ಬೆಳಗಾವಿ(ಜ.20): ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಗೋಪ್ರೇಮಿ ಶಿವು ಉಪ್ಪಾರ ಅನುಮಾನಾಸ್ಪದ ಸಾವು ಪ್ರಕರಣ ನಡೆದು ಒಂಬತ್ತು ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಶಿವು ಉಪ್ಪಾರ ಆರೋಪಿಸಿದ್ದ ವ್ಯಕ್ತಿಯ ವಿಚಾರಣೆ ಇನ್ನೂ ಕೂಡ ನಡೆಸಿಲ್ಲ, ಪೊಲೀಸರು ಕಾಲಹರಣ ಮಾಡುವುದನ್ನ ನಿಲ್ಲಿಸಬೇಕು. ತಕ್ಷಣ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸುವಂತೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವು ಉಪ್ಪಾರ ಕೊಲೆ ಬಗ್ಗೆ ತನಿಖೆಗೆ ಆಗ್ರಹಿಸಿ ರಾಜ್ಯದ ಎಲ್ಲ ಕಡೆಯಲ್ಲಿ ಧರಣಿ ನಡೆಸಲಾಗಿದೆ. ಈವರೆಗೆ ಸೂಕ್ತ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಿಲ್ಲ. ಶಿವು ಉಪ್ಪಾರಗೆ ಧಮ್ಕಿ ಹಾಕಿದ ವ್ಯಕ್ತಿಯ ವಿಚಾರಣೆಯೂ ನಡೆದಿಲ್ಲ ಎಂದು ಹೇಳಿದ್ದಾರೆ. 

9 ತಿಂಗಳಿಂದ ಪ್ರಕರಣದ ‌ಯಾವುದೇ ತನಿಖೆ ಆಗಿಲ್ಲ, 15 ದಿನದಲ್ಲಿ ತನಿಖೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಆರೋಪಿಗಳನ್ನು ಒದ್ದು ಪೊಲೀಸ್ ಠಾಣೆಗೆ ತರುತ್ತೇವೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿಯ ವ್ಯಸನ ಮುಕ್ತ ಕೇಂದ್ರದಲ್ಲಿ ಅನುಮಾನಾಸ್ಪದವಾಗಿ ಯುವಕ ಮೃತಪಟ್ಟಿದ್ದಾನೆ. ಪೀರನವಾಡಿ ಬಳಿಯ ಇರೋ ಹೋಪ್ಸ್ ರಿಕವರಿ ಸೆಂಟರ್‌ನಲ್ಲಿ ಸಂತೋಷ ನಾಯಕ್ ಎಂಬ ಯುವಕ ಸಾವನ್ನಿಪ್ಪಿ 8 ತಿಂಗಳಾದ್ರೂ ಪ್ರಕರಣ ತನಿಖೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

15 ದಿನದಲ್ಲಿ ಪ್ರಕರಣ ತನಿಖೆ ನಡೆದೇ ಇದ್ರೆ ಚರ್ಚ್‌ಗೆ ಬೆಂಕಿ ಇಡಲಾಗುವುದು. ಕಾನೂನು ಸುವ್ಯವಸ್ಥಿತ ಹಾಳಾದ್ರೆ ಪೊಲೀಸರೇ ಜವಾಬ್ದಾರಾಗುತ್ತಾರ ಎಂದು ಹೇಳಿದ್ದಾರೆ.