Praveen Nettur Murder Case: ಆತ್ಮರಕ್ಷಣೆಗೆ ಹಿಂದುಗಳ ಕೈಗೆ ತಲ್ವಾರ್ ಕೊಡಿ: ಬಿಜೆಪಿ
- ಆತ್ಮರಕ್ಷಣೆಗೆ ಹಿಂದುಗಳ ಕೈಗೆ ತಲ್ವಾರ್ ಕೊಡಿ: ಬಿಜೆಪಿ
- ಮಂಗಳೂರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ
- -ಕಾನೂನು ಹಿಂದುಗಳ ಕೈಗಳನ್ನು ಕಟ್ಟಿಹಾಕಿವೆ: ಟೀಕೆ
- ಪೊಲೀಸರಿಗೆ ಸೂಕ್ತ ತರಬೇತಿ ನೀಡಲು ಒತ್ತಾಯ
ಶಿವಮೊಗ್ಗ (ಜು.28) : ಪೊಲೀಸರಿಂದಲೂ ಹಿಂದುಗಳ ರಕ್ಷಣೆ ಆಗುತ್ತಿಲ್ಲ. ಸರ್ಕಾರದಿಂದಲೂ ಇದು ಸಾಧ್ಯವಿಲ್ಲ ಎಂದ ಮೇಲೆ ನಮ್ಮ ಕೈಗೆ ತಲ್ವಾರ್ ಕೊಡಿ, ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ.. ಇದು ಬುಧವಾರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಪರಿ.
ಕಾರ್ಯಕರ್ತರ ಹತ್ಯೆಯಾದಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕಷ್ಟೇ ಹಿಂದು ಸಮಾಜ ಸೀಮಿತ ಎಂಬಂತಾಗಿದೆ. ಸಮಾಜದಲ್ಲಿ ಹಿಂದುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಗಳು ಶಾಂತಿಪ್ರಿಯರು. ಇದು ಅವರ ದೌರ್ಬಲ್ಯ ಎಂದುಕೊಂಡಿದ್ದಾರೆ. ಪೊಲೀಸರು ಇಂದು ಮಸೀದಿ ಕಾಯುತ್ತಿದ್ದಾರೆ ಹೊರತು, ಹಿಂದು ಕಾರ್ಯಕರ್ತ ರಕ್ಷಣೆ ಮಾಡುತ್ತಿಲ್ಲ. ಹೀಗಾಗಿ, ಹಿಂದುಗಳ ಹತ್ಯೆ ಎಗ್ಗಿಲ್ಲದೇ ನಡೆಯುತ್ತಲೇ ಇವೆ. ನಿಮ್ಮಿಂದ ಹಿಂದುಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದಾದರೆ ನಮ್ಮ ಕೈಗೆ ತಲ್ವಾರ್ ಕೊಡಿ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಸಮಾವೇಶ ರದ್ದು: ಸಿಎಂ ಬೊಮ್ಮಾಯಿ
ಕಾನೂನುಗಳು ಹಿಂದುಗಳ ಕೈಗಳನ್ನು ಕಟ್ಟಿಹಾಕಿವೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ನಮಗೆ ಇಷ್ಟಇಲ್ಲ. ಆದರೆ, ಪದೇಪದೇ ಹಿಂದು ಕಾರ್ಯಕರ್ತರ ಕೊಲೆ ಆಗುತ್ತಿದ್ದಾಗ ಯೋಚನೆ ಮಾಡಲೇ ಬೇಕಾಗುತ್ತದೆ. ಇನ್ನೆಷ್ಟುಹತ್ಯೆಗಳನ್ನು ನೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು. ನಮ್ಮ ಆತ್ಮರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಆತ್ಮರಕ್ಷಣೆ ಉದ್ದೇಶದಿಂದ ಪೊಲೀಸರಿಗೆ ನೀಡುತ್ತಿರುವ ತರಬೇತಿಯನ್ನು ನಮಗೂ ನೀಡಿ ಎಂದು ಆಗ್ರಹಿಸಿದರು.
ಹಿಂದೂ(Hindu) ಸಮಾಜವನ್ನು ರಕ್ಷಣೆ ಮಾಡುವುದೇ ಕಷ್ಟವಾಗುತ್ತಿದೆ. ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಕೆಲವು ದುಷ್ಟಶಕ್ತಿಗಳು ಅಟ್ಟಹಾಸ ಮೆರೆಯತೊಡಗಿದ್ದಾರೆ. ಸರ್ಕಾರ ಹಿಂದೂಗಳ ಮರಣಗಳನ್ನು ಲೆಕ್ಕಹಾಕಲು ಮಾತ್ರ ಇದೆ. ಎಲ್ಲ ಹಿಂದೂಗಳಿಗೂ ರಕ್ಷಣೆ ಬೇಕೇ ಬೇಕು. ಇಲ್ಲದಿದ್ದರೆ ಅವರೇ ತಮ್ಮ ರಕ್ಷಣೆ ಮಾಡಿಕೊಳ್ಳುವ ಕಾಲ ದೂರವಿಲ್ಲ. ಸರ್ಕಾರ ಈ ಬಗ್ಗೆ ನಿರ್ಲಕ್ಷ ್ಯ ವಹಿಸಬಾರದು. ನನಗೆ ತುಂಬಾ ನೋವಾಗುತ್ತದೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.
ಪ್ರವೀಣ್ ಹಂತಕರನ್ನು ಗುಂಡಿಟ್ಟು ಕೊಲ್ಲಿ, ಆಂದೋಲ ಸ್ವಾಮೀಜಿ ಅಗ್ರಹ!
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್(M.B.Bhanuprakasha) ಮಾತನಾಡಿ, ಭಾರತದಲ್ಲಿ ಹಿಂದೂ ಮುಸ್ಲಿಂ(Hindu-Muslim) ಎಲ್ಲರಿಗೂ ರಕ್ಷಣೆ ಬೇಕಾಗಿದೆ. ಈಗಿರುವ ವಿಫಲತೆಯನ್ನು ಸರಿಪಡಿಸಬೇಕಾಗಿದೆ. ಸರ್ಕಾರ ಮೆಚ್ಚಿಸಲು ಹಿಂದೂ ಸಂಘಟನೆ ಅಸ್ತಿತ್ವಕ್ಕೆ ಬಂದಿಲ್ಲ. ಹಿಂದೂ ಸಂಘಟನೆಯ ಕೆಲವರು ಸರ್ಕಾರದ ಭಾಗವಾಗಿದ್ದಾರೆ ಅಷ್ಟೇ. ಹಿಂದೂಗಳ ರಕ್ಷಣೆ ಮಾಡಬೇಕಾದವರು ಯೋಚನೆ ಮಾಡಬಾರದು. ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್(Megharaj) ನಗರ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್(N.K.Jagadeesh), ಎಸ್. ದತ್ತಾತ್ರಿ, ಕೆ.ಈ. ಕಾಂತೇಶ್, ರಮೇಶ್ (ರಾಮು) ಜಿಲ್ಲಾ ಕಾರ್ಯದರ್ಶಿ ಹೃಷಿಕೇಶ್ ಪೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಬಿ. ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ, ಮೋಹನ್ ರೆಡ್ಡಿ, ಆರ್.ವಿ. ದರ್ಶನ್, ಉಪ ಮೇಯರ್ ಶಂಕರ್ ಗನ್ನಿ ಇದ್ದರು.