ ಹಿತಕ್ಕೆ ಅನುಗುಣವಾಗಿ ಕೆಲಸ ಮಾಡಿ ಅವರ ಬೇಡಿಕೆಗಳಿಗೆ ಆಡಳಿತ ಮಂಡಳಿಯವರು ಆದ್ಯತೆ ನೀಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾಲಿಗ್ರಾಮ ತಾಲೂಕು ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್‌.ಎಸ್‌. ಶಿವಸ್ವಾಮಿ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಸಾಲ ನೀಡುವುದರ ಜೊತೆಗೆ ಅದರ ಸದ್ಬಳಕೆಯ ಬಗ್ಗೆಯೂ ಸೂಕ್ತ ಮಾರ್ಗದರ್ಶನ ನೀಡಬೇಕು. 

ಬೆಂಗ್ಳೂರಿನ ಲಾಲ್‌ಬಾಗ್‌ ರೀತಿ ಮೈಸೂರಲ್ಲೂ ಸಸ್ಯೋದ್ಯಾನ..!

ರೈತರು ಇಂತಹ ಸಂಘಗಳ ಸದಸ್ಯರಾಗಿ ಸರ್ಕಾರದ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳಬೇಕು ಸಂಘದಿಂದ ಸಾಲ ಪಡೆದ ರೈತರು ಸದುಪಯೋಗ ಪಡಿಸಿಕೊಂಡು ಆನಂತರ ಸಕಾಲದಲ್ಲಿ ಮರುಪಾವತಿ ಮಾಡಿ ಹೊಸ ಸದಸ್ಯರಿಗೂ ಸಾಲ ನೀಡಲು ಅನುಕೂಲವಾಗುವಂತೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು. ನೂತನ ಅಧ್ಯಕ್ಷ ಎಸ್‌.ಎಸ್‌. ಶಿವಸ್ವಾಮಿ ಮಾತನಾಡಿ, ಸಂಘದ ಈವರೆಗಿನ ಸಾಧನೆ ಮತ್ತು ಕಾರ್ಯ ಯೋಜನೆಗಳ ವರದಿಯನ್ನು ಶಾಸಕರಿಗೆ ನೀಡಿ, ಮುಂದಿನ ದಿನಗಳಲ್ಲಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕೋರಿದರು. ತಾವು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಸಾ.ರಾ. ಮಹೇಶ್‌ ಅವರಿಗೆ ಮತ್ತು ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.