ಮೈಸೂರು(ಡಿ.25): ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಯಾರೋ ಗೋಮಾಂಸ ತಿನ್ನಬಹುದು. ಆದ್ರೆ ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ಎಂದು ಪ್ರಶ್ನಿಸಿದ್ದಾರೆ ಸಿಂಹ.

ನೀವು ಗೋಮಾಂಸ ತಿಂತೀರಿ ಅಂತ ಇಡೀ ಕುರುಬ ಸಮಾಜವೇ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಮರು ಪ್ರಶ್ನೆಯ ಮೂಲವೇ ಸಿಂಹ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ.

ಮಾಸ್ಕ್ ಹೆಸರಲ್ಲಿ ಜನರಿಗೆ ತೊಂದರೆ: ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೆ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್ ನವರು ಮಾತ್ರ ಮಾತನಾಡೋಕೆ ಸಾಧ್ಯ ಎಂದಿದ್ದಾರೆ.

ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಗೋಮಾತೆಯನ್ನ ಎರಡನೆ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಬೇಡಿ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಿದ್ದೀರಾ. ಆದ್ರೆ ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ.