ಪುರಸಭೆ, ಪಟ್ಟಣ ಪಂಚಾಯಿತಿಗಳಂತೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲೂ ಹೊಸದಾದ ಪಂಚತಂತ್ರ ತತ್ರಾಂಶ 2.0 ರ ಮೂಲಕ ತೆರಿಗೆ ಕಟ್ಟಿಆನ್‌ಲೈನ್‌ನಲ್ಲೇ ರಸೀದಿ ಪಡೆದು ಕೊಳ್ಳಬಹುದು.

ಯಡಗೆರೆ ಮಂಜುನಾಥ್‌,

ನರಸಿಂಹರಾಜಪುರ (ಮೇ.25) : ಪುರಸಭೆ, ಪಟ್ಟಣ ಪಂಚಾಯಿತಿಗಳಂತೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲೂ ಹೊಸದಾದ ಪಂಚತಂತ್ರ ತತ್ರಾಂಶ 2.0 ರ ಮೂಲಕ ತೆರಿಗೆ ಕಟ್ಟಿಆನ್‌ಲೈನ್‌ನಲ್ಲೇ ರಸೀದಿ ಪಡೆದು ಕೊಳ್ಳಬಹುದು.

ಗ್ರಾಮ ಪಂಚಾಯಿತಿಗಳ ತೆರಿಗೆ ದರ ಹಾಗೂ ಫೀಜುಗಳ ನಿಯಮ- 2021 ಜಾರಿಗೆ ಬಂದಿತ್ತು. ಆದರೆ,ಅನುಮೋದನೆ ಆಗಿರಲಿಲ್ಲ. 2022 ಮಾಚ್‌ರ್‍ನಲ್ಲಿ ಅನುಮೋದನೆಯಾಗಿತ್ತು. ಆದರೆ, ಗ್ರಾಮ ಪಂಚಾಯ್ತಿಗಳಲ್ಲಿ ಸರಿಯಾದ ರೀತಿಯಲ್ಲಿ ಇದು ಜಾರಿಯಾಗಿರಲಿಲ್ಲ. ಇದನ್ನು ಗಮನಿಸಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಈ ವರ್ಷ ಏ.1 ರಿಂದ ಪಂಚತಂತ್ರ ತಂತ್ರಾಂಶ 2.0 ಕಡ್ಡಾಯವಾಗಿ ಜಾರಿಗೆ ತರಲು ಆದೇಶ ಮಾಡಿದೆ. ಈಗ ಎಲ್ಲಾ ಗ್ರಾಪಂಗಳ ಸಿಬ್ಬಂದಿಗೆ ತರಬೇತಿ ಹಾಗೂ ತಾಂತ್ರಿಕ ಸಲಹೆ ನೀಡಲಾಗಿದೆ. ಹಿಂದೆ ಪಂಚತಂತ್ರ 1.0 ಇತ್ತು. ಆ ತಂತ್ರಾಂಶ ಪ್ರಕಾರ ಗ್ರಾಪಂಗಳಲ್ಲಿ ಮನೆ, ನೀರಿನ ತೆರಿಗೆ ಕಟ್ಟಿದವರಿಗೆ ಕೈಯಲ್ಲಿ ರಸೀದಿ ಬರೆದು ಕೊಡಲಾಗುತ್ತಿತ್ತು. ಈಗಿನ ಪಂಚತಂತ್ರ ತತ್ರಾಂಶ 2.0 ಬಂದ ನಂತರ ಕೈಯಲ್ಲಿ ರಸೀದಿ ನೀಡುವ ಪದ್ಧತಿ ರದ್ದಾಗಿದೆ. ಈ ವರ್ಷ ಏ.23 ರಿಂದ ಈ ತಂತ್ರಾಂಶ 2.0 ಕಡ್ಡಾಯವಾಗಿದೆ.

Bengaluru ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌! ಶೇ.5 ರಿಯಾಯಿತಿ ವಿಸ್ತರಣೆ ಸಾಧ್ಯತೆ

ಉಪಯೋಗವೇನು ?

ನಗರ ಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಇದ್ದಂತೆ ನೂತನ ಪಂಚತಂತ್ರ ತಂತ್ರಾಂಶ 2.0 ಪ್ರಕಾರ ಗ್ರಾಮೀಣ ಭಾಗದ ಜನರಿಗೆ ಹಲವು ರಿಯಾಯ್ತಿ ಸಿಗಲಿದೆ.

ಹಿಂದಿನ ತಂತ್ರಾಂಶದ ಪ್ರಕಾರ ಬಿಲ್‌ ಕಲೆಕ್ಟರ್‌ ಕೈಗೆ ಕಂದಾಯ ನೀಡಬೇಕಾಗಿತ್ತು. ಅವರೇ ರಸೀದಿ ಬರೆದು ಕೊಡುತ್ತಿದ್ದರು. ಈಗ ನಾವು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಕಂದಾಯ ಕಟ್ಟಿರಸೀದಿ ಪಡೆಯಬಹುದು. ಹೊಸ ತಂತ್ರಾಂಶದ ಪ್ರಕಾರ ಸೈನಿಕರು, ಮಾಜಿ ಸೈನಿಕರು, ವಿಧವೆ ( ಸೈನಿಕರ ಪತ್ನಿ)ಯರಿಗೆ ಕಂದಾಯದಲ್ಲಿ ಶೇ. 50 ರಷ್ಟುರಿಯಾಯ್ತಿ ನೀಡಲಾಗಿದೆ. ವಿಶೇಷ ಚೇತನರು, ಎಚ್‌ಐವಿ (ಏಡ್‌್ಸ) ಪೀಡಿತರು, ಕುಷ್ಠ ರೋಗಿಗಳು ಇರುವ ಮನೆಗಳಿಗೆ ಶೇ. 50 ರಷ್ಟುರಿಯಾಯ್ತಿ ಇದೆ. ಮಹಿಳಾ ಸ್ವಸಹಾಯ ಗುಂಪುಗಳು ಮನೆಯಲ್ಲಿ ಉದ್ಯಮ ನಡೆಸುತ್ತಿದ್ದರೆ ಆ ಕಟ್ಟಡಕ್ಕೆ ಶೇ.50 ರಷ್ಟುಕಂದಾಯ ರಿಯಾಯ್ತಿ. ಆರ್ಥಿಕ ವರ್ಷದ ಮೊದಲ 3 ತಿಂಗಳಾದ ಏಪ್ರಿಲ್‌, ಮೇ ಹಾಗೂ ಜೂನ್‌ 30 ರೊಳಗೆ ಕಂದಾಯ ಕಟ್ಟಿದರೆ ಶೇ.5 ರಷ್ಟುರಿಯಾಯ್ತಿ ಇದೆ. ಗ್ರಾಮೀಣ ಭಾಗದ ಜನರು ಹಸಿ ಕಸ ಸಂಸ್ಕರಣೆ, ಮಳೆ ನೀರು ಕೊಯ್ಲು ಮಾಡಿದರೆ ಅಂತಹ ಮನೆಗಳಿಗೆ ಶೇ.10 ರಷ್ಟುಕಂದಾಯ ರಿಯಾಯ್ತಿ ಇದೆ. ವಾಸದ ಮನೆಗಳಲ್ಲಿ ಗುಡಿ ಕೈಗಾರಿಕೆ, ಕೈಮಗ್ಗ, ಕೃಷಿ ಆಧಾರಿತ ಚಟುವಟಿಕೆ ನಡೆಸಿದರೆ ಅದನ್ನು ವಾಣಿಜ್ಯ ತೆರಿಗೆ ಎಂದು ಪರಿಗಣಿಸಬಾರದು.

ದಂಡ : ತೆರಿಗೆ ಮತ್ತು ದರ ಕಟ್ಟದಿದ್ದಲ್ಲಿ ದಂಡ ವಿಧಿಸಲು ಹೊಸ ತಂತ್ರಾಂಶದಲ್ಲಿ ಅವಕಾಶವಿದೆ. 1 ವರ್ಷ ಕಂದಾಯ ಬಾಕಿ ಇಟು ್ಟಕೊಂಡವರಿಗೆ ಶೇ.5 ರಷ್ಟುದಂಡ ವಿಧಿಸಲಾಗುತ್ತದೆ. 2 ವರ್ಷ ಕಳೆದ ಶೇ 10 ರಷ್ಟುದಂಡ ಕಟ್ಟಬೇಕಾಗುತ್ತದೆ.

Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ

ಪ್ರತಿ 2 ವರ್ಷಕ್ಕೊಮ್ಮೆ ಕಂದಾಯ ಪರಿಷ್ಕರಣೆ ಮಾಡಬೇಕಾಗುತ್ತದೆ. ಶೀಘ್ರದಲ್ಲೇ ಮ್ಯಾನ್ಯೂವಲ್‌ ನಮೂನೆ ಮೂಲಕ ಆಸ್ತಿ, ಆಸ್ತಿ ತೆರಿಗೆ ಸರ್ವೆ ಮಾಡಿ ಕಂದಾಯ ನಿಗದಿ ಮಾಡುತ್ತೇವೆ. ಆರ್ಥಿಕ ವರ್ಷದ 3 ತಿಂಗಳ ಒಳಗೆ ತೆರಿಗೆ ಕಟ್ಟಿದರೆ ಸಿಗುವ ಶೇ.5 ರಿಯಾಯ್ತಿಯನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು. ತೆರಿಗೆ ವಿನಾಯ್ತಿ ನೀಡಿ ಎಂದು ಗ್ರಾಮಸ್ಥರು ಹಿಂದೆ ಅರ್ಜಿ ನೀಡುತ್ತಿದ್ದರು. ಈಗಿರುವ ಕಾನೂನು ಪ್ರಕಾರ ತೆರಿಗೆ ರಿಯಾಯ್ತಿ ಬಂದಿದೆ.

ಎಸ್‌.ನಯನ, ತಾಪಂ ಸಿಇಒ, ನರಸಿಂಹರಾಜಪುರ

ಮುಂದಿನ ದಿನಗಳಲ್ಲಿ ಪಿಒಎಸ್‌ ಮಿಷನ್‌ ಬರಲಿದ್ದು ಇದರ ಮೂಲಕ ಮನೆ, ಮನೆಗೆ ಹೋಗಿ ಕಂದಾಯ ಕಟ್ಟಿಸಿಕೊಂಡು ರಸೀದಿ ನೀಡಲಾಗುತ್ತದೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌ಗಳಿಗೆ ಹೊಸ ತಂತ್ರಾಂಶ 2.0 ಬಗ್ಗೆ ತರಬೇತಿ ನೀಡಲಾಗಿದೆ. ಹಂತ ಹಂತವಾಗಿ ತಾಂತ್ರಿಕ ಸಮಸ್ಯೆ ಬಗೆ ಹರಿಸಲಾಗುತ್ತದೆ. ಗ್ರಾಮೀಣÜರು ತೆರಿಗೆ ಪದ್ಧತಿಯಲ್ಲಿ ಹೊಸ ತಂತ್ರಾಂಶದ ಪ್ರಯೋಜನ ಪಡೆದುಕೊಳ್ಳಬೇಕು.

ಮನೀಶ ಎನ್‌.ಎಲ್‌, ಸಹಾಯಕ ನಿರ್ದೇಶಕರು ( ಗ್ರಾಮೀಣ ಉದ್ಯೋಗ) ತಾಪಂ.