Asianet Suvarna News Asianet Suvarna News

ಕಲಬುರಗಿ: ಇಳಿಯದ ಪ್ರವಾಹ, ಮೂರು ಗಂಟೆ ಕಾಯ್ದ ಗರ್ಭಿಣಿ

*  ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನಡೆದ ಘಟನೆ
*  ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ ಆ್ಯಂಬುಲೆನ್ಸ್‌ ಚಾಲಕ
*  ಕಲಬುರಗಿಯಲ್ಲಿ ಮಳೆಯಂದಾಗಿ ವಿದ್ಯುತ್‌ ಕಡಿತ 
 

Pregnant Stuck in Ambulance Since Three Hours Due to Flood in Kalaburagi grg
Author
Bengaluru, First Published Sep 22, 2021, 3:32 PM IST

ಕಲಬುರಗಿ(ಸೆ.22): ತಾಲೂಕಿನ ಪಟ್ಟಣ ಹೊರ ವಲಯದಲ್ಲಿನ ಹಳ್ಳಕ್ಕೆ ಭಾರೀ ಪ್ರವಾಹ(Flood) ಬಂದಿದ್ದರಿಂದ ಗ್ರಾಮದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗಲು ಮೂರು ಗಂಟೆ ಹಳ್ಳದ ದಂಡೆಯಲ್ಲೇ ಕಾಯ್ದ ಪ್ರಸಂಗ ನಡೆದಿದೆ.

ಸೋಮವಾರ ರಾತ್ರಿ ಜೋರಾಗಿ ಮಳೆ ಸುರಿದಿದೆ. ಇದರಿಂದ ಹಳ್ಳ ಕೊಳ್ಳ ತುಂಬಿ ಹರಿದಿವೆ. ಈ ವೇಳೆ ಪಟ್ಟಣ ಗ್ರಾಮದ ಗರ್ಭಿಣಿ(Pregnant) ರಸಿಕ ಪಾಟೀಲ್‌ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ್ಯಂಬುಲೆನ್ಸ್‌ನಲ್ಲಿ ಅವರನ್ನು ತಕ್ಷಣ ಸಾವಾಳಾಗಿ ಆರೋಗ್ಯ ಕೇಂದ್ರಕ್ಕೆ ಕರೆದೋಯುವ ವ್ಯವಸ್ಥೆ ಮಾಡಲಾಗಿತ್ತು.

ಕೃಷ್ಣ ಪ್ರವಾಹ ಆತಂಕ : ಸೇತುವೆ ಮುಳುಗಡೆ

ಆದರೆ ಪಟ್ಟಣ ಹಾಗೂ ಕಲಬುರಗಿ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ನಡುವೆ ಇರುವ ಹಳ್ಳಕ್ಕೆ ಪ್ರವಾಹ ಬಂದಿದ್ದರಿಂದ ಆ್ಯಂಬುಲೆನ್ಸ್‌ (Ambulance) ಇಲ್ಲಿ 3 ಗಂಟೆ ನಿಲ್ಲಬೇಕಾಯ್ತು. ಆದರೆ ಪ್ರವಾಹ ಇಳಿಯದಿರುವುದರಿಂದ ಚಾಲಕ ಧೈರ್ಯವಾಗಿ ನೀರಲ್ಲೇ ಆ್ಯಂಬುಲೆನ್ಸ್‌ ಚಲಾಯಿಸಿ ಆಸ್ಪತ್ರೆಗೆ ಗರ್ಭಿಣಿಯನ್ನು ತಲುಪಿಸಿದ್ದಾರೆ. ಮಂಗಳವಾರ ರಾತ್ರಿಯು ಜಿಲ್ಲೆಯಲ್ಲಿ ಬಿರುಸಿನ ಮಳೆ 2 ಗಂಟೆ ಕಾಲ ಸುರಿದಿದೆ. ಆಫಜಲ್ಪುರ, ಗ್ರಾಮೀಣ ಕಲಬುರಗಿ, ಕಲಬುರಗಿ ನಗರ, ಸೇಡಂ, ಚಿಂಚೋಳಿ ಮಳೆ ಸುರಿದಿದೆ. ಕಲಬುರಗಿಯಲ್ಲಿ ಮಳೆಯಂದಾಗಿ ವಿದ್ಯುತ್‌ ಕಡಿತಗೊಂಡಿತ್ತು.

Follow Us:
Download App:
  • android
  • ios