ಮಧ್ಯವರ್ತಿಯಿಂದ ವಂಚನೆ: ಬಸ್‌ನಲ್ಲೇ 2 ದಿನ ಕಳೆದ ಗರ್ಭಿಣಿ
ಮುಂಬೈಯಲ್ಲಿ ಮಹಿಳೆಯೊಬ್ಬರು 31 ಮಂದಿಗೆ ಉಡುಪಿಗೆ ಹೋಗುವ ಇ-ಪಾಸ್ ಮಾಡಿ ಕೊಡುವುದಾಗಿ 1.38 ಲಕ್ಷ ಪಡೆದು ಬಸ್ ಮಾಡಿ ಕಳುಹಿಸಿದ್ದರು. ಆದರೆ, ಆಕೆ ಮಹಾರಾಷ್ಟ್ರದ ಪಾಸ್ ಮಾಡಿಸಿದ್ದು, ಕರ್ನಾಟಕದ ಪಾಸ್ ಮಾಡಿಸಿರಲಿಲ್ಲ. ಆದ್ದರಿಂದ ಅವರನ್ನು ಕರ್ನಾಟಕ ಅಧಿಕಾರಿಗಳು ಗಡಿಯಲ್ಲಿ ತಡೆದು ನಿಲ್ಲಿಸಿದ್ದರು.
ಉಡುಪಿ(ಮೇ 21): ಮಧ್ಯವರ್ತಿ ಮಹಿಳೆಯೊಬ್ಬರ ಮೋಸದಿಂದ ಬೆಳಗಾವಿಯ ನಿಪ್ಪಾಣಿ ಗಡಿಯಲ್ಲಿ ಎರಡು ರಾತ್ರಿ, ಎರಡು ಹಗಲು ಬಸ್‌ನಲ್ಲೇ ಕಳೆದಿದ್ದ ಮುಂಬೈಯಿಂದ ಬಂದ ಉಡುಪಿಯ ಗರ್ಭಿಣಿ ಸೇರಿ 31 ಮಂದಿ ಕೊನೆಗೂ ಬುಧವಾರ ರಾತ್ರಿ ತವರಿನತ್ತ ಹೊರಟಿದ್ದಾರೆ.
ಮುಂಬೈಯಲ್ಲಿ ಮಹಿಳೆಯೊಬ್ಬರು 31 ಮಂದಿಗೆ ಉಡುಪಿಗೆ ಹೋಗುವ ಇ-ಪಾಸ್ ಮಾಡಿ ಕೊಡುವುದಾಗಿ 1.38 ಲಕ್ಷ ಪಡೆದು ಬಸ್ ಮಾಡಿ ಕಳುಹಿಸಿದ್ದರು. ಆದರೆ, ಆಕೆ ಮಹಾರಾಷ್ಟ್ರದ ಪಾಸ್ ಮಾಡಿಸಿದ್ದು, ಕರ್ನಾಟಕದ ಪಾಸ್ ಮಾಡಿಸಿರಲಿಲ್ಲ. ಆದ್ದರಿಂದ ಅವರನ್ನು ಕರ್ನಾಟಕ ಅಧಿಕಾರಿಗಳು ಗಡಿಯಲ್ಲಿ ತಡೆದು ನಿಲ್ಲಿಸಿದ್ದರು.
ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ, ಇದೆಂಥಾ ಸಭ್ಯತೆ ಸ್ವಾಮಿ...!
ಇವರಲ್ಲಿ ತುಂಬು ಗರ್ಭಿಣಿ, ಚಿಕ್ಕಮಕ್ಕಳು ಮತ್ತು ವಯಸ್ಸಾದ ಮಹಿಳೆಯರಿದ್ದರೂ, ಯಾರಿಗೂ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಅಲ್ಲದೆ, ಹಸಿವಿನಿಂದ ಬಳಲಿಹೋಗಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಮಸ್ಯೆ ಬಗೆಹರಿಸಿದ್ದಾರೆ.
ಗರ್ಭಿಣಿ ಮತ್ತು ಮಹಿಳೆಯರಿಗೆ ಕಾರಿನ ವ್ಯವಸ್ಥೆ ಮಾಡಿ, ಗಡಿಯಲ್ಲಿ ಸಿಲುಕಿಕೊಂಡಿದ್ದ ಮತ್ತೊಂದು ಬಸ್‌ನಲ್ಲಿದ್ದವರಿಗೂ ಉಡುಪಿಗೆ ಕಳುಹಿಸುವಲ್ಲೂ ಸಹಾಯ ಮಾಡಿದ್ದಾರೆ.