ಮೈಸೂರು (ಡಿ.03): ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾರ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಯಾವ ಕ್ಷೇತ್ರವನ್ನು ಜನರು ಶಾಸಕರು ಹಾಗೂ  ಎಂಪಿಗೆ ಬರೆದುಕೊಟ್ಟಿರುವುದಿಲ್ಲ. ಶಾಸಕರು ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ.

ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಮೇಲೆ ನಾನು ಕೂಡ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೋ ನೋಡೋಣ ಎಂದು ಸವಾಲು ಹಾಕಿದರು. 

ನಾಲ್ಕು ಜನ ಶಾಸಕರು ಒಟ್ಟಾಗಿ ಡಿಸಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೆದರಿಸುತ್ತಿದ್ದೀರಾ..?? ನೀವೂ ಹೆದರಿಸಿದರೆ ನಾವು ಹೆದರಬೇಕಾ..?

ಮೈಸೂರು ಡಿಸಿ ರೋಹಿಣಿ ವರ್ಗಾವಣೆ - ಕರ್ತವ್ಯದಿಂದ ವಜಾ?

ನೀವು  ಜನರ  ಸಮಸ್ಯೆ ಬಗೆಹರಿಸಿದರೆ ಡಸಿ ಬಳಿ  ಜನ ಯಾಕೆ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು. ನೀವು ಮಾಡಲು ಆಗದ ಕೆಲಸವನ್ನು ಡಿಸಿ ಮಾಡುತ್ತಿದ್ದಾರೆ. ಮಾಡಲು ಬಿಡಿ ಎಂದರು.

ಮೊದಲು ಶಾಸಕರ ಹಕ್ಕು ಚ್ಯುತಿ  ಕುರಿತು ಪುಸ್ತಕ ಓದಿಕೊಳ್ಳಿ ಮೂರ್ನಾಲ್ಕು ಬಾರಿ ಶಾಸಕರು ಆದವರು ನೀವು.  ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ವಾ ಜನರ ಸಮಸ್ಯೆ ಕೇಳುವ  ಸಭೆಯಲ್ಲಿ ನಿಮ್ಮನ್ನ ಗದ್ದುಗೆ ಮೇಲೆ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ ಎಂದರು.