ಪಾದರಾಯನಪುರ ಘಟನೆಗೆ ಜಮಿರ್ ಅಹ್ಮದ್ ಕಾರಣ: ಪ್ರಮೋದ್‌ ಮುತಾಲಿಕ್‌

ಪಾದರಾಯನಪುರ ಘಟನೆ ವ್ಯವಸ್ಥಿತವಾದ ಯೋಜನಾಬದ್ಧವಾದ ಗಲಭೆ| ಶಾಸಕ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಪ್ರಮೋದ್‌ ಮುತಾಲಿಕ್| ಸರ್ಕಾರ ಕೇವಲ ಶಿಕ್ಷೆ ಕೊಟ್ಟು ಜೈಲಿಗೆ ಹಾಕಬಾರದು| ಅವರ ಆಸ್ತಿ ಪಾಸ್ತಿಗಳನ್ನ ಜಪ್ತಿ ಮಾಡಬೇಕು| ಬೆತ್ತಲೆಯಾಗಿ ಅದೆ ಏರಿಯಾದಲ್ಲಿ ಮೆರವಣಿಗೆ ಮಾಡಬೇಕು| ಸರ್ಕಾರದ ಪಾತ್ರ ಈ ಸಮಯದಲ್ಲಿ ಬಹಳ ದೊಡ್ಡದು|
 

Pramod Mutalik Says Zamir Ahmed was Responsible for the Padarayanapura Incident

ಧಾರವಾಡ(ಏ.20): ಪಾದರಾಯನಪುರ ಘಟನೆಯು ಅಸಹ್ಯವಾದದ್ದು. ಇದು ಪುಂಡ ಪೋಕರಿಗಳ ಕೃತ್ಯ ಅಲ್ಲ, ನೂರಾರು ಜನರು ಸೇರಿ ದೊಡ್ಡ ಗಲಾಟೆ, ಗಲಭೆ ಮಾಡಿದ್ದಾರೆ. ಇವರೆಲ್ಲರೂ ಸೇರಿ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು ಹಾಗೂ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ‌ ಮಾಡುತ್ತಾರೆ ಅಂದರೆ ಇದೊಂದು ವ್ಯವಸ್ಥಿತವಾದ ಯೋಜನಾಬದ್ಧವಾದ ಘಟನೆಯಾಗಿದೆ. ಇದರ ಹಿಂದೆ ಮಾಜಿ ಸಚಿವ ಜಮಿರ್ ಅಹ್ಮದ್ ಇದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆರೋಪಿಸಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾತನಾಡಿದ ಅವರು,  ಗಲಭೆಕೋರರಿಗೆ ಇವರಿಗೆಲ್ಲ ಪಿತೂರಿ ಮಾಡಿದ್ದು ಶಾಸಕ ಜಮಿರ್ ಅಹ್ಮದ್, ಇವರು ಹೊರಗೆ ಬಂದಿಲ್ಲ ಅಷ್ಟೇ, ರಾತ್ರಿ ಘಟನೆ ನಡೆಯುವಾಗ ಶಾಸಕ ಜಮೀರ್ ಅಹ್ಮದ್ ಎಲ್ಲಿದ್ದೀರಿ ನೀವು..? ಈ ಘಟನೆ ನೀವೇ ಕಾರಣ ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಬ್ರೆಕಿಂಗ್: ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!

ಸರ್ಕಾರ ಕೇವಲ ಶಿಕ್ಷೆ ಕೊಟ್ಟು ಜೈಲಿಗೆ ಹಾಕಬಾರದು, ಅವರ ಆಸ್ತಿ ಪಾಸ್ತಿಗಳನ್ನ ಜಪ್ತಿ ಮಾಡಬೇಕು, ಬೆತ್ತಲೆಯಾಗಿ ಅದೆ ಏರಿಯಾದಲ್ಲಿ ಮೆರವಣಿಗೆ ಮಾಡಬೇಕು. ಸರ್ಕಾರದ ಪಾತ್ರ ಈ ಸಮಯದಲ್ಲಿ ಬಹಳ ದೊಡ್ಡದಾಗಿದೆ. ಇಂಥವರ ವಿರುದ್ಧ ಸರಿಯಾದ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕು. ಈ ಟೆರರಿಸಂ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 
 

Latest Videos
Follow Us:
Download App:
  • android
  • ios