ಮಂಗಳೂರು(ಜು.05): ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಜನ ಸಂಖ್ಯೆಯಿರುವ ಕೆ.ಎಸ್‌.ರಾವ್‌ ನಗರ ಲಿಂಗಪ್ಪಯ್ಯ ಕಾಡಿನಲ್ಲಿ 19 ವರ್ಷದ ಮಹಿಳೆಗೆ ಶನಿವಾರ ಕೊರೋನಾ ಪಾಸಿಟಿವ್‌ ಕಂಡು ಬಂದಿದ್ದು, ಆಕೆಯನ್ನು ಮಂಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮೂಲ್ಕಿ ತಹಸೀಲ್ದಾರ್‌ ಮಾಣಿಕ್ಯ ಎನ್‌., ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮತ್ತಿ​ತರ ಪ್ರಮು​ಖರು ಧಾವಿಸಿದ್ದು, ಸೋಂಕಿತೆಯ ಮನೆ ಪರಿಸರದಲ್ಲಿರುವ ಅಂಗಡಿಗಳು, ಅಂಗನವಾಡಿ ಹಾಗೂ ಸುಮಾರು 10 ಮನೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಕೊರೋನಾ ಎಂದ್ರು ಕೇಳೋರೇ ಇಲ್ಲ: 20 ನಿಮಿಷ ಆ್ಯಂಬು​ಲೆ​ನ್ಸ್‌​ನಲ್ಲೇ ಉಳಿದ ಸೋಂಕಿತ

ಯುವತಿ ಗರ್ಭಿಣಿಯಾಗಿದ್ದು, ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ತೆರಳಿರುವ ವೇಳೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ. ಹಳೆಯಂಗಡಿಯಲ್ಲಿ ಸೋಮವಾರದಿಂದ ಮಧ್ಯಾಹ್ನ ಬಳಿಕ ಸ್ವಯಂ ಘೋಷಿತ ಲಾಕ್‌ಡೌನ್‌ಗೆ ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.